ಕಿಚ್ಚ ಸುದೀಪ್.. ಮ್ಯಾಕ್ಸ್ ಮ್ಯಾಕ್ಸಿಮಮ್ ಹಿಟ್ ಆದ್ಮೇಲೆ ಮಾರ್ಕ್ ಆಗಿ ತೆರೆ ಮೇಲೆ ಅಪ್ಪಳಿಸೋಕೆ ಸಜ್ಜಾಗಿದ್ದಾರೆ. ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಲು ಬರ್ತಿದ್ದಾರೆ. ಇದಕ್ಕೆ ಬೇಕಾದ ಪ್ರಚಾರದಲ್ಲಿ ಕಿಚ್ಚ ಬ್ಯುಸಿಯಾಗಿದ್ದಾರೆ. ಚಿತ್ರದ ಬಗ್ಗೆ ನ್ಯೂಸ್‌ಫಸ್ಟ್ ಜೊತೆ ಮಾತನಾಡುತ್ತಲೇ ಕಿಚ್ಚ ತಮ್ಮ ರಾಜಕೀಯ ಎಂಟ್ರಿ.. ಸ್ಯಾಂಡಲ್‌ವುಡ್ ನಾಯಕತ್ವದ ಬಗ್ಗೆ ತಮ್ಮ ಮನದಾಳವನ್ನ ತೆರೆದಿಟ್ಟಿದ್ದಾರೆ.
ರಾಜಕೀಯ ಪ್ರವೇಶದ ಬಗ್ಗೆ ಮೌನ ಮುರಿದ ಸುದೀಪ್!
ಯಾವುದೇ ಚುನಾವಣೆ ಬರ್ಲಿ.. ಕಿಚ್ಚ ಸುದೀಪ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ.. ಈ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಆ ಕ್ಷೇತ್ರದಿಂದ ಕಣಕ್ಕಿಳೀತಾರೆ ಎಂಬ ಮಾತು ಕೇಳಿ ಬರುತ್ತಲೇ ಇರುತ್ತವೆೆ. ರಾಜಕೀಯ ಪಕ್ಷಗಳು ಆಹ್ವಾನ ಕೊಡುತ್ತಲೇ ಇವೆ. ಆದ್ರೆ, ಕಿಚ್ಚ ಮಾತ್ರ ಇದುವರೆಗೂ ಯೆಸ್ ಅಂದೇ ಇಲ್ಲ. ಆದ್ರೀಗ ಮಾರ್ಕ್ ರಿಲೀಸ್ ಹೊತ್ತಲ್ಲಿ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಮೌನ ಮುರಿದಿದ್ದಾರೆ. ರಾಜಕೀಯಕ್ಕೆ ಸದ್ಯಕ್ಕೆ ಬರಲ್ಲ.. ಬಂದಾಗ ಹೇಳ್ತೀನಿ ಅಂತ ನ್ಯೂಸ್‌ಫಸ್ಟ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸದ್ಯಕ್ಕೆ ಚಿತ್ರರಂಗ ಮತ್ತು ರಾಜಕೀಯ ಈ ಎರಡು ದೋಣಿಗಳ ಮೇಲೆ ಕಾಲಿಟ್ಟು ಹೋಗುವ ಅಭ್ಯಾಸ ಇಲ್ಲ ಅಂತ ಹೇಳಿರೋ ಕಿಚ್ಚ.. ಒಂದ್ವೇಳೆ ರಾಜಕೀಯಕ್ಕೆ ಬರ್ಬೇಕು ಅನ್ನಿಸಿದಾಗ ಸೌಂಡ್ ಮಾಡ್ಕೊಂಡು ಬರ್ತೀನಿ ಎಂದಿದ್ದಾರೆ.
ಮಾರ್ಕ್ ರಿಲೀಸ್, 30 ವರ್ಷದ ಸಿನಿಮಾ ಜರ್ನಿ.. ಬಿಗ್‌ಬಾಸ್.. ಹೀಗೆ ಎಲ್ಲದರ ಬಗ್ಗೆಯೂ ಮನದಾಳ ಬಿಚ್ಚಿಟ್ಟಿರೋ ಕಿಚ್ಚ ಸುದೀಪ್, ಕನ್ನಡ ಸಿನಿ ಇಂಡಸ್ಟ್ರಿಯ ನಾಯಕತ್ವದ ಬಗ್ಗೆಯೂ ಮಾತನಾಡಿದ್ದಾರೆ. ಸುದೀಪ್ ಹೇಳಿದ್ದೇನು ಎಂದು ತಿಳಿದುಕೊಳ್ಳಲು ಮೇಲಿನ ಲಿಂಕ್ ಕ್ಲಿಕ್ ಮಾಡಿ..
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us