Advertisment

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಶಾರುಖ್​ ಖಾನ್, ವಿಕ್ರಾಂತ್ ಮ್ಯಾಸಿ, ರಾಣಿ ಮುಖರ್ಜಿ

ಶಾರೂಖ್ ಖಾನ್ ಅವರ ಜವಾನ್ ಹಾಗೂ ವಿಕ್ರಾಂತ್ ಮ್ಯಾಸಿ ಅವರ 12th ಫೇಲ್ ಸಿನಿಮಾದಲ್ಲಿ ಅದ್ಭುತವಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರು ಶ್ರೀಮತಿ ಚಟರ್ಜಿ vs ನಾರ್ವೆ ಸಿನಿಮಾ

author-image
Bhimappa
SHAHRUKH_KHAN
Advertisment

ನವದೆಹಲಿ: ಬಾಲಿವುಡ್​ ಸೂಪರ್ ಸ್ಟಾರ್ ಶಾರುಖ್​ ಖಾನ್, ವಿಕ್ರಾಂತ್ ಮ್ಯಾಸಿ ಹಾಗೂ ರಾಣಿ ಮುಖರ್ಜಿ ಅವರಿಗೆ 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ.

Advertisment

Rani_Mukerji

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟನೆಗಾಗಿ ಈ ಮೂವರಿಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಶಾರೂಖ್ ಖಾನ್ ಅವರ ಜವಾನ್ ಹಾಗೂ ವಿಕ್ರಾಂತ್ ಮ್ಯಾಸಿ ಅವರ 12th ಫೇಲ್ ಸಿನಿಮಾದಲ್ಲಿ ಅದ್ಭುತವಾದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರು ಶ್ರೀಮತಿ ಚಟರ್ಜಿ vs ನಾರ್ವೆ ಸಿನಿಮಾದಲ್ಲಿ ಪವರ್​ಫುಲ್ ಆಗಿ ಕಾಣಿಸಿಕೊಂಡಿದ್ದಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬಾಲಿವುಡ್​ ಸೂಪರ್ ಸ್ಟಾರ್ ಆಗಿರುವ ಶಾರುಖ್ ಖಾನ್ ಅವರು ಕಳೆದ ಮೂರು ದಶಕಗಳಿಂದ ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು. ಆದರೆ ಈವರೆಗೂ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರಲಿಲ್ಲ. ಆದರೆ ಜವಾನ್ ಸಿನಿಮಾದಲ್ಲಿ ಅವರ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. ಅಲ್ಲದೇ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಕಲೆಕ್ಷನ್ ಮಾಡಿತ್ತು.  

ವಿಕ್ರಾಂತ್ ಮ್ಯಾಸೆ ಅವರು ನಿಜ ಜೀವನದಲ್ಲಿ ನಡೆದ ಕಥೆಗೆ ಜೀವ ತುಂಬಿದ್ದರು. 12th ಫೇಲ್ ಸಿನಿಮಾ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನದ ಸತ್ಯ ಘಟನೆ. ವಿಕ್ರಾಂತ್ ಮ್ಯಾಸೆ ತನ್ನದೇ ಆ್ಯಕ್ಟಿಂಗ್ ಮೂಲಕ ಪಾತ್ರಕ್ಕೆ ಕಳೆ ತಂದಿದ್ದರು. ಈ ಸಿನಿಮಾಕ್ಕೆ ಕೇವಲ 20 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 69.64 ಕೋಟಿ ರೂಪಾಯಿಗಳನ್ನು ಬಾಚಿತ್ತು. 

Advertisment

ಇದನ್ನೂ ಓದಿ:ಕಾಂತಾರ ಮೂವಿ ನೋಡಬೇಕಾದ್ರೆ ಮದ್ಯಪಾನ, ಮಾಂಸಹಾರ ಸೇವನೆ ಮಾಡಬಾರದಾ.. ರಿಷಭ್ ಶೆಟ್ಟಿ ಏನಂದ್ರು?

Vikrant_Massey

ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ರಾಣಿ ಮುಖರ್ಜಿ ಅವರು ನಿಜ ಜೀವನದ ಕಥೆ ಹೊಂದಿದ್ದ ಶ್ರೀಮತಿ ಚಟರ್ಜಿ vs ನಾರ್ವೆ ಸಿನಿಮಾದಲ್ಲಿ ಸೂಪರ್ ಆಗಿ ನಟಿಸಿದ್ದರು. ಇದು 2011ರಲ್ಲಿ ನಾರ್ವೇಜಿಯನ್ ಅಧಿಕಾರಿಗಳು, ಭಾರತೀಯ ವಲಸೆ ದಂಪತಿಗಳಾದ ಸಾಗರಿಕಾ ಚಕ್ರವರ್ತಿ ಮತ್ತು ಅನುರೂಪ ಭಟ್ಟಾಚಾರ್ಯ ಅವರ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಇವರ ನಿಜ ಜೀವನದ ಕಥೆಯಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rani Mukerji Vikrant Massey Shah Rukh Khan
Advertisment
Advertisment
Advertisment