ಕಳೆದ ವಾರ ಪುನೀತ್‌, ದರ್ಶನ್‌, ಪ್ರೇಮ್ ಸೇರಿ ನಟರು, ನಿರ್ದೇಶಕರಿಗೆ ನಿಂದನೆ- ಇಂದು ಕ್ಷಮೆಯಾಚಿಸಿದ ಕನಕಪುರ ಶ್ರೀನಿವಾಸ್‌

ಕಳೆದ ವಾರ ನಿರ್ಮಾಪಕ ಕನಕಪುರ ಶ್ರೀನಿವಾಸ್ ಕನ್ನಡ ಸಿನಿಮಾ ರಂಗದ ದಿಗ್ಗಜ ನಟರು, ನಿರ್ದೇಶಕರನ್ನೇ ಬಾಯಿಗೆ ಬಂದಂತೆ ಬೈದ್ದಿದ್ದರು. ಆದರೇ, ಇಂದು ತಮ್ಮ ನಿಂದನೆಯ ಹೇಳಿಕೆಗೆ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ಅಂದು ಎಮೋಷನಲ್ ಆಗಿ ಮಾತನಾಡಿದ್ದೆ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

author-image
Chandramohan
kanakapura srinivasa apologies to his derogatory statement
Advertisment

ಕಳೆದ ವಾರ ಕನ್ನಡ ಚಿತ್ರರಂಗದ ಘಟಾನುಘಟಿ ನಿರ್ದೇಶಕರು, ನಟರನ್ನು ವಾಚಾಮಗೋಚಾರವಾಗಿ ಬೈದ್ದಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇಂದು ಕರ್ನಾಟಕ ಫಿಲಂ ಚೇಂಬರ್ ನಲ್ಲಿ ಎಲ್ಲರ ಕ್ಷಮೆಯಾಚಿಸಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಸಮ್ಮುಖದಲ್ಲಿ ನಟರು, ನಿರ್ದೇಶಕರ ಕ್ಷಮೆ ಕೇಳಿದ್ದಾರೆ. 
ಕನ್ನಡ ಸಿನಿಮಾ ಅಭಿಮಾನಿಗಳಿಗೆ, ನಿಂದನೆ ಮಾಡಿದ ಸ್ಟಾರ್‌ ಗಳಿಗೆ ಗ ಕೈ ಮುಗಿದು ಕನಕಪುರ ಶ್ರೀನಿವಾಸ್  ಕ್ಷಮೆ ಕೇಳಿದ್ದಾರೆ. ನಾನು ಎಮೋಷನಲ್‌ ಆಗಿ ಕೆಲವು ವಿಚಾರ ಮಾತಾಡಿದ್ದೇನೆ.   ಕಾಟನ್ ಪೇಟೆ ಗೇಟ್ ಸಿನಿಮಾ ರಿಲೀಸ್ ಆಗಬೇಕಿತ್ತು.  ಒತ್ತಡದಲ್ಲಿ ಹೇಳಿರೋ ಮಾತು ಅದು .  ದುಡ್ಡು ಇಲ್ಲ ದುಃಖದಲ್ಲಿ ಮಾತಾಡಿದ್ದೇನೆ.  ಪುನೀತ್ ಸರ್ ದೇವರು.. ಏಳು ಕೋಟಿ ಕನ್ನಡಿಗರಿಗೆ ಕ್ಷಮೆ ಕೇಳುತ್ತೇನೆ. ನನ್ನ  ಮಾತನ್ನ ವಾಪಾಸ್ ತೆಗೆದುಕೊಳ್ಳುತ್ತೇನೆ. ನಟ ಶಿವಣ್ಣ ಎಷ್ಟೋ ಸ್ಕೂಲ್ ಓಪನ್ ಮಾಡಿ ಸಹಾಯ ಮಾಡಿದ್ದಾರೆ. ಗೀತಕ್ಕ ಶಿವಣ್ಣರಿಂದ ತುಂಬಾ ಉಪಕಾರ ಆಗಿದೆ . ಶಿವಣ್ಣ ನಿಮ್ಮ ಜೊತೆ ಸಿನಿಮಾ ಮಾಡಬೇಕು.. ದಯವಿಟ್ಟು ಕ್ಷಮಿಸಿ ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ. ಅಪ್ಪು ಅಭಿಮಾನಿಗಳು ಕ್ಷಮಿಸಿ.. ತಪ್ಪಾಗಿ ಹೇಳಿದ್ದೀನಿ. ನನಗೆ ಹಣದ ಅವಶ್ಯಕತೆ ಇದೆ. ದುಃಖದಲ್ಲಿ ಹೇಳಿರುವ ಮಾತು ಅದು. ದರ್ಶನ್ ನಮ್ಮ ಮಾಸ್ ಹೀರೋ.. ಅವರ ಜೊತೆ ಸಿನಿಮಾ ಮಾಡುತ್ತೇನೆ.  ದರ್ಶನ್ ಅವ್ರು ದುಡ್ಡು ಕೊಡ್ಬೇಕಿತ್ತು..ಕೊಡ್ತೀನಿ ತಾಳ್ಮೆಯಿಂದ ಇರು ಅಂದಿದ್ರು .  ಧ್ರುವ ಜೊತೆ ಮೂರು ಸಿನಿಮಾ ಮಾಡಿದ್ದೇನೆ.   ಕಲಾವಿದರು ಇಲ್ಲದೇ ಸಿನಿಮಾ ಮಾಡೋಕೆ ಆಗಲ್ಲ .. ನಮಗೆ ನೀವು ಬೇಕೇ ಬೇಕು .  ಪ್ರೇಮ್,  ಎ ಪಿ ಅರ್ಜುನ್ ಅವ್ರು ಸಿನಿಮಾ ಮಾಡೋಕೆ ಒಪ್ಪಿಕೊಂಡಿದ್ದಾರೆ. ನಿಮ್ಮ ದುಡ್ಡು ಬೇಡ ನನಗೆ.. ಸಿನಿಮಾ ಮಾಡಿಕೊಡಿ ಸಾಕು .  ಕನ್ನಡ ಇಂಡಸ್ಟ್ರಿ ನನ್ನ ಉಳಿಸಿಕೊಳ್ಳಬೇಕು . ಪ್ರೇಮ್ ಅವರನ್ನು  ಮತ್ತೆ ಮೀಟ್ ಮಾಡಿಲ್ಲ.  ಆದ್ರೆ ಸಿನಿಮಾ ಮಾಡಿಕೊಡುತ್ತೇನೆ ಎಂದಿದ್ದಾರೆ ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Producers kanakapura srinivasa apology
Advertisment