/newsfirstlive-kannada/media/media_files/2025/10/02/kanthara-cinema-release-2025-10-02-14-55-36.jpg)
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕಾಂತಾರ ಬಿಡುಗಡೆಯಾಗಿದೆ ಗೊತ್ತಾ?
ಇಂದು ಕಾಂತಾರ ಚಾಪ್ಟರ್ 1 ಇಂದು ಬೆಂಗಳೂರು ಸೇರಿದಂತೆ ರಾಜ್ಯಾದಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರಿನ ಎಲ್ಲಿ ಥಿಯೇಟರ್, ಮಾಲ್ ಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಇಂದು ಕಾಂತಾರ ಸಿನಿಮಾವೇ ಬಿಡುಗಡೆಯಾಗಿದೆ. ನಿಮ್ಮ ನಿಮ್ಮ ಏರಿಯಾಗಳಲ್ಲಿರುವ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಕಾಂತಾರ ಪ್ರದರ್ಶನಗೊಳ್ಳುತ್ತಿದೆಯೇ ಇಲ್ಲವೇ, ಸಿನಿಮಾ ನೋಡಲು ಯಾವಾಗ ಹೋಗೋದು ಎಂಬ ಚಿಂತೆ ಇದ್ದರೇ, ಇಲ್ಲಿದೆ ಮಾಹಿತಿ ನೋಡಿ. ಬೆಂಗಳೂರಿನ ಯಾವ ಯಾವ ಏರಿಯಾದ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಕಾಂತಾರ-1 ಬಿಡುಗಡೆಯಾಗಿದೆ ಎಂಬ ಮಾಹಿತಿ ಇಲ್ಲಿದೆ.
ಕಾಂತಾರ ಚಾಪ್ಟರ್ 1 ಅಬ್ಬರ ಬೆಂಗಳೂರನ್ನೇ ಕನ್ನಡಮಯವಾಗಿಸಿದೆ. ಒಂದು ಕಿರುನೋಟ ಇಲ್ಲಿದೆ:
ಕಾಂತಾರ ಚಾಪ್ಟರ್ 1 - ಕನ್ನಡದ ಸುನಾಮಿ 🤩
❇️ಬನ್ನೇರುಘಟ್ಟ ರಸ್ತೆಯ ಸಿನಿಪೊಲೀಸ್ ನಲ್ಲಿ 13 ಆಟಗಳು
❇️ಜಯನಗರ ಸ್ವಾಗತ್ ಗರುಡ ಮಾಲ್ ನಲ್ಲಿ 12 ಆಟಗಳು
❇️ಶಾಂತಿನಿಕೇತನ ಸಿನಿಪೊಲೀಸ್ ನಲ್ಲಿ 12 ಆಟಗಳು
❇️ಬಿನ್ನಿಪೇಟೆ ಸಿನಿಪೊಲೀಸ್ ನಲ್ಲಿ 16 ಆಟಗಳು
❇️ಜೆಪಿನಗರ ಸೆಂಟ್ರಲ್ ನಲ್ಲಿ 14 ಆಟಗಳು
❇️ಲುಲುಮಾಲ್ ಸಿನಿಪೊಲೀಸ್ ನಲ್ಲಿ 14 ಆಟಗಳು
❇️ಒರಿಯನ್ ಮಾಲ್ ನಲ್ಲಿ 33 ಆಟಗಳು
❇️ಕೋರಮಂಗಲ ಫೋರಮ್ ನಲ್ಲಿ 23 ಆಟಗಳು
❇️ಮೀನಾಕ್ಷಿ ಮಾಲ್ ಸಿನಿಪೊಲೀಸ್ ನಲ್ಲಿ 15 ಆಟಗಳು
❇️ಕನಕಪುರ ಫೋರಮ್ ನಲ್ಲಿ 34 ಆಟಗಳು
❇️ಮಾಲ್ ಆಫ್ ಏಷ್ಯಾ ನಲ್ಲಿ 29 ಆಟಗಳು
❇️ವೇಗಾಸಿಟಿ ಮಾಲ್ ನಲ್ಲಿ 28 ಆಟಗಳು
❇️ಫೀನಿಕ್ಸ್ ಮಾಲ್ ನಲ್ಲಿ 16 ಆಟಗಳು
❇️ಮಿರಾಜ್ ಸಿನಿಮಾಸ್ ನಲ್ಲಿ 22 ಆಟಗಳು
❇️ವಿ ಆರ್ ಬೆಂಗಳೂರಿನಲ್ಲಿ 18 ಆಟಗಳು
❇️ಭಾರತೀಯ ಮಾಲ್ ನಲ್ಲಿ 14 ಆಟಗಳು
❇️ಹಳೆ ಮದ್ರಾಸ್ ರಸ್ತೆ ಗೋಪಾಲನ್ ನಲ್ಲಿ 11 ಆಟಗಳು
❇️ಯಲಹಂಕ ಗಲೇರಿಯ ಮಾಲ್ ನಲ್ಲಿ 13 ಆಟಗಳು
❇️ಮಲ್ಲೇಶ್ವರ ಮಂತ್ರಿ ಮಾಲ್ ನಲ್ಲಿ 17 ಆಟಗಳು
❇️ಮೈಸೂರು ರಸ್ತೆ ಗೋಪಾಲನ್ ನಲ್ಲಿ 13 ಆಟಗಳು
❇️ಮೈಸೂರು ರಸ್ತೆ ಗ್ಲೊಬಲ್ ಮಾಲ್ ನಲ್ಲಿ 19 ಆಟಗಳು
❇️ಥಣಿಸಂದ್ರ ಪಿವಿಆರ್ ನಲ್ಲಿ 15 ಆಟಗಳು
❇️ಬನ್ನೇರುಘಟ್ಟ ರಸ್ತೆ ಗೋಪಾಲನ್ ನಲ್ಲಿ 8 ಆಟಗಳು
❇️ಬೆಳ್ಳಂದೂರ್ ಸೆಂಟ್ರಲ್ ಮಾಲ್ ನಲ್ಲಿ 12 ಆಟಗಳು
❇️ಮಾಗಡಿ ರಸ್ತೆ ಜಿಟಿ ಮಾಲ್ ನಲ್ಲಿ 18 ಆಟಗಳು
❇️ರಾಕ್ಲೈನ್ ಸಿನಿಮಾಸ್ ನಲ್ಲಿ 12 ಆಟಗಳು
❇️ಹಳೆ ಮದ್ರಾಸ್ ರಸ್ತೆ ಪಿವಿಆರ್ ನಲ್ಲಿ 11 ಆಟಗಳು
❇️ಯಶವಂತಪುರ ವೈಷ್ಣವಿ ಮಾಲ್ ನಲ್ಲಿ 20 ಆಟಗಳು
❇️ವೈಟ್ ಫೀಲ್ಡ್ ಐನಕ್ಸ್ ನಲ್ಲಿ 13 ಆಟಗಳು
❇️ಹಲಸೂರು ಐನಾಕ್ಸ್ ನಲ್ಲಿ 10 ಆಟಗಳು
❇️ಗರುಡ ಮಾಲ್ ನಲ್ಲಿ 15 ಆಟಗಳು
❇️ಎಲೆಕ್ಟ್ರಾನಿಕ್ ಸಿಟಿ ಐನೋಕ್ಸ್ ನಲ್ಲಿ 16 ಆಟಗಳು
❇️ವೈಟ್ ಫೀಲ್ಡ್ ಔರ ಪಾರ್ಕ್ ನಲ್ಲಿ 9 ಆಟಗಳು
❇️ಗರುಡ ಯಲಹಂಕ ದಲ್ಲಿ 13 ಆಟಗಳು
❇️ಆರ್ ಆರ್ ನಗರ ಮೂವಿಟೈಮ್ ಸಿನಿಮಾಸ್ ನಲ್ಲಿ 14 ಆಟಗಳು
❇️ಸಿರಸಿ ಸರ್ಕಲ್ ಗೋಪಾಲನ್ ನಲ್ಲಿ 14 ಆಟಗಳು
❇️ಎಸ್ ಬಿ ಆರ್ ಹೊರಿಸನ್ ನಲ್ಲಿ 13 ಆಟಗಳು
❇️ರಾಮಮೂರ್ತಿನಗರ ವಿ ಸಿನಿಮಾಸ್ ನಲ್ಲಿ 12 ಆಟಗಳು
❇️ರೆಕ್ಸ್ ಪಿವಿಆರ್ ನಲ್ಲಿ 9 ಆಟಗಳು
❇️ಬ್ರೂಕ್ ಫೀಲ್ಡ್ ಐನಾಕ್ಸ್ ನಲ್ಲಿ 7 ಆಟಗಳು
✳️ಜೊತೆಗೆ ಅನೇಕ ಸಿಂಗಲ್ ಸ್ಕ್ರೀನ್ ನಲ್ಲಿ ನೂರಾರು ಆಟಗಳು.
ಬೆಂಗಳೂರಿನಲ್ಲಿ ಇಷ್ಟೊಂದು ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡದ ಸಿನಿಮಾ ಕಾಂತಾರ ಬಿಡುಗಡೆಯಾಗಿರುವುದನ್ನು ನೋಡಿದರೇ, ಕನ್ನಡ ಸಿನಿಮಾಕ್ಕೆ ತನ್ನ ಗತವೈಭವ ಮತ್ತೆ ಮರುಕಳಿಸಿದೆಯೇ ಎಂಬ ಭಾವನೆ ಮೂಡಿದೆ. ಡಾ.ರಾಜ್ ಕುಮಾರ್ ಕಾಲದಲ್ಲಿ ಸಿನಿಮಾ ನೋಡಲು ಜನ ಮುಗಿಬೀಳುತ್ತಿದ್ದರು. ರಾಘವೇಂದ್ರ ರಾಜ್ ಕುಮಾರ್ ನಟನೆಯ ನಂಜುಂಡಿ ಕಲ್ಯಾಣ ಸಿನಿಮಾಗೆ ಜನರು ಹಳ್ಳಿಗಳಲ್ಲಿ ಟೆಂಟ್ ಗಳಿಗೆ ಎತ್ತಿನಗಾಡಿಯನ್ನು ಕಟ್ಟಿಕೊಂಡು ಬರುತ್ತಿದ್ದ ಕಾಲವೂ ಇತ್ತು . ಈಗ ಕನ್ನಡ ಸಿನಿಮಾಗಳನ್ನು ನೋಡಲು ಜನರು ಥಿಯೇಟರ್ ಗೆ ಬರುತ್ತಿಲ್ಲ ಎಂಬ ನೋವಿನ ಮಧ್ಯೆ ಕಾಂತಾರ ಜನರನ್ನು ಥಿಯೇಟರ್, ಮಲ್ಟಿಪ್ಲೆಕ್ಸ್ ನತ್ತ ಬರುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.