ಸ್ಟಾರ್ ನಿರೂಪಕಿ ಅನುಶ್ರೀ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ರೋಷನ್ ಅವರು ಅನುಶ್ರೀ ಕೊರಳಿಗೆ ತಾಳಿ ಕಟ್ಟಿದ್ದಾರೆ.
ಮದುವೆ ಬೆನ್ನಲ್ಲೇ ಜೋಡಿ ಮಾಧ್ಯಮಗಳೊಂದಿಗೆ ಮಾತಿಗೆ ಇಳಿದಿತ್ತು. ಈ ವೇಳೆ ಇಬ್ಬರೂ ಮುಕ್ತವಾಗಿ ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ಮಾತನಾಡಿದ ರೋಷನ್.. ಐದು ವರ್ಷದಿಂದ ಅನು ನನಗೆ ಪರಿಚಯ. ಕಳೆದ ಮೂರು ವರ್ಷಗಳಿಂದ ಅನು ನನಗೆ ತುಂಬಾ ಕ್ಲೋಸ್ ಇದ್ದಾಳೆ. ಅವಳು ತುಂಬಾ ಸಿಂಪಲ್ ಗರ್ಲ್. ಅವಳು ನನಗೆ ಯಾವತ್ತೂ ಸೆಲೆಬ್ರಿಟಿ ಅನಿಸಲಿಲ್ಲ. ನಾನು ಚೆನ್ನಾಗಿ ಅಡುಗೆ ಮಾಡ್ತೀನಿ. ಅವಳು ಚೆನ್ನಾಗಿ ತಿಂತಾಳೆ. ಅವಳು ಇಷ್ಟ ಪಡುತ್ತಾಳೆ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಅನುಶ್ರೀ ಜೋರಾಗಿ ನಕ್ಕಿದ್ದಾರೆ.
ಇದನ್ನೂ ಓದಿ:‘ಅಪ್ಪು ಸರ್ ನಮ್ಮನ್ನು ಸೇರಿಸಿದ್ದು’.. ರೋಷನ್ ಜೊತೆಗಿನ್ ಲವ್ ಬಗ್ಗೆ ಗುಟ್ಟು ಬಿಚ್ಚಿಟ್ಟ ಅನುಶ್ರೀ
ಇನ್ನು ಅನುಶ್ರೀ ಮಾತನಾಡಿ.. ಮದುವೆ ಬಹಳ ಸುಂದರ ಸರಳವಾಗಿ ನಡೆದಿದೆ. ಬಹಳ ಕಡಿಮೆ ಜನರ ಜೊತೆಗೆ ಮದುವೆ ಆಗಬೇಕು ಅನ್ನೋದಾಗಿತ್ತು ನಮ್ಮ ಆಸೆ. ನಿಮ್ಮೆಲ್ಲರ ಪ್ರೀತಿ ಸಪೋರ್ಟ್ಗೆ ಥ್ಯಾಂಕ್ಸ್. ಯಾರು ಹೇಳಿದ್ರೂ ನಮ್ ಲವ್ ಸ್ಟೋರಿ ಬಗ್ಗೆ ನಂಬುತ್ತಿರಲಿಲ್ಲ. ಇಬ್ಬರು ಫ್ರೆಂಡ್ಸ್ ಆದ್ವಿ, ಕಾಫಿಗೆ ಹೋಗಿದ್ವಿ. ಲವ್ ಮಾಡಿ, ಮದುವೆ ಆದ್ವಿ. ಪುನೀತ ಪರ್ವದಲ್ಲಿ ಪರಿಚಯ ಆಯ್ತು, ಅಪ್ಪು ಸರ್ ಅವರೇ ನಮ್ಮ ಇಬ್ಬರನ್ನೂ ಸೇರಿಸಿದಂಗಾಯ್ತು. ರೋಷನ್ ನಾನು ಲೈಫ್ ಸಿಂಪಲ್ ಆಗಿ ನೋಡ್ತೀವಿ. ಚಿಕ್ಕ ಚಿಕ್ಕ ವಿಷಯಗಳನ್ನು ಸೆಲೆಬ್ರೇಟ್ ಮಾಡ್ತೀವಿ. ಅವರಿಗೆ ಸಹಾಯ ಮಾಡುವ ಗುಣ ಇದೆ. ಅಪ್ಪು ಸರ್ ಇರುವಿಕೆಯಲ್ಲಿ ನಮ್ಮ ಮದುವೆ ಆಗಿದೆ. ಅವರ ಫೋಟೋ ಕೂಡ ನಮ್ಮ ಮದುವೆ ಮಂಟಪ ಜಾಗದಲ್ಲಿ ಇಟ್ಟಿದ್ದೀವಿ. ಶಿವಣ್ಣ, ಗೀತಕ್ಕ ಸೇರಿದಂತೆ ಹಲವರು ಬಂದು ಆಶೀರ್ವಾದ ಮಾಡಿದ್ದಾರೆ. ಶಿವಣ್ಣ ರೋಷನ್ ಅವರನ್ನ ಮುಂಚೆಯೇ ನೋಡಿದ್ರು. ಇಬ್ಬರು ಒಟ್ಟಿಗೆ ಶಬರಿಮಲೆಗೆ ಹೋಗಿದ್ದರು. ರಚಿತಾ ಅವ್ರು ನಮ್ಮ ಮದುವೆಗೆ ಬಂದಿದ್ದು ಸಾಕಷ್ಟು ಖುಷಿ ಕೊಟ್ಟಿದೆ. ಮದುವೆ ಒಂದು ಜೀವನದ ಚಿಕ್ಕ ಭಾಗ. ಕೆಲಸ ನಮಗೆ ಬಹಳ ಮುಖ್ಯ. ಸರಳ ವಿವಾಹ ನಮಗೆ ಸಾಕಷ್ಟು ಖುಷಿ ಕೊಟ್ಟಿದೆ. ನನಗೆ ಮಂತ್ರ ಮಾಂಗಲ್ಯ ಆಗಲು ಬಹಳ ಇಷ್ಟ ಇತ್ತು. ಆದ್ರೆ ಅದರದ್ದು ಕೆಲವೊಂದು ರೂಲ್ಸ್ ಇದೆ ಆಗಾಗಿ ಕಷ್ಟ ಆಯ್ತು. ಮದುವೆ ಅನ್ನೋದು ಒಂದು ಹೆಣ್ಣಿನ ಬಹಳ ದೊಡ್ಡ ಕನಸು. ನಾವು ಮದುವೆ ಹೇಗೆ ಆಗ್ತೀವಿ ಅನ್ನೋದು ಮುಖ್ಯ ಅಲ್ಲ. ಮದುವೆ ಬಳಿಕ ಹೇಗೆ ಬದುಕ್ತೀವಿ ಅನ್ನೋದು ಮುಖ್ಯ. ಅವರು ಕೋಟ್ಯಾಧಿಪತಿ ಅಂತಲ್ಲ.. ಸಿಂಪಲ್ ಹುಡುಗ. ರೋಷನ್ ಬಿರಿಯಾನಿ, ಫಿಶ್ ಫ್ರೈ ಸಖತ್ ಆಗಿ ಮಾಡ್ತಾರೆ ಎಂದರು.
ಇದನ್ನೂ ಓದಿ: ನಿರೂಪಕಿ ಅನುಶ್ರೀ ಅದ್ಧೂರಿ ಕಲ್ಯಾಣ.. ಇಲ್ಲಿದೆ ಮದುವೆ ಫೋಟೋಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ