ಆ್ಯಕ್ಷನ್​ ಪ್ರಿನ್ಸ್​ಗೆ ಸಾಥ್​ ಕೊಟ್ಟ ಕಿಚ್ಚ.. KD ಸಿನಿಮಾದಲ್ಲಿ ಸುದೀಪ್ ಪಾತ್ರ ಏನಾಗಿರಬಹುದು..?

ಸ್ಯಾಂಡಲ್​ವುಡ್​ನ ಬಿಗ್ ಬಜೆಟ್​ ಸಿನಿಮಾ KD, ಅಭಿಮಾನಿಗಳ ನಿರೀಕ್ಷೆಯು ದುಪ್ಪಟ್ಟು ಮಾಡಿದೆ. ಮೂರು ವರ್ಷಗಳಿಂದ ಸಿನಿಮಾದ ಕೆಲಸಗಳು ನಡೆಯುತ್ತಲೇ ಇವೆ. ಇದರ ಬೆನ್ನಲ್ಲೇ ಈ ಮೂವಿಯ ಬಿಗ್​ ಅಪ್​ಡೇಟ್​​ವೊಂದು ಹೊರ ಬಿದ್ದಿದೆ.

author-image
Bhimappa
SUDEEP_PREM
Advertisment

ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್​ ಕಾಂಬೋದಲ್ಲಿ ಕೆಡಿ ಸಿನಿಮಾ ಅದ್ಧೂರಿಯಾಗಿ ಸಿದ್ಧವಾಗುತ್ತಿದೆ. ಸ್ಯಾಂಡಲ್​ವುಡ್​ನ ಬಿಗ್ ಬಜೆಟ್​ ಸಿನಿಮಾ ಇದಾಗಿದ್ದು ಅಭಿಮಾನಿಗಳ ನಿರೀಕ್ಷೆಯು ದುಪ್ಪಟ್ಟಾಗಿದೆ. ಮೂರು ವರ್ಷಗಳಿಂದ ಸಿನಿಮಾದ ಕೆಲಸಗಳು ನಡೆಯುತ್ತಲೇ ಇವೆ. ಇದರ ಬೆನ್ನಲ್ಲೇ ಈ ಮೂವಿಯ ಬಿಗ್​ ಅಪ್​ಡೇಟ್​​ವೊಂದು ಹೊರ ಬಿದ್ದಿದೆ. 

ಕಿಚ್ಚ ಸುದೀಪ್ ಅವರು, ಆ್ಯಕ್ಷನ್​ ಪ್ರಿನ್ಸ್​ ಧ್ರುವ ಮೂವಿಯಲ್ಲಿ ಅಭಿನಯ ಮಾಡುತ್ತಾರೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಆದರೆ ಈ ಕುರಿತು ಚಿತ್ರತಂಡ ಎಲ್ಲಿಯೂ ಅಧಿಕೃತ ಮಾಹಿತಿ ನೀಡಿರಲಿಲ್ಲ. ಎಷ್ಟೋ ಅಭಿಮಾನಿಗಳು ಇದು ಕೇವಲ ವದಂತಿ ಎಂದಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತೆ ಇದೀಗ ಮಾಹಿತಿ ಬಹಿರಂಗಗೊಂಡಿದೆ. ಕೆಡಿ ಸಿನಿಮಾದ ಸೆಟ್​ನಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದಾರೆ.  

ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ಶೂಟಿಂಗ್ ಸದ್ಯ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಈ ಶೂಟಿಂಗ್​ ಸೆಟ್​ನಲ್ಲೇ ಕಿಚ್ಚ ಸುದೀಪ್ ಅವರು ಕಾಣಿಸಿಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್, ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಜೊತೆಗೆ ನಿಂತಿದ್ದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ರೈಲಿಗೆ ಸಂಬಂಧಿಸಿದ ದೃಶ್ಯ ಶೂಟ್ ಮಾಡುವಾಗ ಸುದೀಪ್ ಅವರು ಸೆಟ್​ನಲ್ಲಿ ಕಾಣಿಸಿದ್ದಾರೆ. ಇನ್ನು ಕೆವಿಎನ್ ಬಿಸಿನೆಸ್ ಹೆಡ್ ಸುಪ್ರೀತ್ ಕೂಡ ಇದರಲ್ಲಿದ್ದಾರೆ. 

ಇದನ್ನೂ ಓದಿ: ಹಾಸನ ದುರಂತ; ಟ್ರಕ್​ ಗುದ್ದಿದ ರಭಸಕ್ಕೆ ಯುವಕನ ಬ್ರೈನ್​ ಡೆಡ್​.. ಚಿಂತಾಜನಕ ಸ್ಥಿತಿ

SUDEEP_PREMS

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆಡಿ ಮೂವಿ ಸಿದ್ಧವಾಗುತ್ತಿದೆ. ಬಾಲಿವುಡ್​ ಸ್ಟಾರ್ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು 2 ಹಾಡು ಹಾಗೂ ಎರಡು ಟೀಸರ್ ಬಿಡುಗಡೆ ಆಗಿದ್ದು ಅಭಿಮಾನಿಗಳ ಮನ ಗೆದ್ದಿವೆ. ಶೀಘ್ರದಲ್ಲೇ ಕೆಡಿ ಸಿನಿಮಾ ಬೆಳ್ಳಿ ತೆರೆ ಮೇಲೆ ರಾರಾಜಿಸಲಿದೆ. ಈ ಬಗ್ಗೆ ಚಿತ್ರತಂಡ ಮುಂದಿನ ದಿನಗಳಲ್ಲಿ ಅಪ್​ಡೇಟ್ಸ್​ ಕೊಡಲಿದೆ. 

ಕಿಚ್ಚ ಸುದೀಪ್ ಅವರು ಕೆಡಿ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ ಎಂದು ಅಧಿಕೃತ  ಮಾಹಿತಿ ಇಲ್ಲ. ಈ ಹಿಂದೆ ಕೆಡಿಯಲ್ಲಿ ನಾನು ಇದ್ದೀನಿ ಎಂದು ಸುದೀಪ್ ಅವರು ಸಣ್ಣದಾದ ಹಿಂಟ್ ಕೊಟ್ಟಿದ್ದರು. ಈ ಕುರಿತು ನಿರ್ದೇಶಕರನ್ನು ಕೇಳಿದಾಗ ಮಾಹಿತಿಯನ್ನು ತಳ್ಳಿ ಹಾಕಿದ್ದರು. ಆದರೆ ಈಗ ಸುದೀಪ್ ಕೆಡಿ ಮೂವಿಯಲ್ಲಿ ನಟಿಸೋದು ಕನ್​ಫರ್ಮ್ ಆದಂತೆ ಅಗಿದೆ. ಇದು ಕಿಚ್ಚ ಹಾಗೂ ಆ್ಯಕ್ಷನ್ ಪ್ರಿನ್ಸ್​ ಫ್ಯಾನ್ಸ್​ಗೆ ಸಂತಸದ ಕ್ಷಣವಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kichcha Sudeepa Jogi Prem Dhruva Sarja KD movie
Advertisment