ಸುದೀಪ್​ ಅಭಿನಯದ ಹೊಸ ಮೂವಿ ಹೆಸರು ಅನೌನ್ಸ್​.. ರಗಡ್​ ಲುಕ್​ನಲ್ಲಿ ಕಿಚ್ಚ

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ.

author-image
Bhimappa
SUDEEPA_NEW
Advertisment

ಅಭಿನಯ ಚಕ್ರವರ್ತಿ, ಬಾದ್ ಷಾ ಕಿಚ್ಚ ಸುದೀಪ್​ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇಂದು ಸ್ಯಾಂಡಲ್​ವುಡ್​ ಸ್ಟಾರ್​ 52ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕಿಚ್ಚನ ಅಭಿಮಾನಿಗಳು ಮಧ್ಯರಾತ್ರಿಯೇ ಹಬ್ಬದ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿ ಇರೋ ಕಿಚ್ಚ ಸುದೀಪ್ ಅವರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾದ ಟೈಟಲ್ ಅನೌನ್ಸ್​ ಆಗಿದೆ. 

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಒಂದಿನ ಮೊದಲೇ ಹೊಸ ಸಿನಿಮಾದ ಟೈಟಲ್ ಅನ್ನು ಅನೌನ್ಸ್ ಮಾಡಲಾಗಿದೆ. ಸದ್ಯ ಈ ಮೂವಿಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು ಟೈಟಲ್ ಮಾತ್ರ ಘೋಷಣೆ ಮಾಡಿರಲಿಲ್ಲ. ಈವರೆಗೂ ಕೆ-47 ಎನ್ನುವ ಹೆಸರಿನಲ್ಲೇ ಶೂಟಿಂಗ್ ಮಾಡಿ ಪೂರ್ಣಗೊಳಿಸಲಾಗಿದೆ. ಕಿಚ್ಚನ ಹೊಸ ಸಿನಿಮಾ ರಿಲೀಸ್​ಗೂ ರೆಡಿಯಾಗಿದ್ದು ಡಿಸೆಂಬರ್​ನಲ್ಲಿ ಅಂದರೆ ಕ್ರಿಸ್​ಮಸ್​ಗೆ ಅಭಿಮಾನಿಗಳು ಈ ಸಿನಿಮಾವನ್ನು ಬಿಗ್​ ಸ್ಕ್ರೀನ್​ನಲ್ಲಿ ನೋಡಬಹುದು. 

ಹೆಸರಿಡದ ಈ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಕಿಚ್ಚನ ಬರ್ತ್​ಡೇಗೂ ಒಂದಿನ ಮೊದಲೇ ಮೂವಿಯ ಟೈಟಲ್​ ಟೀಸರ್​ ರಿಲೀಸ್ ಮಾಡಲಾಗಿದೆ. ಮಾರ್ಕ್​ ಎನ್ನುವುದು ಮೂವಿಯ ಹೆಸರು ಆಗಿದೆ. ಸುದೀಪ್ ಕೂಡ ಮಾರ್ಕ್​ ಟೀಸರ್​ನಲ್ಲಿ ರಗಡ್​ ಅಂದರೆ ಫುಲ್ ರಗಡ್​ ಲುಕ್​ನಲ್ಲಿ ಕಾಣಿಸಿದ್ದಾರೆ. ಮಾರ್ಕ್​ ಸಿನಿಮಾದ ಬ್ಯಾಗ್ರೌಂಡ್ ಮ್ಯೂಸಿಕ್​ ಅಂತೂ ಮೈನವಿರೇಳಿಸುವಂತೆ ಇದೆ. 

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗ್ತಾರಾ..? ನ್ಯಾಯಾಲಯದಲ್ಲಿ ಇಂದು ಅರ್ಜಿ ವಿಚಾರಣೆ

SUDEEPA_NEW_MOVIE

ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ಕಿಚ್ಚನ ಕಾಂಬೋದಲ್ಲಿ ಬರುತ್ತಿರುವ ಇದು 2ನೇ ಮೂವಿ ಆಗಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್​​ನಲ್ಲಿ ಮ್ಯಾಕ್ಸ್​ ಸಿನಿಮಾ ತೆರೆ ಮೇಲೆ ಅಬ್ಬರಿಸಿತ್ತು. ಅಭಿಮಾನಿಗಳಿಗೂ ಸಖತ್ ಮನರಂಜನೆ ನೀಡಿತ್ತು. ಇದು ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯನ ಮೊದಲ ವಿಜಯ ಆಗಿತ್ತು. ಅದರಂತೆ ಮತ್ತೊಂದು ಜಯಭೇರಿ ಬಾರಿಸಲು ಇಬ್ಬರು ರೆಡಿಯಾಗಿದ್ದಾರೆ. ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ತೆರೆಗೆ ಬರಲಿದೆ. 

ಈ ಮಾರ್ಕ್​ ಸಿನಿಮಾಕ್ಕೆ ನಿರ್ದೇಶಕ ವಿಜಯ್ ಕಾರ್ತಿಕೇಯ ಡೈರೆಕ್ಷನ್ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಮ್ಯೂಸಿಕ್ ಇದಕ್ಕಿದೆ. ಸತ್ಯಜ್ಯೋತಿ ಫಿಲಂ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ಗಳು ಜೊತೆಯಾಗಿ ಈ ಮೂವಿಗೆ ಬಂಡವಾಳ ಹಾಕಿದ್ದು ಲಾಭದ ನಿರೀಕ್ಷೆಯಲ್ಲಿವೆ. ಕಿಚ್ಚನ ಬರ್ತ್​ಡೇಗೆ ಸದ್ಯ ಟೈಟಲ್​ ಟೀಸರ್​ ಒಂದೇ ರಿಲೀಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಯಾರು ಯಾರು ಅಭಿನಯ ಮಾಡುತ್ತಿದ್ದಾರೆ, ಹೀರೋಯಿನ್ ಯಾರು, ಪೋಷಕ ಪಾತ್ರಗಳ ಹೆಸರು ರಿವೀಲ್ ಆಗಬೇಕಿದೆ ಅಷ್ಟೇ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗುತ್ತದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sudeep mother Sudeep Darshan friendship kiccha sudeep Kichcha Sudeepa
Advertisment