ನಟಿ ಆಗಬೇಕು ಎಂದು ಆಸೆ ಇದೆ. ಯಾವುದಾದರೂ ಓಕೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಇದೆ. ಸೈಡ್ ರೋಲ್ ಆದರೂ ಪರವಾಗಿಲ್ಲ ಯಶ್ ಅವರ ಜೊತೆ ಆ್ಯಕ್ಟ್ ಮಾಡಬೇಕು. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಆಸೆ ಇದ್ದೇ ಇದೆ. ಚಾನ್ಸ್ ಸಿಕ್ಕರೇ ಹೋಗುತ್ತೇನೆ ಎಂದು ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ’ ಹಾಡು ಹಾಡಿ ವೈರಲ್ ಆದ ಯುವತಿ ನಿತ್ಯಾಶ್ರೀ ಹೇಳಿದ್ದಾರೆ.
ಮೊದಲು ನಾನು ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಗುರುತಿಸಿಕೊಂಡು ಮೇಡಂ ನೀವು ಅಲ್ವಾ ಸಾಂಗ್ ಹಾಡಿದ್ದು ಸೆಲ್ಫಿ ಕೊಡಿ ಎಂದು ಕೇಳಿದಾಗ ಫ್ರೌಡ್ ಫೀಲ್ ಆಗುತ್ತದೆ. ಇದನ್ನು ನೋಡಿದಾಗ ಇನ್ನು ಎತ್ತರಕ್ಕೆ ಬೆಳೆಯಬೇಕು ಎನಿಸುತ್ತದೆ. ಆ್ಯಕ್ಟಿಂಗ್ನಲ್ಲಿ ಚಾನ್ಸ್ ಸಿಗಬೇಕು ಎಂದು ಕೇಳಿಕೊಳ್ಳುತ್ತೇನೆ. ಏಕೆಂದರೆ ನಟನೆ ನನಗೆ ಇಷ್ಟ. ಎಲ್ಲರಿಗೂ ಚಾನ್ಸ್ ಕೊಟ್ಟ ಮೇಲೆ ನನಗೆ ಕೊಡಿ ಎಂದು ನಿತ್ಯಾಶ್ರೀ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ