/newsfirstlive-kannada/media/media_files/2025/08/08/rukmini_vasanth_kanthara-2025-08-08-10-23-56.jpg)
ಇಂದು ವರಮಹಾಲಕ್ಷ್ಮಿ ಹಬ್ಬ. ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದು ದೇವತೆಗೆ ವಿಶೇಷ ಪೂಜೆ ನಡೆಯುತ್ತಿದೆ. ಕೆಲವರಂತೂ ವರಮಹಾಲಕ್ಷ್ಮಿಗೆ ನೋಟುಗಳಿಂದಲೇ ಸಿಂಗಾರ ಮಾಡಿ ಶೃಂಗರಿಸಿದ್ದಾರೆ. ಸದ್ಯ ನಾಡಿನಾದ್ಯಂತ ಹಬ್ಬದ ಕಲರವ ಇದ್ರೆ ಇತ್ತ ಕಾಂತಾರ ಸಿನಿಮಾ ತಂಡದವರು ಚಾಪ್ಟರ್- 1 ರಲ್ಲಿ ಹೀರೋಯಿನ್ ಅವರ ಪಾತ್ರ ಪರಿಚಯ ಮಾಡಿದ್ದಾರೆ. ಈ ಬಗ್ಗೆ ಮೊದಲು ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ.
ಕಾಂತಾರ ಸಿನಿಮಾದ ಭಾಗ-2 ರಲ್ಲಿ ರಿಷಭ್ ಶೆಟ್ಟಿ ನಟಿಸಿದ್ದರು. ಈಗ ಭಾಗ- 1ರಲ್ಲಿ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಯವರೇ ನಟಿಸಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಏಕೆಂದರೆ ಚಾಪ್ಟರ್- 2 ಬಿಗ್ ಹಿಟ್ ಆಗಿದ್ದು ಎಲ್ಲರ ಕಣ್ಣು ಕಾಂತಾರ- 1ರ ಮೇಲಿದೆ.
ಕಾಂತಾರ ಚಾಪ್ಟರ್-1 ಸಿನಿಮಾದ ನಾಯಕಿ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಅಲ್ಲೊಮ್ಮೆ, ಇಲ್ಲೊಮ್ಮೆ ಚಿತ್ರ ನಾಯಕಿ ರುಕ್ಮಿಣಿ ವಂಸತ್ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಹೇಳಿರಲಿಲ್ಲ. ಆದರೆ ಈಗ ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಚಿತ್ರತಂಡ ನಾಯಕಿ ಕನಕವತಿಯನ್ನು ಪರಿಚಯಿಸಿದೆ. ಕನಕವತಿಯಾಗಿ ಅಭಿನಯಿಸುತ್ತಿರುವುದೇ ರುಕ್ಮಿಣಿ ವಸಂತ್ ಅವರು.
7 ಭಾಷೆಗಳಲ್ಲಿ ಕಾಂತಾರ ಸಿನಿಮಾದ ಸ್ಪೆಷಲ್ ಪೋಸ್ಟರ್ ಅನ್ನು ರಿಲೀಸ್ ಆಗಿದೆ. ಇದರಿಂದ ಈ ಬಾರಿ ದೊಡ್ಡ ಯಶಸ್ಸು ಕಾಣುವ ಭರವಸೆಯಲ್ಲಿ ಸಿನಿಮಾ ತಂಡ ಇದೆ. ಈ ಮೂವಿಯಿಂದ 1000 ಕೋಟಿ ರೂಪಾಯಿ ಗಳಿಕೆ ಮಾಡುವ ನಿರೀಕ್ಷೆಯನ್ನು ಹೊಂಬಾಳೆ ಫಿಲಂನವರು ಹೊಂದಿದ್ದಾರೆ.
ರುಕ್ಮಿಣಿ ವಂಸತ್ ಅವರು ಕಾಂತಾರ-1ರಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಇದೀಗ ಪೋಸ್ಟರ್ ಸಮೇತ ಅಧಿಕೃತ ಮಾಹಿತಿ ಚಿತ್ರ ತಂಡವೇ ನೀಡಿದೆ. ರಾಣಿ ಕನಕವತಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅವರು ಅಭಿನಯ ಮಾಡುತ್ತಿದ್ದಾರೆ. ರಿಷಭ್ ಶೆಟ್ಟಿಯವರ ಈ ಸಿನಿಮಾ 2025ರ ಅಕ್ಟೋಬರ್ 02 ರಂದು ವಿಶ್ವದ್ಯಾಂತ ಬಿಡುಗಡೆ ಆಗಲಿದೆ. ಇನ್ನು ಸಿನಿಮಾಕ್ಕೆ ಹೊಂಬಾಳೆ ಫಿಲಂನ ವಿಜಯ್ ಕಿರಗಂದೂರ್ ಅವರು ಬಂಡವಾಳ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ