Advertisment

ಕಾಂತಾರ ಭರ್ಜರಿ ಕಲೆಕ್ಷನ್.. 4 ದಿನದಲ್ಲಿ ಎಷ್ಟು ಕೋಟಿ ಬಾಚಿದೆ ಗೊತ್ತಾ..?

ಕಾಂತಾರ ಪ್ರೀಕ್ವೆಲ್ ಮೂವಿ ಕೇವಲ ನಾಲ್ಕೇ ದಿನಕ್ಕೆ ದಾಖಲೆ ಸೃಷ್ಟಿಸಿದೆ. ಕಲೆಕ್ಷನ್​ನಲ್ಲಿ ಹಿಂದೆ ಬೀಳದ ಕಾಂತಾರ ಸಿನಿಮಾ ಎಲ್ಲ ದಾಖಲೆಗಳನ್ನು ಉಡೀಸ್ ಮಾಡುವಂತೆ ಕಾಣುತ್ತಿದೆ. ರಿಷಬ್ ಶೆಟ್ಟಿಯ ಡೈರೆಕ್ಷನ್, ನಟನೆ ಅಭಿಮಾನಿಗಳನ್ನು ಮೂಕವಿಸ್ಮಿತ ಮಾಡ್ತಿದೆ. 4 ದಿನದಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ?

author-image
Ganesh Kerekuli
Kantara (1)
Advertisment

ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಅವರ ಕಾಂತಾರ ಪ್ರೀಕ್ವೆಲ್ ಮೂವಿ ಥಿಯೇರ್​​ಗಳಲ್ಲಿ ಅಬ್ಬರಿಸುತ್ತಿದೆ. ಜನರನ್ನು ಸಿನಿಮಾ ಮಂದಿರಗಳತ್ತ ಸೆಳೆಯುತ್ತಿರುವ ಕಾಂತಾರ ಕಲೆಕ್ಷನ್​​ನಲ್ಲೂ ಹಿಂದೆ ಬಿದ್ದಿಲ್ಲ. ಹೌಸ್​ಫುಲ್​ ಶೋಗಳು ನಡೆಯುತ್ತಿರುವುದು ರಿಷಭ್​ ಶೆಟ್ಟಿ ಹಾಗೂ ನಿರ್ಮಾಪಕರಿಗೆ ಸಂತಸದ ಸುದ್ದಿಯಾಗಿದೆ. 

Advertisment

ಕಾಂತಾರ ಚಾಪ್ಟರ್ 1 ಸಿನಿಮಾದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತಿದೆ.  ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಕಾಂತಾರ ಕಲೆಕ್ಷನ್ ಬರೋಬ್ಬರಿ 335 ಕೋಟಿ ಆಗಿದೆ.

ಇದನ್ನೂ ಓದಿ: ಕಾಂತಾರ ಸಿನಿಮಾ ನೋಡಿದ್ರಾ? ಟಿಕೆಟ್ ಎಸೆಯಬೇಡಿ.. ಯಾಕೆ ಗೊತ್ತಾ?

ವರ್ಲ್ಡ್ ವೈಡ್ ಇವತ್ತಿಗೂ ಸಿನಿಮಾಗೆ ಭರ್ಜರಿ ಬೇಡಿಕೆಯಿದ್ದು, ಎಲ್ಲೆಡೆ ಹೌಸ್ ಫುಲ್‌ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ಚಿತ್ರತಂಡ ನಾರ್ಥ್ ಇಂಡಿಯಾದ ಪ್ರವಾಸದಲ್ಲಿದ್ದು, ಅದ್ಭುತ ರೆಸ್ಪಾನ್ಸ್ ಕೇಳಿ ಬರ್ತಿದೆ. ಕಾಂತಾರ ಭಾಗ-2 ಸಿನಿಮಾ ಸುಮಾರು 16 ಕೋಟಿ ರೂಪಾಯಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೆ ಇದು ಒಟ್ಟು 400 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೀಗ ಕಾಂತಾರ ಪ್ರೀಕ್ವೆಲ್​ ಅಂದಾಜು 125 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು ದೊಡ್ಡ ಮೊತ್ತದಲ್ಲೇ ಹಣ ಗಳಿಕೆ ಮಾಡುತ್ತಿದೆ. ಸದ್ಯ ರಿಷಭ್ ಶೆಟ್ಟಿ ಅವರಿಗೆ ಎಲ್ಲೆಡೆಯಿಂದಲೂ ಅಬಿನಂದನೆಗಳನ್ನು ತಿಳಿಸಲಾಗುತ್ತಿದೆ. 

ಇದನ್ನೂ ಓದಿ: ಕಾಂತಾರ ಪ್ರೀಕ್ವೆಲ್ ಬೃಹತ್​ ಕಲೆಕ್ಷನ್​ ಅತ್ತ.. ಹೊಂಬಾಳೆ ಫಿಲಂ ಅಧಿಕೃತ ಮಾಹಿತಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rishab Shetty Kantara review Kantara Chapter1 Kantara Movie Kantara Chapter 1 trailer
Advertisment
Advertisment
Advertisment