/newsfirstlive-kannada/media/media_files/2025/10/15/deepthi-manne-marriage-2025-10-15-13-36-04.jpg)
ದೀಪ್ತಿ ಮನ್ನೆ ಹಾಗೂ ರೋಹನ್ ರೆಡ್ಡಿ
ಪದ್ಮಾವತಿ ಧಾರಾವಾಹಿ ಇವತ್ತಿಗೂ ಜನ ಮರ್ತಿಲ್ಲ. ಕಥೆ, ಅಭಿನಯ ಎಲ್ಲದ್ರಲ್ಲೂ ಗೆದ್ದ ಧಾರಾವಾಹಿ. ಹೊಸ ಪ್ರತಿಭೆಗಳಾಗಿದ್ದ ತ್ರಿವಿಕ್ರಮ್​ ಹಾಗೂ ದೀಪ್ತಿ ಮನ್ನೆ ಅವ್ರನ್ನ ಪರಿಚಯಿಸಿತ್ತು. ದಶಕ ಕಳೆದ್ರೂ ಈ ಜೋಡಿಯನ್ನ ಪದ್ಮಾವತಿ​ ಮೂಲಕವೇ ಗುರುತಿಸುತ್ತಾರೆ. ಸದ್ಯ ವಿಚಾರ ಸೀರಿಯಲ್​ ಬಗ್ಗೆ ಅಲ್ಲ. ನಾಯಕಿ ಪಾತ್ರ ಮಾಡಿದ್ದ ದೀಪ್ತಿ ಹೊಸ ಲೈಫ್​ ಶುರು ಮಾಡ್ತಿದ್ದಾರೆ.
ಹೌದು, ಪದ್ಮಾವತಿ ನಂತರ ತೆಲುಗು ಕಿರುತೆರೆ ದೀಪ್ತಿ ಅವ್ರನ್ನ ಬಾಚಿ ತಬ್ಬಿತ್ತು. ತೆಲುಗು ಇಂಡಸ್ಟ್ರಿಯಲ್ಲೇ ಸೆಟ್ಲ್​ ಆಗಿದ್ದಾರೆ ನಟಿ. ಸದ್ಯ ಜಗದಾದ್ರಿ ಧಾರಾವಾಹಿಯಲ್ಲಿ ಅಭಿನಯಿಸ್ತಿದ್ದಾರೆ. ಸಖತ್​ ರಗಡ್​ ಆಗಿರೋ ಪಾತ್ರ ಇದು. ಸತತವಾಗಿ ಜೀ ಕುಟುಂಬ ಅವಾರ್ಡ್​ ಗೆದ್ದು, ಅಪಾರ ಅಭಿಮಾನಿಗಳನ್ನ ಗಳಿಸಿದ್ದಾರೆ. ಈ ಯಶಸ್ಸಿನ ನಡುವೆ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ ನಟಿ.
ವಿಶೇಷ ಫೋಟೋಶೂಟ್​ ಮೂಲಕ ಭಾವಿ ಪತಿ, ಗೆಳೆಯನನ್ನ ಪರಿಚಯಿಸಿದ್ದು, ರೋಹನ್​ ರೆಡ್ಡಿ ಎಂಬವವರನ್ನ ವರಿಸುತ್ತಿದ್ದಾರೆ ನಟಿ.
ಡಿಯರ್​ ರೋಹನ್, ನಾನು ಕಾಯುತ್ತಿದ್ದ ವ್ಯಕ್ತಿ ನೀವು, ದೇವರು ಆಶೀರ್ವಾದಿಸಿದ ಸ್ವರ್ಗೀಯ ಉಡುಗೊರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಥ್ಯಾಂಕ್ಯೂ. ಐ ಲವ್​ ಯೂ ಎಂದು ಫೋಟೋಗಳಿಗೆ ಕ್ಯಾಪ್ಶನ್​ ನೀಡಿದ್ದಾರೆ ನಟಿ.
ಇತ್ತಿಚೀಗೆ ನಡೆದ ಜೀ ತೆಲುಗು ಕುಟುಂಬ ಅವಾರ್ಡ್ಸ್​ನಲ್ಲಿಯೂ ನವ ವಧು ದೀಪ್ತಿಗೆ ಅರಶಿನ, ಕುಂಕುಮ ನೀಡಿ ಪ್ರೀತಿಯಿಂದ ಹಾರೈಸಿದ್ದಾರೆ. ರೋಹನ್​ ಇದು ನನ್ನ ಇನ್ನೊಂದು ಕುಟುಂಬ. ಇಲ್ಲಿಂದಲೇ ಎಲ್ಲರನ್ನ ಪರಿಚಯಿಸುತ್ತಿದ್ದೇನೆ. ಐ ಲವ್​ ಯೂ ಎಂದು ನಾಚಿ ನೀರಿಗಿದ್ದಾರೆ ದೀಪ್ತಿ.
ಮದುವೆ ಯಾವಾಗ ಜರುಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಒಟ್ನಲ್ಲಿ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ನಮ್ಮ ಕಡೆಯಿಂದಲೂ ದೀಪ್ತಿ ಮನ್ನೆ ಅವ್ರಿಗೆ ಕಂಗ್ರಾಟ್ಸ್​.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.