ಜನ ನಾಯಗನ್ ಸಿನಿಮಾ ರಿಲೀಸ್‌ಗೆ ಸೆನ್ಸಾರ್ ಮಂಡಳಿಯ ಜೊತೆ ಜಗಳವಿಲ್ಲ-ಕೆವಿಎನ್‌ ಮಾಲೀಕ ವೆಂಕಟನಾರಾಯಣ್

ವಿಜಯ ನಟಿಸಿರುವ ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಸಿನಿಮಾ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸೆನ್ಸಾರ್ ಮಂಡಳಿಯ ಜೊತೆ ನಮಗೆ ಜಗಳವಿಲ್ಲ ಎಂದು ನಿರ್ಮಾಪಕ ವೆಂಕಟನಾರಾಯಣ್ ಹೇಳಿದ್ದಾರೆ.

author-image
Chandramohan
KVN PRODUCTION OWNER VENKATA NARAYANA

ಕೆವಿಎನ್ ಮಾಲೀಕ ವೆಂಕಟ ನಾರಾಯಣ್ ಹಾಗೂ ಹೀರೋ ವಿಜಯ್

Advertisment

ಜನ ನಾಯಗನ್ ಸಿನಿಮಾ ರಿಲೀಸ್ ತೊಡಕಿನಿಂದ  ನಿರ್ಮಾಪಕರಿಗೆ ಸಂಕಷ್ಟ ಎದುರಾಗಿದೆ. ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಪರಿಸ್ಥಿತಿ ನಿರ್ಮಾಪಕರಿಗೆ ಬಂದಿದೆ. ಸೆನ್ಸಾರ್ ಸರ್ಟಿಫಿಕೇಟ್ ವಿವಾದದ ಬಗ್ಗೆ ಜನ ನಾಯಗನ್ ಸಿನಿಮಾ ನಿರ್ಮಾಪಕ ಕೆ.ವೆಂಕಟನಾರಾಯಣ್ ಆತ್ಮೀಯರ ಜೊತೆ ಮಾತನಾಡಿದ್ದಾರೆ. ವಿವಾದ ಏನು ಎನ್ನುವುದರ ಮಾತುಕತೆಯ ವಿಡಿಯೋ ಈಗ ಲೀಕ್ ಆಗಿದೆ. ಆದರೇ, ಈ ವಿಡಿಯೋವನ್ನು ಕೆ.ವೆಂಕಟನಾರಾಯಣ್ ಅವರು ಬಿಡುಗಡೆ ಮಾಡಿಲ್ಲ.  ಬೇರೆ ಯಾರೋ ವಿಡಿಯೋವನ್ನು ರೆಕಾರ್ಡ್ ಮಾಡಿ ಲೀಕ್ ಮಾಡಿದ್ದಾರೆ. 
ಜನ ನಾಯಗನ್ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಗದೇ ಇರುವ ಬಗ್ಗೆ ನಾಳೆ ಸುಪ್ರೀಂಕೋರ್ಟ್ ನಲ್ಲಿ ಕೇಸ್ ವಿಚಾರಣೆಗೆ ಬರುವ ನಿರೀಕ್ಷೆ ಇದೆ. ಸೆನ್ಸಾರ್ ಮಂಡಳಿಯ ಸದಸ್ಯರೊಬ್ಬರ ಆಕ್ಷೇಪಣೆಯಿಂದ  ಜನ  ನಾಯಗನ್  ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿಲ್ಲ. 
ಕೆವಿಎನ್ ಸಂಸ್ಥೆ ಮಾಲೀಕರಾದ ವೆಂಕಟ ನಾರಾಯಣ್ ಸಮಸ್ಯೆ ಹೇಳಿಕೊಂಡ ವಿಡಿಯೋ ಬಹಿರಂಗವಾಗಿದೆ. ಸೆನ್ಸಾರ್ ಮಂಡಳಿಯ ಜೊತೆ ನಮಗೆ ಯಾವುದೇ ಜಗಳವಿಲ್ಲ. ನಾನೊಬ್ಬ ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ.  ವ್ಯವಹಾರದ ಮೂಲಕ ಆರ್ಥಿಕ ಅಭಿವೃದ್ದಿ ಮಾಡುವುದಷ್ಟೇ ನಮ್ಮ ಕೆಲಸ ಎಂದು ಕೆವಿಎನ್ ಸಂಸ್ಥೆ ಮಾಲೀಕ ವೆಂಕಟನಾರಾಯಣ್ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

jana nayagan KVN PRODUCTION OWNER VENKATA NARAYANA
Advertisment