ನಮ್ಮ ಹೋರಾಟ ಯಾರಿಗೂ ಅರ್ಥ ಆಗುತ್ತಿಲ್ಲ -ಅನಿರುದ್ಧ್ ಫಸ್ಟ್ ರಿಯಾಕ್ಷನ್

ವಿಷ್ಣು ಸಮಾಧಿ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ ವಿಷ್ಣು ಅಳಿಯ ಅನಿರುದ್ದ್ ಮಾತನಾಡಿದ್ದಾರೆ. ತುಂಬಾ ಅಂದ್ರೆ ತುಂಬಾ ನೋವು ಆಗಿದೆ. ಪದಗಳಲ್ಲಿ ವರ್ಣಿಸಲು ಸಾಧ್ಯ ಆಗುತ್ತಿಲ್ಲ. ಆ ಜಾಗದ ಬಗ್ಗೆ ಸಾಕಷ್ಟು ಗೌರವ ಇತ್ತು, ಭಾವನಾತ್ಮಕ ನಂಟು ಇತ್ತು. ಈ ಪುಣ್ಯಭೂಮಿ ಹಾಗೇ ಇರಲಿ ಅಂತ ಕೇಳಿಕೊಂಡಿದ್ದೆ ಎಂದರು.

author-image
Ganesh
Advertisment

ವಿಷ್ಣು ಸಮಾಧಿ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ ವಿಷ್ಣು ಅಳಿಯ ಅನಿರುದ್ದ್ ಮಾತನಾಡಿದ್ದಾರೆ. ತುಂಬಾ ಅಂದ್ರೆ ತುಂಬಾ ನೋವು ಆಗಿದೆ. ಪದಗಳಲ್ಲಿ ವರ್ಣಿಸಲು ಸಾಧ್ಯ ಆಗುತ್ತಿಲ್ಲ. ಆ ಜಾಗದ ಬಗ್ಗೆ ಸಾಕಷ್ಟು ಗೌರವ ಇತ್ತು, ಭಾವನಾತ್ಮಕ ನಂಟು ಇತ್ತು. ಈ ಪುಣ್ಯಭೂಮಿ ಹಾಗೇ ಇರಲಿ ಅಂತ ಕೇಳಿಕೊಂಡಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಹೋರಾಟ ಯಾರಿಗೂ ಅರ್ಥ ಆಗುತ್ತಿಲ್ಲ. ನಮ್ಮ ವಿರುದ್ಧ ಬೇಕಂತ ಹೀಗೆಲ್ಲ ಮಾಡ್ತಾರೆ. ನಮ್ಮ ಗಮನಕ್ಕೆ ಬಾರದೇ ಸಮಾಧಿ ತೆರವು ಮಾಡಿದ್ದಾರೆ. ನಮ್ಮ ಮತ್ತು ಅಭಿಮಾನಿಗಳ ನಡುವೆ ಕಾಣದ ಕೈ ಕೆಲಸ ಮಾಡುತ್ತಿವೆ ಅಂತ ಆರೋಪಿಸಿದ್ದಾರೆ.

ನಮ್ಮ ವಿರುದ್ಧ ಬೇಕಂತ ಹೀಗೆಲ್ಲ ಮಾಡುತ್ತಾರೆ. ನಮ್ಮ ಗಮನಕ್ಕೆ ಬಾರದೇ ಸಮಾಧಿ ತೆರವು ಮಾಡಿದ್ದಾರೆ. ನಮಗೆ ವಿಷಯ ಗೊತ್ತೇ ಇಲ್ಲ. ಅಭಿಮಾನಿಗಳ ವಿರುದ್ಧ ನಾವಿಲ್ಲ. ಸುಮ್ಮನೆ ಆರೋಪ ಮಾಡಿ ಹೀರೋಗಳು ಆಗೋಕೆ ಪ್ರಯತ್ನ ಮಾಡ್ತಿದ್ದಾರೆ. ನಿಮಗೆಷ್ಟು ಪ್ರೀತಿ ಇದಿಯೋ, ನಮಗೆ ಅಪ್ಪವರು ಅನ್ನೋ ಪ್ರೀತಿ ಇದೆ. ಐದು ಎಕರೆ ಜಾಗದಲ್ಲಿ ಸ್ಮಾರಕ ಮಾಡಿದ್ದೇವೆ. ನಾನು, ಅಮ್ಮ ಎಷ್ಟು ಕಚೇರಿಗಳಿಗೆ ಅಲೆದಿದ್ದೇವೆ  ಗೊತ್ತಾ ನಿಮಗೆ? ಯಾಕೆ ನೀವುಗಳು ನಮ್ಮ ಜೊತೆ ಸೇರಿಕೊಳ್ಳುತ್ತಿಲ್ಲ? ನಮ್ಮ ಮತ್ತು ಅಭಿಮಾನಿಗಳ ನಡುವೆ ಕಾಣದ ಕೈ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ದೇಗುಲ ಒಡೆದಾಗ ಎಷ್ಟು ನೋವಾಗುತ್ತೋ ಅಷ್ಟೇ ಸಂಕಟ ಆಗಿದೆ - ಕಿಚ್ಚ ಸುದೀಪ್ ಭಾವುಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

kiccha sudeep Vishnuvardhan
Advertisment