/newsfirstlive-kannada/media/media_files/2025/08/07/madenuru-manu-1-2025-08-07-16-46-32.jpg)
ಮಡೆನೂರು ಮನು, ನಟ
ರಾಜ್ಯದಲ್ಲಿ ಇತ್ತೀಚೆಗೆ ಮಡೆನೂರು ಮನು ಪ್ರಕರಣವು ಭಾರೀ ಸದ್ದು ಮಾಡಿತ್ತು. ನಟಿಯೊಬ್ಬರು ಮನು ವಿರುದ್ಧ ಅತ್ಯಾ*ಚಾರ ಹಾಗೂ ನಂಬಿಕೆದ್ರೋಹದ ಕೇಸ್ ದಾಖಲಿಸಿದ್ದರು. ಇದೀಗ ಇವರಿಬ್ಬರು ರಾಜೀ ಮಾಡಿಕೊಂಡಿದ್ದು ಕೇಸ್ ಇತ್ಯರ್ಥಗೊಂಡಿದೆ.
ಹೈಕೋರ್ಟ್ ಪೀಠವು ಪ್ರಕರಣವನ್ನು ಇತ್ಯರ್ಥ ಮಾಡಿದೆ. ಆರೋಪ ಪ್ರಕರಣದಲ್ಲಿ ರಾಜೀ ಮಾಡಿಕೊಳ್ಳಲು ಇಬ್ಬರು ಒಪ್ಪಿಕೊಂಡ ಹಿನ್ನೆಲೆಯಲ್ಲೇ ಪ್ರಕರಣವನ್ನು ಕೋರ್ಟ್ ಇತ್ಯರ್ಥಪಡಿಸಿದೆ. ಬೆನ್ನಲ್ಲೇ ಕೋರ್ಟ್ ಆವರಣದಲ್ಲಿ ಮಡೆನೂರು ಮನು ಹಾಗೂ ಸಂತ್ರಸ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ದೂರು ದಾಖಲಾಗ್ತಿದ್ದಂತೆ ನಟ ಮಡೆನೂರು ಮನು ಬಂಧನ..!
ಸಂತ್ರಸ್ತೆಯು ಮಡೆನೂರು ಮನು ಅವರಿಂದ ನನಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಮೇ 22 ರಂದು ಮಡೆನೂರು ಮನು ಅವರನ್ನು ಬಂಧಿಸಿದ್ದರು.
ಇದನ್ನೂ ಓದಿ: ನಟ ಮಡೆನೂರು ಮನು ಮೋಸದಾಟದ ಬಗ್ಗೆ ಸಂತ್ರಸ್ತೆ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ