/newsfirstlive-kannada/media/media_files/2026/01/09/toxic-cinema-and-k-manju-predictions-2026-01-09-12-23-26.jpg)
ಯಶ್‌ಗೆ ಗಜ ಕೇಸರಿ ಯೋಗ ಇದೆ ಎಂದ ಕೆ.ಮಂಜು
ಯಶ್'ಗೆ ಗಜ ಕೇಸರಿ ಯೋಗ ಇದೆ. ಇನ್ನೂ ಮುಂದಿನ 32 ವರ್ಷ ಯಶ್ ನನ್ನು ಯಾರೂ ಕೂಡ ಟಚ್ ಮಾಡೋಕೆ ಆಗಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ನಿರ್ಮಾಪಕ ಕೆ.ಮಂಜು ಅಭಿಮಾನ, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವನ ಯೋಚನೆನೇ ದೊಡ್ಡದು. ಯಾವಾಗಲೂ ನುಗ್ಗಿ ಹೊಡೆಯೋ ಹೀರೋ ಅವನು. ಅವನಿಗೆ ಗಜ ಕೇಸರಿ ಯೋಗ ನಡೀತಿದೆ. ಇನ್ನೂ 32 ವರ್ಷ ಅವನನ್ನು ಯಾರೂ ಟಚ್ ಮಾಡೋಕೆ ಆಗಲ್ಲ. ಟಾಕ್ಸಿಕ್ ಸಾವಿರಾರು ಕೋಟಿ ಮಾಡೋದರಲ್ಲಿ ಡೌಟೇ ಇಲ್ಲ. ಯಶ್ ಒಳ್ಳೆಯ ಹುಡುಗ. ಯಾವತ್ತೂ ಯಾರ ಬಗ್ಗೆನೂ ಕೆಟ್ಟದಾಗಿ ಮಾತಾಡುವವನಲ್ಲ. ಯಶ್ ನೋಡಿ ಎಲ್ಲಾ ಹೀರೋಗಳು ಕಲಿಯಬೇಕು. ಯಶ್ ಥರಾ ಎಲ್ಲರೂ ಜವಾಬ್ದಾರಿ ಕಲಿಯಬೇಕು. ಎಲ್ಲಿಯೇ ಹೋದರೂ ಯಶ್ ಕನ್ನಡತನ ಬಿಟ್ಟು ಕೊಡುವುದಿಲ್ಲ. ಇದಷ್ಟೇ ಅಲ್ಲ.. ಮುಂದೆ ಯಶ್ ಗೆ ದೊಡ್ಡ ಪ್ಲಾನಿಂಗ್ಸ್ ಇದೆ..ಯಶ್ ಪ್ಯಾನ್ ವರ್ಲ್ಡ್ ಹೀರೋ ಆಗಿದ್ದಾನೆ. ಅವನ ಧೈರ್ಯ ನಾನು ನೋಡಿ ಕಲಿಯಬೇಕು ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
ಶಿವರಾಜ್ ಕುಮಾರ್, ರವಿಚಂದ್ರನ್ ಲೀಡರ್ ಗಳಾಗಬೇಕು-ಕೆ.ಮಂಜು
ಇನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಲೀಡರ್ ಗಳಾಗಬೇಕು. ಕೆಲ ಮಧ್ಯವರ್ತಿಗಳಿಂದ ಕನ್ನಡ ಸಿನಿಮಾ ಇಂಡಸ್ಟ್ರಿ ಹಾಳಾಗುತ್ತಿದೆ ಎಂದು ಕನ್ನಡ ಸಿನಿಮಾ ಇಂಡಸ್ಟ್ರಿಯ ದುಸ್ಥಿತಿಗೆ ನಿರ್ಮಾಪಕ ಕೆ.ಮಂಜು ಕಿಡಿಕಾರಿದ್ದಾರೆ.
ಇವತ್ತಿನ ಕನ್ನಡ ಇಂಡಸ್ಟ್ರಿ ನೋಡುತ್ತಿದ್ದರೇ. ಬೇಸರ ಆಗುತ್ತಿದೆ. ಇಂಡಸ್ಟ್ರಿ ಉಳಿಸಿಕೊಳ್ಳುವ ಕೆಲಸ ಆಗಬೇಕು. ಇಲ್ಲಾಂದ್ರೆ ಇಂಡಸ್ಟ್ರಿ ಕಥೆ ಮುಗಿದು ಹೋಗುತ್ತೆ. ಈಗಲೇ ತಪ್ಪು ಸರಿ ಪಡಿಸಿಕೊಳ್ಳದಿದ್ರೆ.. ಇಂಡಸ್ಟ್ರಿ ಬಾಗಿಲು ಹಾಕೋದು ಗ್ಯಾರಂಟಿ. ಯಾರ್ ಯಾರೋ ಮಿಂ**ಗಳಿಂದ ಇಂಡಸ್ಟ್ರಿ.. ಈ ಸ್ಥಿತಿಗೆ ತಲುಪಿದೆ. ಸಿನಿಮಾಗೆ ಇನ್ವೆಸ್ಟ್ ಮಾಡೋಕೆ ತುಂಬಾ ಜನ ಬರುತ್ತಿದ್ದಾರೆ. ಆದ್ರೆ ಅದು ಸರಿಯಾದ ಮಾರ್ಗದಲ್ಲಿ ಆಗುತ್ತಿಲ್ಲ. ಕೆಲ ಮಧ್ಯವರ್ತಿಗಳಿಂದ ಇಂಡಸ್ಟ್ರಿ ಹಾಳಾಗ್ತಿದೆ. ಶಿವಣ್ಣ ಹಾಗೂ ರವಿಚಂದ್ರನ್ ಥರಾ ಸೀನಿಯರ್ಸ್ ನಾಯಕತ್ವ ವಹಿಸಿಕೊಳ್ಳಬೇಕು ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ. ಈ ಮೂಲಕ ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರದ್ದೇ ನಾಯಕತ್ವ ಇಲ್ಲ ಎಂಬುದನ್ನು ನೇರವಾಗಿ ಕೆ.ಮಂಜು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us