ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ಯಾಲೆಸ್ಟೈನ್ ಸಿನಿಮಾ ವಿವಾದ: ರಾಯಭಾರಿ ಪ್ರಕಾಶ್ ರಾಜ್ ಒತ್ತಾಯ ಏನು?

ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ಯಾಲೆಸ್ಟೈನ್ ಸಿನಿಮಾ ವಿವಾದ ಶುರುವಾಗಿದೆ. ಪ್ಯಾಲೆಸ್ಟೈನ್ ಜನರ ನೋವು, ಕಷ್ಟಗಳನ್ನು ಬಿಂಬಿಸುವ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇಲ್ಲ. ಆದರೇ, ಪ್ಯಾಲೆಸ್ಟೈನ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕೊಡಿ ಅಂತ ನಟ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ.

author-image
Chandramohan
Bangalore film festival
Advertisment

ಬೆಂಗಳೂರು ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆರಂಭವಾಗಿದೆ. ಫಿಲ್ಮ್ ಫೆಸ್ಟಿವಲ್ ನಲ್ಲಿ ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ಆದರೇ, ಇದರ ಮಧ್ಯೆ ಫ್ಯಾಲೆಸ್ಟೈನ್ ಸಿನಿಮಾ ವಿಷಯವಾಗಿ ವಿವಾದವೂ ಶುರುವಾಗಿದೆ. 
ಬೆಂಗಳೂರು ಇಂಟರ್ ನ್ಯಾಷನಲ್‌  ಫಿಲ್ಮ್ ಫೆಸ್ಟಿವಲ್ ಅಂದ್ರೆ ಅಲ್ಲಿ ಬರೀ ಬಣ್ಣದ ಲೋಕ ಮಾತ್ರ ಇರಲ್ಲ, ಜಗತ್ತಿನ ಕಹಿ ಸತ್ಯಗಳೂ ಇರುತ್ತಾವೆ. ಆದ್ರೆ ಈ ಬಾರಿ ಬೆಂಗಳೂರಿನಲ್ಲಿ ಪ್ರದರ್ಶನವಾಗಬೇಕಿದ್ದ 'ಪ್ಯಾಲೇಸ್ತೈನ್' ಕಥೆಗಳಿಗೆ ಡೆಲ್ಲಿಯಿಂದ ಬ್ರೇಕ್ ಬಿದ್ದಿದೆ! "ಗಾಜಾದ ಜನರ ಕಣ್ಣೀರು ಬೆಂಗಳೂರಿಗೆ ಬೇಡ" ಅಂತ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದ್ಯಾ? ರಾಯಭಾರಿ ಪ್ರಕಾಶ್ ರಾಜ್ ಕೆಂಡಾಮಂಡಲ ಆಗಿರೋದ್ಯಾಕೆ? ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ..

ಸಿನಿಮಾ ಅಂದ್ರೆ ಬರೀ ಫೈಟು, ಹಾಡು ಅಷ್ಟೇ ಅಲ್ಲ.. ನೋವಿನ ಕಥೆಗಳೂ ಇರ್ತವೆ. ಬೆಂಗಳೂರಿನ 17ನೇ ಚಲನಚಿತ್ರೋತ್ಸವದಲ್ಲಿ ಈ ಭಾರಿ ಪ್ಯಾಲೇಸ್ತೈನ್ ದೇಶದ ಜನರ ಸಂಕಷ್ಟದ ಕಥೆಗಳನ್ನ ಹೇಳೋ ಸಿನಿಮಾಗಳು ಪ್ರದರ್ಶನವಾಗಬೇಕಿತ್ತು. ಆದ್ರೆ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಇವುಗಳಿಗೆ 'ನೋ' ಅಂದಿದೆ. ಸೆನ್ಸಾರ್ ವಿನಾಯಿತಿ ಕೊಡೋಕೆ ಹಿಂದೇಟು ಹಾಕಿದೆ. ಅಲ್ಲಿಗೆ ಪ್ಯಾಲೇಸ್ತೈನ್ ಜನರ ಧ್ವನಿ ಸಿನೆಮಾ ಪರದೆಯ ಮೇಲೆ ಮೂಡೋಕೆ ಮುನ್ನವೇ ಮೌನವಾಗಿದೆ!

ಇದೇ ವಿಚಾರ ಇಟ್ಕೊಂಡು ಪ್ರಕಾಶ್ ರಾಜ್ ಈಗ ಅಖಾಡಕ್ಕೆ ಇಳಿದಿದ್ದಾರೆ. "ನೋಡಿ.. ಪ್ಯಾಲೇಸ್ತೈನ್‌ನಲ್ಲಿ ಜನ ಸಾಯ್ತಿದ್ದಾರೆ, ಆ ನೋವನ್ನ ಇಲ್ಲಿ ತೋರಿಸೋಕೆ ಕೇಂದ್ರಕ್ಕೆ ಯಾಕೆ ಭಯ? ಕೇರಳದವರು ಗಂಡಸ್ತನ ತೋರಿಸಿ ಸಿನಿಮಾಗಳನ್ನ ಪ್ರದರ್ಶನ ಮಾಡಿದ್ದಾರೆ. ನಮ್ಮ ಸಿದ್ದರಾಮಯ್ಯ ಸರ್ಕಾರ ಕೂಡ ಅದೇ ರೀತಿ ಗಟ್ಟಿಯಾದ ನಿರ್ಧಾರ ತಗೋಬೇಕು" ಅಂತ ನೇರವಾಗಿಯೇ ಸವಾಲು ಹಾಕಿದ್ದಾರೆ.

Bangalore film festival (1)



ಈ ವಿವಾದ ಈಗ ಬರೀ ಸಿನಿಮಾಗೆ ಸೀಮಿತವಾಗಿಲ್ಲ. ಇದೊಂದು ಪೊಲಿಟಿಕಲ್ ಫೈಟ್ ಆಗಿ ಬದಲಾಗಿದೆ. ಯಾಕಂದ್ರೆ, ವಿಶ್ವಸಂಸ್ಥೆಯಲ್ಲಿ ಪ್ಯಾಲೇಸ್ತೈನ್ ಪರ ವೋಟ್ ಹಾಕೋ ಮೋದಿ ಸರ್ಕಾರ, ಅದೇ ಪ್ಯಾಲೇಸ್ತೈನ್ ಸಿನಿಮಾ ತೋರಿಸೋಕೆ ಯಾಕೆ ತಡೆ ಹಿಡಿತಿದೆ ಅನ್ನೋದು ಸದ್ಯದ ಪ್ರಶ್ನೆ. ಸಿಎಂ ಸಿದ್ದರಾಮಯ್ಯ ಕೂಡ ಈ ಬಗ್ಗೆ ಸಾಫ್ಟ್ ಆಗಿಯೇ ಬ್ಯಾಟಿಂಗ್ ಮಾಡಿದ್ದು, ಸಿನಿಮಾ ಸಮಾಜದ ಕನ್ನಡಿ ಆಗಿರಬೇಕು ಅಂದಿದ್ದಾರೆ.
ಒಂದ್ಕಡೆ ಕಲಾ ಪ್ರೇಮಿಗಳು ಸಿನಿಮಾ ಪ್ರದರ್ಶನ ಆಗಲಿ ಅಂತಿದ್ದಾರೆ. ಇನ್ನೊಂದ್ಕಡೆ ಕೇಂದ್ರ ಸರ್ಕಾರದ ಈ ನಿರ್ಬಂಧ ರಾಜತಾಂತ್ರಿಕ ಕಾರಣಕ್ಕಾ ಅಥವಾ ರಾಜಕೀಯಕ್ಕಾ ಅನ್ನೋ ಚರ್ಚೆ ಜೋರಾಗಿದೆ. ಕೇರಳದ ಹಾದಿಯಲ್ಲಿ ಕರ್ನಾಟಕ ಕೂಡ ಬಂಡಾಯ ಎದ್ದು ಈ ಸಿನಿಮಾಗಳನ್ನ ಪ್ರದರ್ಶನ ಮಾಡುತ್ತಾ? ಅಥವಾ ಕೇಂದ್ರದ ಆದೇಶಕ್ಕೆ ಶರಣಾಗುತ್ತಾ?  ಪ್ಯಾಲೇಸ್ತೈನ್ ಜನರ ಕಣ್ಣೀರಿಗೆ ಬೆಂಗಳೂರಿನಲ್ಲಿ ಬೆಲೆ ಸಿಗುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bangalore film festival Palestine cinema contraversy
Advertisment