/newsfirstlive-kannada/media/media_files/2025/12/11/devil-darshan-2025-12-11-10-44-16.jpg)
/newsfirstlive-kannada/media/media_files/2025/12/11/devil-darshan-7-2025-12-11-10-44-36.jpg)
ಡೆವಿಲ್ ಜಾತ್ರೆ..!
ನಟ ದರ್ಶನ್ಗೆ ದಿ ಡೆವಿಲ್ ಮೂವಿ ತುಂಬಾ ಸ್ಪೆಷಲ್. ಹಾಗೆ ಫ್ಯೂಚರ್ ಕೂಡ. ಯಾಕಂದ್ರೆ ದರ್ಶನ್ ಈಗ ಜೈಲಲ್ಲಿದಾರೆ.. ರೇಣುಕಾಸ್ವಾಮಿ ಕೇಸಲ್ಲಿ ಎರಡನೇ ಬಾರಿ ಜೈಲು ಸೇರಿರೋ ದರ್ಶನ್, ಡೆವಿಲ್ ಸಿನಿಮಾದ ಸಂಭ್ರಮ ನೋಡೋಕೆ ಆಗ್ತಿಲ್ಲ. ಹಾಗೆ ಸಿನಿಮಾ ಪ್ರೊಮೋಷನ್ಗೂ ಕಾಣಿಸಿಕೊಳ್ಳೋಕೆ ಆಗ್ಲಿಲ್ಲ. ಬಟ್ ಆಗ ಸಾರಥಿ ಮೂವಿ ದರ್ಶನ್ ಕ್ರೇಜ್ ಕಡಿಮೆಯಾಗಿಲ್ಲ ಅಂತ ಪ್ರೂವ್ ಮಾಡಿತ್ತು. ಈಗ ದರ್ಶನ್ಗೆ ಡೆವಿಲ್ ಮತ್ತೆ ಪೂರ್ವವೈಭವ ಕೊಡುತ್ತಾ? ಈ ಪ್ರಶ್ನೆಗೆ ಉತ್ತರವನ್ನ ನಟನ ಸೆಲೆಬ್ರಿಟಿಸ್ ಪ್ರೂವ್ ಮಾಡೋ ಪ್ರಯತ್ನದಲ್ಲಿದಾರೆ.
/newsfirstlive-kannada/media/media_files/2025/12/11/devil-darshan-6-2025-12-11-10-45-07.jpg)
ಹಬ್ಬ ಮಾಡ್ತಿರುವ ಫ್ಯಾನ್ಸ್
ದರ್ಶನ್ ಜೈಲಲ್ಲಿದ್ರೂ, ಪ್ರೊಮೊಷನ್ಗೆ ಸುತ್ತಾಡದೇ ಇದ್ರೂ, ತನ್ನ ಸೆಲೆಬ್ರಿಟೀಸ್ ಮೇಲೆ ನಂಬಿಕೆಯಂತೂ ಇಟ್ಕೊಂಡಿದಾರೆ. ಯಾಕಂದ್ರೆ ಅವ್ರೇ ನಟನ ಶಕ್ತಿ. ಇಂಥಾ ಒಂದು ಹಬ್ಬದ ದಿನ ನಟ ಜೊತೆಗಿಲ್ಲ ಅನ್ನೋದು ಬಿಟ್ಟರೇ, ನಟನಿಲ್ಲದ ಕೊರತೆಯನ್ನ ಎಲ್ಲೂ ಕಾಣದಂತೆ ಮಾಡಿದ್ರು ಫ್ಯಾನ್ಸ್.
/newsfirstlive-kannada/media/media_files/2025/12/11/devil-darshan-5-2025-12-11-10-45-42.jpg)
ಥಿಯೇಟರ್ಗೆ ಕಳೆ ಕೊಟ್ಟ ಫ್ಯಾನ್ಸ್
ಸಿನಿಮಾ ಹಾಲ್ಗಳ ಮುಂದೆ ಬ್ಯಾನೆರ್ಗಳನ್ನ ಕಟ್ತಾ.. ಫ್ಲ್ಯಾಗ್ಗಳನ್ನ ಹಿಡಿದು.. ಪೋಸ್ಟರ್ಸ್ಗೆ ಹಾಲು ಸುರಿಯುತ್ತಾ, ಹಾರ ಹಾಕ್ತಾ ಡಿ ಬಾಸ್ ಅನ್ನೋ ನಿನಾದಗಳಿಂದ. ಪ್ಯಾನ್ಸ್ ಮಾಡಿದ್ದು ಮಾಮೂಲಿ ಹಬ್ಬವಲ್ಲ. ಇದು ಡೆವಿಲ್ ಹಚ್ಚಿದ ಕಿಚ್ಚಿನ ಹಬ್ಬ ಅಂತ ತೋರಿಸ್ತಿದಾರೆ. ಇದು ಕೇವಲ ಬೆಂಗಳೂರಲ್ಲಷ್ಟೇಯಲ್ಲ. ಇಡೀ ರಾಜ್ಯದ ದರ್ಶನ್ ಫ್ಯಾನ್ಸ್.. ಥಿಯೆಟರ್ಸ್ ಮುಂದೆ ಡೆವಿಲ್ ಜಾತ್ರೆಯನ್ನೇ ನಡೆಸಿಬಿಡ್ತಿದ್ದಾರೆ.
/newsfirstlive-kannada/media/media_files/2025/12/11/devil-darshan-4-2025-12-11-10-46-15.jpg)
‘ಸಾರಥಿ’ಯಂತೆ ‘ಡೆವಿಲ್’ ?
ಡೆವಿಲ್ನ ಟೈಟಲ್ ಅನೌನ್ಸ್ನಿಂದ ಹಿಡಿದು, ಟೀಸರ್, ಟ್ರೈಲರ್, ಸಾಂಗ್ಸ್ ಎಲ್ಲಾವೂ ಸಖತ್ ಕ್ರೇಜ್ ಹುಟ್ಟಿಸಿದ್ದಂತೂ ಸುಳ್ಳಲ್ಲ. ಟೀಸರ್ನಲ್ಲಿ ಡೆವಿಲ್ ಅಂತ ದರ್ಶನ್ ಎಂಟ್ರಿ ಕೊಟ್ಟಿದ್ರೆ. ಟ್ರೈಲರ್ನಲ್ಲಿ ತುಂಬಾ ಇನ್ಫಾರ್ಮೇಷನ್ ಕೊಟ್ಟಂತಿತ್ತು. ಫ್ಯಾನ್ಸ್ಗೆ ನಟ ಇಂಡೈರೆಕ್ಟಾಗಿ ಜೈಲಿಂದ ಬರ್ತೀನಿ ಅನ್ನೋ ಮೆಸೆಜ್ ಕೊಟ್ಟಂತಿತ್ತು.
/newsfirstlive-kannada/media/media_files/2025/12/11/devil-darshan-8-2025-12-11-10-47-32.jpg)
ಮಲ್ಟಿಪ್ಲೆಕ್ಸ್ಗಳಲ್ಲಿ ‘ಡೆವಿಲ್’ ಕೂತ ಚೇರ್!
ನಿಮ್ಗೆಲ್ಲಾ ಗೊತ್ತಿದ್ದಂತೆ ದರ್ಶನ್ ಶಕ್ತಿ ಮಾತೆಯ ಭಕ್ತ.. ಚಾಮುಂಡೇಶ್ವರಿ ದೇವಿ ಅಂದ್ರೆ ದರ್ಶನ್ಗೆ ಪ್ರಿಯ. ಹಾಗಾಗಿ ನಟ ಜೈಲಲ್ಲಿ ದೇವಿಯನ್ನ ಜಪಿಸ್ತಿದ್ರೆ.. ಇಲ್ಲಿ ಫ್ಯಾನ್ಸ್ ಚಾಮುಂಡಿ ತಾಯಿಯನ್ನ ಥಿಯೆಟರ್ ಮುಂದೆ ತಂದು ಜಾತ್ರೆ ನಡೆಸಿದ್ದಾರೆ.
/newsfirstlive-kannada/media/media_files/2025/12/11/devil-movie-2025-12-11-10-48-24.jpg)
ಥಿಯೇಟರ್ನಲ್ಲಿ ಹುಚ್ಚೆದ್ದು ಕುಣಿದ ಫ್ಯಾನ್ಸ್
ಡೆವಿಲ್ ಮೂವಿಯ ಫೀವರ್ ಯಾವ ಮಟ್ಟಕ್ಕಿದೆ ಅಂದ್ರೆ.. ಫ್ಯಾನ್ಸ್ನಲ್ಲಿ ಕಾತುರವನ್ನ ಹೆಚ್ಚಿಸುವಷ್ಟು.. ಯಾವ್ಯಾಗವ್ಯಾಗ ಮೂವಿ ನೋಡ್ತೀವೋ ಅನ್ನೋ ಆತುರ ಹೆಚ್ಚಿಸುವಷ್ಟು.. ನಟ ಜೈಲಲ್ಲಿದ್ರೂ.. ಈ ಸಿನಿಮಾ ಗೆಲ್ಲಿಸಿ.. ಜೈಲಲ್ಲಿದ್ರೂ ಇದ್ರೆ ನೆಮ್ದಿಯಾಗಿರ್ಬೇಕ್ ಅನ್ನುವಂತೆ ಮಾಡುವಷ್ಟು. ಇದೆಲ್ಲಾ ಥಿಯೆಟರ್ಸ್ ಕಲರವ ಆದ್ರೆ.. ಕೆಲ ಮಾಲ್ಗಳಲ್ಲಿ ದರ್ಶನ್ ಕೂತಿದ್ದ ಡೆವಿಲ್ ಚೇರ್ ಇಡ್ಲಾಗಿದೆ.. ಇಡೀ ಮೂವಿ ಲವರ್ಸ್ಗೆ ಈ ಚೇರ್ ಆಕರ್ಷಿಸಿದೆ. ಒಟ್ನಲ್ಲಿ ಡೆವಿಲ್ ಸಿನಿಮಾ ರಿಲೀಸ್ ಆಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us