Advertisment

ಕಾಂತಾರ-1 ಸಿನಿಮಾದಿಂದ ಒಂದೇ ವಾರದಲ್ಲಿ 500 ಕೋಟಿ ರೂ. ಗಳಿಕೆ : ಕೆಜಿಎಫ್‌ ಸಿನಿಮಾದ ದಾಖಲೆ ಮುರಿದ ಕಾಂತಾರ-1 ಸಿನಿಮಾ

ಕಾಂತಾರ-1 ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿಗಿಂತ ಹೆಚ್ಚಿನ ಗಳಿಕೆ ಕಂಡಿದೆ. ಒಂದು ವಾರದಲ್ಲೇ 509 ಕೋಟಿ ರೂಪಾಯಿ ಗಳಿಕೆ ಕಂಡು ಹೊಸ ದಾಖಲೆ ನಿರ್ಮಿಸಿದೆ. ಕೆಜಿಎಫ್‌ ಸಿನಿಮಾದ ದಾಖಲೆಯನ್ನು ಮುರಿದಿದೆ.

author-image
Chandramohan
KANTHARA -1 COLLECTION

ಕಾಂತಾರ-1 ಸಿನಿಮಾದಿಂದ 509 ಕೋಟಿ ರೂ. ಗಳಿಕೆ

Advertisment
  • ಕಾಂತಾರ-1 ಸಿನಿಮಾದಿಂದ 509 ಕೋಟಿ ರೂ. ಗಳಿಕೆ
  • ಒಂದೇ ವಾರದಲ್ಲಿ 500 ಕೋಟಿ ರೂ.ಗಿಂತ ಹೆಚ್ಚಿನ ಗಳಿಕೆ!
  • ಕೆಜಿಎಫ್‌-1 ಸಿನಿಮಾ ದಾಖಲೆ ಮುರಿದ ಕಾಂತಾರ-1

ಕಾಂತಾರ -1 ಸಿನಿಮಾ ಹೊಸ ಇತಿಹಾಸ ಬರೆದಿದೆ. ಕಾಂತಾರ-1 ಬಿಡುಗಡೆಯಾದ ಒಂದೇ ವಾರದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡಿದೆ. ಒಂದೇ ವಾರದಲ್ಲಿ ಬರೋಬ್ಬರಿ 500 ಕೋಟಿ ರೂಪಾಯಿ ಬಾಚಿಕೊಂಡಿದೆ.  ಒಂದೇ ವಾರದಲ್ಲಿ 509 ಕೋಟಿ ರೂಪಾಯಿ ಗಳಿಸಿದೆ.  ವಿಶ್ವದಾದ್ಯಂತ ಕಲೆಕ್ಷನ್ ನಲ್ಲಿ ಕಾಂತಾರ ಧೂಳೆಬ್ಬಿಸಿದೆ. ಇಂದಿಗೂ ದೇಶಾದ್ಯಂತ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಗೆ ಸಿನಿಮಾ ನೋಡಲು ಥಿಯೇಟರ್ ನಲ್ಲಿ ಟಿಕೆಟ್ ಗಳೇ ಸಿಗುತ್ತಿಲ್ಲ. 

Advertisment

ಕೆಜಿಎಫ್-1 ಸಿನಿಮಾದ ದಾಖಲೆಯನ್ನು ಕಾಂತಾರ-1  ಮುರಿದಿದೆ. KGF-1 ಸಿನಿಮಾ  ಒಟ್ಟಾರೆ 408 ಕೋಟಿ ರೂಪಾಯಿ ಗಳಿಸಿತ್ತು. ಇನ್ನೂ  ತಮಿಳು ಸಿನಿಮಾ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ಹಾಗೂ ಹಿಂದಿ ಸಿನಿಮಾ ಭೂಲ್‌ ಬೂಲಯ್ಯ ಸಿನಿಮಾದ ದಾಖಲೆಯನ್ನು ಕಾಂತಾರ-1 ಮುರಿದಿದೆ. 
 ಕೆಜಿಎಫ್ ಸಿನಿಮಾ ಹೀರೋ ಯಶ್ ಕೂಡ ಕಾಂತಾರ- 1 ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. 

 ಕೆಜಿಎಫ್‌ -2 ಸಿನಿಮಾ  ಒಟ್ಟಾರೆ  1,232 ಕೋಟಿ ರೂ ಗಳಿಸಿತ್ತು. ಆ ದಾಖಲೆ ಮುರಿಯುವತ್ತ ಕಾಂತಾರ ಹೆಜ್ಜೆ ಹಾಕಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

kanthara cinema collection
Advertisment
Advertisment
Advertisment