/newsfirstlive-kannada/media/media_files/2025/10/03/kanthara-collection-2025-10-03-13-43-14.jpg)
ಮೊದಲ ದಿನದ ಕಾಂತಾರದ ಕಲೆಕ್ಷನ್ ಎಷ್ಟು?
ನಿನ್ನೆ ವಿಶ್ವದಾದ್ಯಂತ ಬಿಡುಗಡೆ ಆಗಿರುವ ಕಾಂತಾರ ಚಾಪ್ಟರ್-1 ಸಿನಿಮಾಗೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಓಪನಿಂಗ್ ಸಿಕ್ಕಿದೆ. ನಿರ್ಮಾಪಕ ವಿಜಯ ಕಿರಂಗದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ಕಾಂತಾರ ಚಾಪ್ಟರ್ -1 ಸಿನಿಮಾಗಾಗಿ 125 ಕೋಟಿ ರೂಪಾಯಿ ಖರ್ಚು ಮಾಡಿದೆ. ನಿನ್ನೆ ಮೊದಲ ದಿನ ಬೆಳಿಗ್ಗೆ ಷೋಗಳಿಗೆ ಕಡಿಮೆ ಸಂಖ್ಯೆಯ ಪ್ರೇಕ್ಷಕರಿದ್ದರೂ, ಮಧ್ಯಾಹ್ನದ ಷೋ ಮತ್ತು ಸಂಜೆ, ರಾತ್ರಿಯ ಷೋಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿದ್ದಾರೆ. ಇದರಿಂದಾಗಿ ಬುಕ್ ಮೇ ಷೋ ವೆಬ್ ಸೈಟ್ ನಲ್ಲಿ ಗಂಟೆಗೆ 85 ಸಾವಿರ ಟಿಕೆಟ್ ಗಳು ಬುಕ್ ಆಗಿವೆ.
ಟ್ರ್ಯಾಕಿಂಗ್ ವೆಬ್ ಸೈಟ್ ಸಕನಿಲ್ಕ್ ಪ್ರಕಾರ, ಕಾಂತಾರ ಚಾಪ್ಟರ್ -1 ಸಿನಿಮಾ ಭಾರತದಲ್ಲಿ ಮೊದಲ ದಿನವೇ ತೆರಿಗೆ ಕಳೆದು 60 ಕೋಟಿ ರೂಪಾಯಿ ಗಳಿಸಿದೆ. ವಿದೇಶಗಳಲ್ಲಿ 10 ಕೋಟಿ ರೂಪಾಯಿ ಗಳಿಸಿದೆ.
ಕಾಂತಾರ ಸಿನಿಮಾ ಹಿಂದಿ ಪ್ರದೇಶಗಳಲ್ಲಿ 19-21 ಕೋಟಿ ರೂಪಾಯಿ ಗಳಿಸಿದೆ.
ಇನ್ನೂ ಕಾಂತಾರದ ಎರಡನೇ ದಿನವಾದ ಶುಕ್ರವಾರವೇ ಸಿನಿಮಾದ ಗಳಿಕೆಯು ನೂರು ಕೋಟಿ ದಾಟುವ ನಿರೀಕ್ಷೆ ಇದೆ.
ಈಗಾಗಲೇ ಬಾಯಿಯಿಂದ ಬಾಯಿಗೆ ಸಿನಿಮಾದ ಬಗ್ಗೆ ಪಾಸಿಟಿವ್ ಪ್ರಚಾರ ಆಗುತ್ತಿದೆ. ಸಿನಿಮಾದ ಟಿಕೆಟ್ ಗಳೇ ಬೆಂಗಳೂರಿನಲ್ಲಿ ಸಿಗುತ್ತಿಲ್ಲ. ಬುಕ್ ಮೈ ಷೋ ವೆಬ್ ಸೈಟ್ ನಲ್ಲಿ ಗಂಟೆಗೆ 85 ಸಾವಿರ ಟಿಕೆಟ್ ಗಳು ಬುಕ್ ಆಗುತ್ತಿರುವುದರಿಂದ 2ನೇ ದಿನವೇ ಸಿನಿಮಾದ ಗಳಿಕೆ 100 ಕೋಟಿ ದಾಟುವ ನಿರೀಕ್ಷೆ ಇದೆ.
ಹೀಗಾಗಿ ಹೊಂಬಾಳೆ ಫಿಲಂಸ್ ಈ ಭಾರಿಯೂ ಹಾಕಿದ ಬಂಡವಾಳವನ್ನ ಗಳಿಸಿ ಲಾಭ ಗಳಿಸುವುದರಲ್ಲೂ ಯಾವುದೇ ಅನುಮಾನ ಇಲ್ಲ. ಈ ಭಾರಿ ಎರಡು ಪಟ್ಟು, ಮೂರು ಪಟ್ಟು ಲಾಭವನ್ನು ಹೊಂಬಾಳೆ ಫಿಲಂಸ್ ಗಳಿಸುವ ಎಲ್ಲ ಸಾಧ್ಯತೆಗಳೂ ಇವೆ.
ಇನ್ನೂ ಕನ್ನಡ ವರ್ಷನ್ ಸಿನಿಮಾವು ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ನಿನ್ನೆ ಶೇ.88.13 ರಷ್ಟು ಸೀಟು ಫುಲ್ ಆಗಿತ್ತು. ತೆಲುಗು, ಹಿಂದಿ, ತಮಿಳು ಡಬ್ಬಿಂಗ್ ಸಿನಿಮಾವು ಕ್ರಮವಾಗಿ ಶೇ.75.9 , ಶೇ. 29, ಶೇ. 71 ರಷ್ಟು ಸೀಟುಗಳು ಭರ್ತಿಯಾಗಿದ್ದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.