/newsfirstlive-kannada/media/media_files/2025/10/04/gulian-devaiaha-villian-of-kantahra02-2025-10-04-14-40-58.jpg)
ಕಾಂತಾರ ವಿಲನ್ ಪಾತ್ರದಲ್ಲಿ ನಟಿಸಿರುವ ಗುಲ್ಷನ್ ದೇವಯ್ಯ
ಕಾಂತಾರ ಸಿನಿಮಾ ಸಕ್ಸಸ್​​ನ ಬೆನ್ನಲ್ಲೇ ವಿಲನ್ ಕ್ಯಾರೆಕ್ಟರ್​ನಲ್ಲಿ ಕಾಣಿಸಿಕೊಂಡಿರೋ ಗುಲ್ಶನ್ ದೇವಯ್ಯ ನಟನೆ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ತುಂಬಾ ಗಂಭೀರವೂ ಅಲ್ಲದ, ಹಾಸ್ಯಭರಿತವಾದದ್ದೂ ಅಲ್ಲದ, ಒಂದು ರೀತಿಯ ವಿಶಿಷ್ಠ ಪಾತ್ರವನ್ನ ಗುಲ್ಶನ್ ದೇವಯ್ಯ ನಿರ್ವಹಣೆ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗ್ತಿದೆ. ಈ ಸಿನಿಮಾದಲ್ಲಿ ಗುಲ್ಶನ್ ಪಾತ್ರ ಹೇಗೆ ಭಿನ್ನವಾಗಿದೆಯೋ ಅವರ ಲೈಫ್​ಸ್ಟೈಲ್ ಕೂಡ ಅಷ್ಟೇ ಭಿನ್ನ
ದಿನಕ್ಕೆ ಒಂದೇ ಹೊತ್ತು ಊಟ
ಸದಾ ತಮ್ಮ ದೇಹದ ಬಗ್ಗೆ ಹಾಗೂ ಫಿಟ್​ನೆಸ್​ ಬಗ್ಗೆ ಕಾಳಜಿ ವಹಿಸೋ ಗುಲ್ಶನ್ ದೇವಯ್ಯ ಒನ್ ಮೀಲ್ ಎ ಡೇ(OMAD) ಫುಡ್ ರೂಲ್ಸ್​ ಫಾಲೋ ಮಾಡ್ತಾರೆ. ಅಂದ್ರೆ ಒಂದು ದಿನಕ್ಕೆ ಒಮ್ಮೆ ಮಾತ್ರವೇ ಊಟ ಮಾಡೋದು.. ಈ ಒಂದು ಊಟದಲ್ಲಿ ಇಡೀ ದಿನ ತಿನ್ನಬೇಕಿದ್ದ ಎಲ್ಲಾ ಕ್ಯಾಲೋರಿಗಳು ಒಳಗೊಂಡಿರುತ್ತೆ ಅನ್ನೋದು ವಿಶೇಷ. ಇವರ ಒಂದೊತ್ತಿನ ಊಟದಲ್ಲಿ ತರಕಾರಿ, ಹಲವು ರೀತಿಯ ಹಣ್ಣುಗಳು, ಮಾಂಸಾಹಾರ ಹಾಗೂ ಮೊಟ್ಟೆ ಇದ್ದೇ ಇರುತ್ತೆ. ಈ ಸುದೀರ್ಘ ಊಟ ಮಾಡಲು ಸುಮಾರು ಒಂದು ಗಂಟೆಗಳ ಕಾಲ ಸಮಯ ತೆಗೆದುಕೊಳ್ತೀನಿ ಅಂತಾ ಈ ಹಿಂದೆ ಸಂದರ್ಶನ ಒಂದರಲ್ಲಿ ಖುದ್ದು ಗುಲ್ಶನ್ ದೇವಯ್ಯ ಹೇಳ್ಕೊಂಡಿದ್ದರು. ಇನ್ನು, ಸೂಪ್​, ಸ್ಪೈಸಿ ಫುಡ್​ಗಳನ್ನ ಯಾವ ಕಾರಣಕ್ಕೂ ಬಳಸೋದೇ ಇಲ್ಲ. 2018ರಿಂದಲೂ ಇದೇ ರೀತಿಯ ಒನ್ ಮೀಲ್ ಆಹಾರದ ಪದ್ಧತಿಯನ್ನ ಗುಲ್ಶನ್ ಅನುಸರಿಸಿಕೊಂಡು ಬರ್ತಿದ್ದಾರೆ.
ಇಂಟ್ರೆಸ್ಟಿಂಗ್​ ಅಂದ್ರೆ ಗುಲ್ಶನ್​​ಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ.. ಅದರಲ್ಲೂ ಮಟನ್ ಬಿರಿಯಾನ್ ಪಂಚಪ್ರಾಣ. ಆದ್ರೆ ಬಿರಿಯಾನಿ ಜೊತೆಗೆ ಶೇರ್ವ, ರೈತಾ ಬಳಸೋದಿಲ್ಲ.. ಟೀ ವಿಚಾರದಲ್ಲೂ ಅಷ್ಟೇ ಮಾಸಾಲ ಚಾಯ್​ಗಳಿಂದ ದೂರ ಇರ್ತಾರೆ. ಇಂತಹ ಹೆಚ್ಚುವರಿ ಪದಾರ್ಥಗಳು ಒರಿಜಿನಲ್ ಟೇಸ್ಟ್ ಹಾಳು ಮಾಡುತ್ತೆ ಅನ್ನೋದು ಗುಲ್ಶನ್ ನಂಬಿಕೆ.
ವಿದೇಶಿ ಮಹಿಳೆ ಜೊತೆ ಪ್ರೀತಿ, ಮದುವೆ
ಗುಲ್ಶನ್ ದೇವಯ್ಯ 2012ರಲ್ಲಿ ಗ್ರೀಸ್​ನ ಕಲ್ಲಿರ್ರಾಯ್ ಟ್ಜಿಯಾಫೆಟಾ ಜೊತೆ ಮದುವೆಯಾಗಿದ್ರು.. ಆಕೆ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ವೇಳೆ ಇಬ್ಬರ ನಡುವೆ ಪ್ರೀತಿಯ ಚಿಗುರೊಡೆದಿತ್ತು. ಅದರಂತೆ, ಇಬ್ಬರು ಮದುವೆಯಾಗಿ ಸುಖ ಸಂಸಾರವನ್ನೂ ಆರಂಭಿಸಿದ್ರು. ಆದ್ರೆ ಇಬ್ಬರ ನಡುವಿನ ಸಂಸ್ಕೃತಿ ಬೇರೆಯಾದ ಕಾರಣ ಕಾಲ ಕಳೆದಂತೆ ಸಣ್ಣ ಸಣ್ಣ ಭಿನ್ನಾಭಿಪ್ರಾಯ ಮೂಡತೊಡಗಿತು. ಈ ಸಣ್ಣ ಬೇಸರಗಳು ದೊಡ್ಡದಾಗಿ ಡಿವೋರ್ಸ್​ ಡೋರ್ ಬಡೆಯುವಂತೆ ಮಾಡಿತು. ಅದರಂತೆ 2020ರಲ್ಲಿ ಗುಲ್ಶನ್ ಹಾಗೂ ಕಲ್ಲಿರ್ರಾಯ್ ಇಬ್ಬರು, ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡ್ರು.. ಇಲ್ಲಿಗೆ ಗುಲ್ಶನ್ ದೇವಯ್ಯ ಲವ್​ಸ್ಟೋರಿ ಮುಗಿದಿಲ್ಲ.. ಬದಲಾಗಿ, ಅಸಲಿ ಪ್ರೇಮ ಕಥೆ ಶುರುವಾಗಿದ್ದೇ ಇಲ್ಲಿಂದ..
ಗುಲ್ಷನ್ ದೇವಯ್ಯ ಮತ್ತು ಪತ್ನಿ ಕರ್ಲಿರಾಯ್ ಟ್ಜಿಯಾಫೆಟಾ ಜೊತೆ ಜೊತೆಯಲ್ಲಿ!
ಡಿವೋರ್ಸ್ ಬಳಿಕ ಮತ್ತೆ ಲವ್ ಶುರು !
2020ಕ್ಕೆ ಡಿವೋರ್ಸ್​ ಆದ ಬಳಿಕ 2023ರಲ್ಲಿ ಅಂದ್ರೆ ಈ ವಿಚ್ಛೇದನ ಪಡೆದ 3 ವರ್ಷಗಳ ಬಳಿಕ ಮತ್ತೆ ಇಬ್ಬರ ನಡುವೆ ಸೆಕೆಂಡ್ ಟೈಂ ಪ್ರೀತಿ ಮೂಡತೊಡಗಿತ್ತು. ಮತ್ತೆ ಕಲ್ಲಿರ್ರಾಯ್ ಟ್ಜಿಯಾಫೆಟಾ ಹಾಗೂ ಗುಲ್ಶನ್ ದೇವಯ್ಯ ಡೇಟಿಂಗ್ ಮಾಡೋದಕ್ಕೆ ಶುರು ಮಾಡಿದ್ರು. ಈ ವಿಚಿತ್ರ ಪ್ರೀತಿಯ ಬಗ್ಗೆ ಒಂದೊಮ್ಮೆ ಸಂದರ್ಶನದಲ್ಲಿ ಮಾತನಾಡಿದ್ದ ಗುಲ್ಶನ್​, ನಮ್ಮಿಬ್ಬರದ್ದು ವಿಶೇಷ ಬಾಂಧವ್ಯ ಅಂತಾ ಹಾಡಿಹೊಗಳಿದ್ರು. ನಾವಿಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತೇವೆ, ನಮ್ಮ ನಡುವೆ ಇನ್ನೂ ಬಲವಾದ ಬಾಂಧವ್ಯವಿದೆ. ಈ ಬಂಧ ಯಾವಾಗಲೂ ಹಾಗೆಯೇ ಇರುತ್ತೆ. ಆರಂಭದಲ್ಲಿ ಈ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ರೆ ಬದಲಾದ ಪರಿಸ್ಥಿತಿ ನಮ್ಮನ್ನ ಮತ್ತೆ ಸೇರುವಂತೆ ಮಾಡಿತ್ತು ಅಂತಾ ಹೇಳಿದ್ದರು. ಇದರ ಜೊತೆಗೆ ತಮ್ಮ ಮಾಜಿ ಪತ್ನಿಯೊಂದಿಗೆ ಡೇಟಿಂಗ್​ ಮಾಡ್ತಿರೋದನ್ನ ಒಪ್ಪಿಕೊಂಡಿದ್ದರು ಕೂಡ. ಈಗಲೂ ಕಲ್ಲಿರ್ರಾಯ್ ಹಾಗೂ ಗುಲ್ಶನ್ ಪ್ರತ್ಯೇಕವಾಗಿಯೇ ಇದ್ದಾರೆ. ಆದ್ರೆ ಪ್ರೀತಿಯಲ್ಲಿ ಒಂದಾಗಿದ್ದಾರೆ.
ಬಾಲಿವುಡ್​ನಲ್ಲಿ ಮಿಂಚ್ತಿರೋ ಕೊಡವ!
ಬಾಲಿವುಡ್​ ಸಿನಿಮಾಗಳಲ್ಲಿ ಗುರುತಿಸಿಕೊಂಡಿರೋ ಗುಲ್ಶನ್ ದೇವಯ್ಯ ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ಕೊಡವ ಕುಟುಂಬದಲ್ಲಿ ಜನಿಸಿದರು. ಬೆಂಗಳೂರಿನ ಥಿಯೇಟರ್‌ಗಳಲ್ಲಿ ನಟಿಸುವ ಮೂಲಕ ತಮ್ಮ ನಟನಾ ವೃತ್ತಿಜೀವನ ಆರಂಭಿಸಿದ್ರು. ಹಲವಾರು ನಾಟಕಗಳಲ್ಲಿ ಅಭಿನಯಿಸಿದ ನಂತರ, ಬಾಲಿವುಡ್‌ನಲ್ಲಿ ದೊಡ್ಡ ಅವಕಾಶಗಳನ್ನ ಹುಡುಕುತ್ತಾ ಮುಂಬೈಗೆ ಹಾರಿದ್ದರು. ಬಳಿಕ ಸಿಕ್ಕ ಸಣ್ಣ-ಪುಟ್ಟ ಅವಕಾಶಗಳನ್ನ ಸದುಪಯೋಗ ಮಾಡಿಕೊಂಡು, ಇಂದು ಹಿಂದಿ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಸೈತಾನ್, ಹಂಟರ್, ಹೇಟ್ ಸ್ಟೋರಿ ಮುಂತಾದ ಹಲವು ಹಿಂದಿ ಸಿನಿಮಾಗಳಲ್ಲಿ ಗುಲ್ಶನ್ ದೇವಯ್ಯ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇದೀಗ ಕಾಂತಾರ-1 ಸಿನಿಮಾದಲ್ಲೂ ತಮ್ಮ ವಿಭಿನ್ನ ಶೈಲಿಯ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.