/newsfirstlive-kannada/media/media_files/2026/01/09/jana-nayagan-2026-01-09-11-39-21.jpg)
ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಹಿಂಪಡೆದ ಕೆವಿಎನ್ ಪ್ರೊಡಕ್ಷನ್
ವಿಜಯ್ ಅವರ ಬಹುನಿರೀಕ್ಷಿತ ಚಿತ್ರ ಜನ ನಾಯಗನ್ ಸುತ್ತಲಿನ ಕಾನೂನು ಹೋರಾಟವು ಹೊಸ ತಿರುವು ಪಡೆದುಕೊಂಡಿದೆ. ಮಂಗಳವಾರ (ಫೆಬ್ರವರಿ 10) ಮದ್ರಾಸ್ ಹೈಕೋರ್ಟ್, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಪ್ರಮಾಣೀಕರಣ ಪ್ರಕ್ರಿಯೆಯನ್ನು ಪ್ರಶ್ನಿಸಿ ಕೆವಿಎನ್ ಪ್ರೊಡಕ್ಷನ್ಸ್ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿತು. ರಾಜಕೀಯಕ್ಕೆ ಔಪಚಾರಿಕವಾಗಿ ಕಾಲಿಡುವ ಮೊದಲು ವಿಜಯ್ ಅವರ ಕೊನೆಯ ಚಿತ್ರವಾಗುವ ನಿರೀಕ್ಷೆಯಿರುವ ಈ ಚಿತ್ರವು ಸರ್ಟಿಫಿಕೇಟ್ ವಿಳಂಬದ ವಿವಾದದಲ್ಲಿ ಸಿಲುಕಿತ್ತು.
ವಕೀಲ ವಿಜಯನ್ ಸುಬ್ರಮಣಿಯಂ ಅವರು ನಿರ್ಮಾಣ ಕಂಪನಿಯು ಪ್ರಕರಣವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸಿದ ನಂತರ ನ್ಯಾಯಮೂರ್ತಿ ಪಿ.ಟಿ ಆಶಾ ಈ ವಿನಂತಿಗೆ ಒಪ್ಪಿಗೆ ನೀಡಿದ್ದರು. ನಿರ್ಮಾಪಕರು ಮೊಕದ್ದಮೆಯನ್ನು ಮುಂದುವರಿಸುವ ಬದಲು ಪರಿಶೀಲನಾ ಪ್ರಕ್ರಿಯೆಯೊಂದಿಗೆ ಮುಂದುವರಿಯಲು ಬಯಸುತ್ತಾರೆ ಎಂದು ಹೇಳುವ ಪತ್ರವನ್ನು ಈಗಾಗಲೇ ಹೈಕೋರ್ಟ್ ರಿಜಿಸ್ಟ್ರಿಗೆ ಕಳುಹಿಸಲಾಗಿತ್ತು. ಇಂದು ಕೇಸ್ ಅನ್ನು ವಿತ್ ಡ್ರಾ ಮಾಡುವ ಶೀರ್ಷಿಕೆಯಡಿ ಪಟ್ಟಿ ಮಾಡಲಾಗಿತ್ತು.
ಹೈಕೋರ್ಟ್ ನಲ್ಲಿ ಅರ್ಜಿಯನ್ನು ಕೆವಿಎನ್ ಪ್ರೊಡಕ್ಷನ್ ಇಂದು ಅಧಿಕೃತವಾಗಿ ಹಿಂಪಡೆದುಕೊಂಡಿದೆ. ಈಗ ಸಿನಿಮಾವನ್ನು ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಪರಿಶೀಲನಾ ಸಮಿತಿಗೆ ಕಳಿಸಲು ಕೆವಿಎನ್ ಪ್ರೊಡಕ್ಷನ್ ನಿರ್ಧರಿಸಿದೆ. ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕ ಬಳಿಕ ಬಿಡುಗಡೆಯ ದಿನಾಂಕವನ್ನು ಕೆವಿಎನ್ ಪ್ರೊಡಕ್ಷನ್ ಘೋಷಿಸಲಿದೆ. ಹೈಕೋರ್ಟ್ ನಲ್ಲಿ ಕಾನೂನು ಹೋರಾಟದ ಮಾರ್ಗವನ್ನು ಕೈ ಬಿಟ್ಟು ಸಿಬಿಎಫ್‌ಸಿ ಸೂಚಿಸಿದ ಮಾರ್ಗದ ಮೂಲಕವೇ ಈಗ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಕೆವಿಎನ್ ಪ್ರೊಡಕ್ಷನ್ ನಿರ್ಧರಿಸಿರುವುದು ಇದರಿಂದ ಸ್ಪಷ್ಟವಾಗುತ್ತೆ. ಕಾನೂನು ಹೋರಾಟಕ್ಕೆ ಸುದೀರ್ಘ ಸಮಯ ತೆಗೆದುಕೊಳ್ಳುತ್ತೆ. ಅದರ ಬದಲು ಬೇಗನೇ ಸೆನ್ಸಾರ್ ಸರ್ಟಿಫಿಕೇಟ್ ಪಡೆದು ಸಿನಿಮಾ ಬಿಡುಗಡೆಗೆ ಕೆವಿಎನ್ ಪ್ರೊಡಕ್ಷನ್ ಮುಂದಾಗಿದೆ. ಪರಿಶೀಲನಾ ಸಮಿತಿ ಸೂಚಿಸಿದರೇ, ಕೆಲವೊಂದು ಸೀನ್ ಕಟ್ ಮಾಡಿ, ಸಿನಿಮಾ ಬಿಡುಗಡೆ ಮಾಡಬಹುದು ಎಂಬ ಲೆಕ್ಕಾಚಾರ ಕೆವಿಎನ್ ಪ್ರೊಡಕ್ಷನ್‌ಗೆ ಇದ್ದಂತೆ ಇದೆ. ಇದು ಸಿನಿಮಾ ಬೇಗನೇ ಬಿಡುಗಡೆಯ ದೃಷ್ಟಿಯಿಂದ ಒಳ್ಳೆಯ ತೀರ್ಮಾನ.
ಪ್ರಕರಣ ಏಕೆ ಪ್ರಾರಂಭವಾಯಿತು
ಜನ ನಾಯಗನ್‌ಗೆ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ನೀಡುವುದನ್ನು ವಿಳಂಬ ಮಾಡಿದೆ ಎಂದು ಆರೋಪಿಸಿ ಕೆವಿಎನ್ ಪ್ರೊಡಕ್ಷನ್ಸ್ ಈ ಹಿಂದೆ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ನಿರ್ಮಾಪಕರ ಪ್ರಕಾರ, ಕೆಲವು ಕಡಿತ ಮತ್ತು ಮಾರ್ಪಾಡುಗಳಿಗೆ ಒಳಪಟ್ಟು ಚಿತ್ರವು "ಯುಎ" ಪ್ರಮಾಣಪತ್ರವನ್ನು ಪಡೆಯುತ್ತದೆ ಎಂದು ಅವರಿಗೆ ತಿಳಿಸಲಾಯಿತು. ಸೂಚಿಸಲಾದ ಬದಲಾವಣೆಗಳನ್ನು ಮಾಡಿದ ನಂತರವೂ ಪ್ರಮಾಣಪತ್ರವನ್ನು ನೀಡಲಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಆರಂಭದಲ್ಲಿ "UA" ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಸೂಚಿಸಿದ ನಂತರ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲು CBFC ಅಧ್ಯಕ್ಷರು ತೆಗೆದುಕೊಂಡ ಕ್ರಮವನ್ನು ನಿರ್ಮಾಣ ಸಂಸ್ಥೆ ಪ್ರಶ್ನಿಸಿತ್ತು.
ಆದರೇ, ಈಗ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ಸಿನಿಮಾವನ್ನು ಪರಿಷ್ಕರಣಾ ಸಮಿತಿಗೆ ಕಳಿಸಲು ಕೆವಿಎನ್ ಪ್ರೊಡಕ್ಷನ್ ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us