ಇದೇ ತಿಂಗಳಿಂದ ಬಿಗ್​ಬಾಸ್- 12 ಆರಂಭ.. ಬರ್ತ್​ಡೇಯಲ್ಲಿ ಕಿಚ್ಚ ಸುದೀಪ್ ಹೇಳಿದ್ದೇನು?

52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ.

author-image
Bhimappa
SUDEEP_BB
Advertisment

ಸ್ಯಾಂಡಲ್​ವುಡ್​ ಬಾದಷಾ, ವೀರ ಮದಕರಿ ಕಿಚ್ಚ ಸುದೀಪ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮಾಚರಣೆ. 52ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅವರು ಒಂದಿನ ಮೊದಲೇ ಬರ್ತ್​ಡೇ ಸೆಲೆಬ್ರೆಷನ್ ಮಾಡಿದ್ದಾರೆ. ಅದರಂತೆ ಕಿಚ್ಚ ಸುದೀಪ್ ನಡೆಸಿಕೊಡುವಂಥ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್‌ ಬಾಸ್‌ ತನ್ನ 12ನೇ ಸೀಸನ್‌ಗೆ ರೆಡಿಯಾಗಿದೆ. ಈ ಕುರಿತು ಕಿಚ್ಚ, ದಿನಾಂಕ ಕೂಡ ರಿವೀಲ್ ಮಾಡಿದ್ದಾರೆ. 

ಕನ್ನಡದ ಬಿಗ್​ಬಾಸ್- 12 ಯಾವಾಗ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಕುತೂಹಲದಿಂದ ಇದ್ದಾರೆ. ಈ ಸೀಸನ್ ಯಾವಾಗ ಶುರುವಾಗುತ್ತೆಂದು, ಈ ಬಗ್ಗೆ ಅಪ್​ಡೇಟ್ಸ್​ ಯಾವಾಗ ಸಿಗುತ್ತವೆ ಎನ್ನುವುದು ಪ್ರೇಕ್ಷಕರಲ್ಲಿ ಕೌತುಕ ಹೆಚ್ಚಾಗುತ್ತಿದೆ. ಸೀಸನ್​ 12ಕ್ಕೆ ಸುದೀಪ್ ನಿರೂಪಣೆ ಮಾಡಲ್ಲ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಸುದೀಪ್ ಅವರೇ ನಿರೂಪಣೆ ಮಾಡೋದು ಕನ್​ಫರ್ಮ್ ಆಗೋಗಿದೆ. ಜೊತೆಗೆ ಮೊನ್ನೆ ಮೊನ್ನೆ ಬಿಗ್​ಬಾಸ್​- 12ರ ಲೋಗೋ ಕೂಡ ರಿಲೀಸ್ ಮಾಡಲಾಗಿದೆ. 

ಮೈಸೂರಿನಲ್ಲಿ ನಿರ್ಮಾಪಕ ಸಂದೇಶ್‌ ನಾಗರಾಜ್‌ ಅವರ ಬರ್ತ್​ಡೇ ಸೆಲೆಬ್ರೆಷನ್​ ಆಯೋಜನೆ ಮಾಡಲಾಗಿತ್ತು. ವಿಶ್ ಮಾಡಲು ಆಗಮಿಸಿದ್ದ ಕಿಚ್ಚ ಇದೇ ವೇಳೆ ಬಿಗ್​​ಬಾಸ್​ ಬಗ್ಗೆ ದೊಡ್ಡ ಅಪ್​ಡೇಟ್ ಕೊಟ್ಟಿದ್ದಾರೆ. ಕಿಚ್ಚನನ್ನ ನೋಡುತ್ತಿದ್ದಂತೆ ಫ್ಯಾನ್ಸ್​ ಸಂತಸ ದುಪ್ಪಟ್ಟು ಆಗಿತ್ತು. ಇದೇ ವೇಳೆ ಅಭಿಮಾನಿಗಳಿಗೆ ಸಂದೇಶ ಕೊಟ್ಟ ಸುದೀಪ್ ಅತಿ ಶೀಘ್ರದಲ್ಲೇ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಸಚಿವ ಜಮೀರ್​ಗೆ 2 ಕೋಟಿ ಹಣ.. ಲೋಕಾಯುಕ್ತ ವಿಚಾರಣೆಯಲ್ಲಿ ನಟಿ ರಾಧಿಕಾ ಹೇಳಿದ್ದೇನು?

SUDEEP_BB_1

ಇದೇ ಸೆಪ್ಟೆಂಬರ್ 28 ರಿಂದ ಟಿವಿಯಲ್ಲಿ ನಿಮಗೆ ಸಿಗುತ್ತೇನೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ. ಇದರ ಅರ್ಥ ಬಿಗ್​ಬಾಸ್​- 12 ಇದೇ ಸೆಪ್ಟೆಂಬರ್ 28 ರಿಂದ ಆರಂಭವಾಗುವುದು ಪಕ್ಕಾ ಆದಂತೆ ಆಗಿದೆ. ಸುದೀಪ್ ಅವರೇ ಬಿಗ್​ಬಾಸ್​- 12 ಆರಂಭದ ದಿನಾಂಕವನ್ನು ರಿವೀಲ್ ಮಾಡಿದಂತೆ ಆಗಿದೆ. ಇನ್ನು ಕೇವಲ 26 ದಿನಗಳ ಬಳಿಕ ಕಿರುತೆರೆ ಮೇಲೆ ಕಿಚ್ಚ ಸುದೀಪ್​ ಅವರನ್ನು ನೋಡಬಹುದು. 

ಇನ್ನು ಕಳೆದ ಸೀಸನ್​​, ಬಿಗ್​ಬಾಸ್​- 11ರಲ್ಲಿ ಹಳ್ಳಿ ಹುಡುಗ ಹನುಮಂತು ಮೊದಲ ಸ್ಥಾನದಲ್ಲಿ ಪ್ರಶಸ್ತಿ ಪಡೆದುಕೊಂಡರೇ, ತ್ರಿವಿಕ್ರಮ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ಮನೆಯಲ್ಲಿ ಸಾಕಷ್ಟು ಟ್ವಿಸ್ಟ್​ ಟರ್ನ್ಸ್​, ಜಗಳ, ನಾಮಿನೇಷನ್, ಎಲಿಮಿನೆಷನ್, ಕಿಚ್ಚನ ಚಪ್ಪಾಳೆ, ಮನೆಯಲ್ಲಿನ ಆಟ ಎಲ್ಲವೂ ವೀಕ್ಷಕರನ್ನು ರಜಿಸಿದ್ದವು. ಅದರಂತೆ ಈ ಬಾರಿಯೂ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಂಟೇಸ್ಟೆಂಟ್​ಗಳು ಯಾರು ಯಾರು ಎನ್ನುವುದು ಇನ್ನು ನಿಗೂಢವಾಗಿದೆ.   

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sudeep mother kiccha sudeep Kichcha Sudeepa
Advertisment