ಪವಿತ್ರಾಗೌಡಗೆ ಇಂದು ಹುಟ್ಟುಹಬ್ಬದ ಸಂಭ್ರಮ: ಮಗಳು ಖುಷಿಗೌಡಯಿಂದ ತಾಯಿಗೆ ವಿಶ್ ಮಾಡಿ ಪೋಸ್ಟ್

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟಿ ಪವಿತ್ರಾಗೌಡಗೆ ಇಂದು ಹುಟ್ಟುಹಬ್ಬ. ಆದರೇ ಅದನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಪವಿತ್ರಾಗೌಡ ಈಗ ಜೈಲುಪಾಲಾಗಿದ್ದಾರೆ. ಮಗಳು ಖುಷಿ ಗೌಡ, ತಾಯಿ ಪವಿತ್ರಾಗೆ ಇನ್ಸಾಟಾಗ್ರಾಮ್ ನಲ್ಲಿ ಬರ್ತ್ ಡೇ ವಿಶ್ ಮಾಡಿದ್ದಾರೆ.

author-image
Chandramohan
pavithra gowda and kushi gowda

ಪವಿತ್ರಾಗೌಡ ಮತ್ತು ಮಗಳು ಖುಷಿ ಗೌಡ

Advertisment
  • ಪವಿತ್ರಾಗೌಡಗೆ ಇಂದು ಬರ್ತ್ ಡೇ ಸಂಭ್ರಮ
  • ಆದರೇ, ಸಂಭ್ರಮದಿಂದ ಆಚರಿಸಲಾಗದೇ ಜೈಲಿನಲ್ಲಿರುವ ಪವಿತ್ರಾ
  • ತಾಯಿ ಪವಿತ್ರಾಗೆ ಬರ್ತ್ ಡೇ ವಿಶ್ ಮಾಡಿದ ಮಗಳು ಖುಷಿ


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನ ಎ1 ಆರೋಪಿ ಹಾಗೂ ನಟಿ  ಪವಿತ್ರಾಗೌಡ ಬರ್ತಡೇಗೆ ಮಗಳು ಖುಷಿಗೌಡ  ಇನ್ಸಾ ಸ್ಟಾಗ್ರಾಮ್ ನಲ್ಲಿ  ಪೋಸ್ಟ್  ಮಾಡಿದ್ದಾರೆ. ಇನ್ಸಾ ಟಾಗ್ರಾಮ್ ನಲ್ಲಿ ತಾಯಿ ಪವಿತ್ರಾಗೌಡಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಮಗಳು ಖುಷಿ ಪೋಸ್ಟ್ ಮಾಡಿದ್ದಾರೆ. ತಾಯಿಯ ಪೋಟೋ ಜೊತೆ ಭಾವುಕ ಪೋಸ್ಟ್ ಮಾಡಿದ್ದಾರೆ.  ಹ್ಯಾಪಿ ಬರ್ತಡೇ ಮೈ ಫಾರೆವರ್ ಕ್ಯೂಟಿ ಎಂದು ಮಗಳು ಖುಷಿ ಗೌಡ ತಾಯಿಗೆ ವಿಶ್ ಮಾಡಿದ್ದಾರೆ. ಸಮಯ ಎಷ್ಟು ವೇಗವಾಗಿ ಹಾರಿ ಹೋಗುತ್ತಿದ್ದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ.  ಆದರೇ ನಿನ್ನ ಜೊತೆ ಕಳೆದ ಸಮಯ ತುಂಬ ಕಡಿಮೆ ಎಂದು ಪೋಸ್ಟ್ ಮಾಡಿದ್ದಾರೆ.  ಇನ್ಸಾಟಾಗ್ರಾಮ್ ನಲ್ಲಿ ತಾಯಿ ಪವಿತ್ರಾ ಗೌಡ ಪೋಟೋ ಹಂಚಿಕೊಂಡು ಮಗಳು ಖುಷಿಗೌಡ ವಿಶ್ ಮಾಡಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pavithra gowda
Advertisment