/newsfirstlive-kannada/media/media_files/2025/09/16/high-court-of-karnataka-2025-09-16-15-16-25.jpg)
ಸಿನಿಮಾ ಟಿಕೆಟ್ ದರದ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಣೆ ಪೆಂಡಿಂಗ್
ನಾವು ಸಾಮಾನ್ಯವಾಗಿ ಯಾವುದೇ ಸಿನಿಮಾ ನೋಡಿದ್ರೂ ಸಿನಿಮಾ ಮುಗಿದ್ಮೇಲೆ ಆ ಟಿಕೆಟ್ ಎಸೆದು ಮನೆಗೆ ಬರ್ತೀವಿ. ಆದ್ರೆ, ಇನ್ಮುಂದೇ ಟಿಕೆಟ್ ಎಸೆಯಬೇಡಿ.. ಜೋಪಾನವಾಗಿ ಎತ್ತಿಡಿ.. ಯಾಕಂದ್ರೆ, ಮುಂದೆ ಅದೇ ಟಿಕೆಟ್​ನಿಂದ ಹಣ ಸಿಕ್ಕಿದ್ರೂ ಸಿಗಬಹುದು ಕಣ್ರೀ.. ಹೌದು.. ಇತ್ತೀಚಿಗೆ ಟಿಕೆಟ್ ಬೆಲೆ ನಿಗದಿ ಕುರಿತು ಸಖತ್ ಚರ್ಚೆಯಾಗ್ತಿದೆ.
ರಾಜ್ಯದಲ್ಲಿ ಸರ್ಕಾರ ಏನೋ ಎಲ್ಲಾ ಥಿಯೇಟರ್ಸ್​​ನಲ್ಲಿ, ಮಲ್ಟಿಫ್ಲೆಕ್ಸ್​ನಲ್ಲಿ 200 ರೂಪಾಯಿ ಸಿನಿಮಾ ಟಿಕೆಟ್ ಬೆಲೆ ನಿಗದಿ ಮಾಡಲು ಮುಂದಾಗಿತ್ತು. ಈ ವಿಚಾರ ಗೊತ್ತೇ ಇದೆ.. ಆದ್ರೆ, ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ 200 ರೂ ಟಿಕೆಟ್ ದರ ನಿಗದಿಗೊಳಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ತಡೆ ನೀಡಿತ್ತು. ಈ ಹಿನ್ನೆಲೆ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ತೆರವು ಕೋರಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮತ್ತೊಂದ್ಕಡೆ, ಹೊಂಬಾಳೆ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಗೆ ಹೈಕೋರ್ಟ್ ನೋಟಿಸ್ ನೀಡಿದ್ದು 200 ರೂ.ಗಿಂತ ಹೆಚ್ಚಿನ ಹಣ ಸಂಗ್ರಹ ಹೈಕೋರ್ಟ್ ತೀರ್ಪಿಗೆ ಒಳಪಡುತ್ತದೆ ಎಂದಿದೆ.
ಅಷ್ಟೇ ಅಲ್ಲ.. ಕೋರ್ಟ್​ ಇನ್ನೂ ಒಂದು ಮಾತನ್ನ ಹೇಳಿದೆ. ಸರ್ಕಾರದ ಪರ ಅಂತಿಮ ತೀರ್ಪು ಬಂದರೆ ಹಣ ವಾಪಸ್ ಮಾಡಬೇಕು. ಸರ್ಕಾರ ಗೆದ್ದರೆ ಸಿನಿಮಾ ವೀಕ್ಷಕರಿಗೆ ಹಣ ವಾಪಸ್ ನೀಡಬೇಕಾಗುತ್ತೆ. ಈ ಬಗ್ಗೆ ಚಿತ್ರಮಂದಿರದಲ್ಲಿ ಪ್ರಕಟಿಸಲು ಕೋರ್ಟ್ ಸೂಚನೆ ನೀಡಿತ್ತು. ಅಲ್ಲದೇ, ಟಿಕೆಟ್ ಸಂಗ್ರಹದ ಲೆಕ್ಕಪತ್ರ ಸಂಗ್ರಹಿಸಿಡಲು ಚಿತ್ರಮಂದಿರಗಳಿಗೆ ಸೂಚನೆ ನೀಡಲಾಗಿದ್ದು ನಂತರ ವಿಚಾರಣೆ ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಸರ್ಕಾರ ಸಾರ್ವಜನಿಕರಿಗೆ ಸೂಚನೆವೊಂದನ್ನ ಹೊರಡಿಸಿದೆ. ಸರ್ಕಾರದ ಸೂಚನೆ ಏನು ಗೊತ್ತಾ?
ಪ್ರತಿವಾದಿ ಸಂಖ್ಯೆ 1 ಮತ್ತು ಅದರ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಮಲ್ಟಿಪ್ಲೆಕ್ಸ್‌ಗಳು ಮಾರಾಟವಾದ ಪ್ರತಿಯೊಂದು ಟಿಕೆಟ್‌ಗೆ ಸಮಗ್ರ ದಾಖಲೆಗಳನ್ನು ಮೆಯಿಂಟೈನ್ ಮಾಡಿ ಅಂತ ಕೋರ್ಟ್​ ತಿಳಸಿದೆ.. ದಾಖಲೆಗಳಲ್ಲಿ ಏನೇನಿರಬೇಕು ಅಂದ್ರೆ, ಮಾರಾಟದ ದಿನಾಂಕ ಮತ್ತು ಸಮಯ, ಬುಕಿಂಗ್ ಮಾಡಿರುವ ವಿಧಾನ, ಹಾಗೇ.. ಪಾವತಿ ಮಾಡಿರುವ ರೀತಿ ಕೂಡ ನೋಟ್ ಮಾಡ್ಬೇಕು.. ಅಂದ್ರೆ ಏನ್ ಕ್ಯಾಶ್ ಕೊಟ್ಟಿದ್ದಾ? ಯುಪಿಐ ಮಾಡಿದ್ದಾ ಅಂತ.. ಸಂಗ್ರಹಿಸಿದ ಮೊತ್ತ, GST, ಎಲ್ಲಾ ನಗದು ವಹಿವಾಟುಗಳಿಗೆ ಡಿಜಿಟಲ್ ಆಗಿ ಪತ್ತೆಹಚ್ಚಬಹುದಾದ ರಸೀದಿ ಎಲ್ಲವೂ ಇರ್ಬೇಕು..
ಸದ್ಯ ಸರ್ಕಾರದ ಆದೇಶ ಎತ್ತಿ ಹಿಡಿದ್ರೆ, ಸಂಗ್ರಹಿಸಿದ ಎಲ್ಲಾ ಮೊತ್ತವನ್ನು ಟಿಕೆಟ್‌ಗಳನ್ನು ಬುಕ್ ಮಾಡಿದ ವೈಯಕ್ತಿಕ ಗ್ರಾಹಕರಿಗೆ ಬುಕಿಂಗ್‌ಗೆ ಬಳಸುವ ಅದೇ ಪಾವತಿ ವಿಧಾನದ ಮೂಲಕ ಮರುಪಾವತಿಸಬೇಕು. ಹೀಗಾಗಿ, ಜನರು ಟಿಕೆಟ್ ತೆಗೆದಿಟ್ಟುಕೊಳ್ಳಲು ಸರ್ಕಾರ ಸೂಚನೆ ಕೊಟ್ಟಿದೆ.. ಸೋ ಹೀಗಾಗಿ ನೀವ್ ಯಾವುದೇ ಸಿನಿಮಾ ನೋಡಿದ್ರೂ ಯಾವುದೇ ಥಿಯೇಟರ್​ಗೆ ಹೋದ್ರೂ ಆ ಟಿಕೆಟ್​ನ ಭದ್ರವಾಗಿ ಎತ್ತಿಟ್ಟುಕೊಳ್ಳಿ. ಅತ್ತ, ಸಾರ್ವಜನಿಕರಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಎಲ್ಲಾ ರೀತಿಯಾ ಸಿನಿಮಾ ಟಿಕೆಟ್‌ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ಮೆಯಿಂಟೈನ್ ಮಾಡೋದು ಉತ್ತಮ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.