ಮಗನ ಜೊತೆಗೆ ಗಣೇಶ ಹಬ್ಬ ಆಚರಿಸಿದ ಸ್ಯಾಂಡಲ್​ವುಡ್​ ನಟಿ ಮಯೂರಿ; VIDEO

author-image
Veenashree Gangani
kannada Actress mayuri
Advertisment

ಇಂದು ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆ ಮನಗಳಲ್ಲೂ ವಿಘ್ನ ನಿವಾರಕನ ಆರಾಧನೆ ಜೋರಾಗಿದ್ದು, ಬೆಂಗಳೂರಿನ ದೊಡ್ಡ ಗಣೇಶ ದೇಗುಲದಲ್ಲಿ ಹಬ್ಬರ ಸಡಗರ ಕಳೆಗಟ್ಟಿದೆ.

ಇದನ್ನೂ ಓದಿ: ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ.. ವಿಘ್ನ ನಿವಾರಕನ ಪ್ರತಿಷ್ಠಾಪನೆ ಸಡಗರ ಜೋರು

kannada Actress mayuri(1)

ಮತ್ತೊಂದು ಕಡೆ ಸ್ಯಾಂಡಲ್​ವುಡ್​ ಸ್ಟಾರ್ ನಟಿ ಮಯೂರಿ ಕ್ಯಾತರಿ ತಮ್ಮ ಮುದ್ದು ಮಗನ ಜೊತೆಗೆ ಗೌರಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಇದೇ ವಿಡಿಯೋವನ್ನು ನಟಿ ಮಯೂರಿ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. 

ಸುಂದರವಾದ ವಿಡಿಯೋ ಜೊತೆಗೆ ಶುಭ ಗಣೇಶ ಹಬ್ಬದ ಶುಭಾಶಯಗಳು. ವಿಘ್ನವಿನಾಶಕನ ಆಶೀರ್ವಾದ ನಿಮ್ಮೆಲ್ಲರ ಬದುಕಿಗೆ ಶಾಂತಿ, ಸಂತೋಷ ಮತ್ತು ಸಮೃದ್ಧಿ ತರಲಿ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ganesh festival, ganesh chaturthi, ಗಣೇಶ್​ ಹಬ್ಬ
Advertisment