ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ 2025- 26ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ರಾಜ್ ಅವರು, ನನಗೆ ಬಹಳ ಭಾವನಾತ್ಮಕವಾದ ಕ್ಷಣವಿದು. 4 ದಶಕಗಳ ಹಿಂದೆ ಸೆಂಟ್​ ಜೋಸೆಪ್​ ಕಾಲೇಜಿನಲ್ಲಿ ಕಾಮರ್ಸ್​ ಓದುತ್ತಿದ್ದೆ. ನಾನು ಬ್ಯಾಂಕ್ ಮ್ಯಾನೇಜರ್ ಆಗಬೇಕು ಎಂದು ಅನಿಸಿಲ್ಲ. ಏನು ಮಾಡಬೇಕೆಂದು ಗೊತ್ತಿರಲಿಲ್ಲ. ನಾಟಕ, ನಟನೆ ಸ್ವಲ್ಪ ಮಾಡುತ್ತಿದ್ದೆ. ಏನು ಗೊತ್ತಿಲ್ಲದೇ ನಡೆದುಕೊಂಡು ಕಲಾ ಕ್ಷೇತ್ರಕ್ಕೆ ಬಂದೆ. 4 ದಶಕಗಳ ಹಿಂದೆ ಇದೇ ಕಲಾ ಕ್ಷೇತ್ರದ ಮೆಟ್ಟಿಲುಗಳ ಮೇಲೆ ಕುಳಿತು ಏನು ಮಾಡಬೇಕು ಎಂದು ಕನಸು ಕಾಣುತ್ತಿದ್ದೇ ಎಂದು ಹೇಳಿದ್ದಾರೆ.
ಕಲಾ ಕ್ಷೇತ್ರದಲ್ಲಿ ಯಾವುದಾದರೂ ನಾಟಕ ನಡೆಯಬೇಕಿದ್ದರೇ ಬಂದು ನೋಡುತ್ತಿದ್ದೆ, ನಿದ್ದೆ ಮಾಡುತ್ತಿದ್ದೆ, ಇಲ್ಲೇ ಊಟನೂ ಮಾಡುತ್ತಿದ್ದೆ. ಶಂಕರ್ ನಾಗ್ ಅವರು ನಾಗಮಂಡಲ ನಾಟಕ ಮಾಡಿದ್ದಾಗ ನಾನು, ಬಿ ಸುರೇಶ್ ಅವರು ಮೇಲೆ ಬಾಲ್ಕನಿಯಲ್ಲಿ ಕುಳಿತು ನೋಡಿದ್ದೇವು. ಕನ್ನಡ ಸಾಹಿತ್ಯ, ಅದರ ವೈಶಿಷ್ಟ್ಯ, ಹಲವು ನಾಟಕಗಳು, ಹಲವು ಅನುಭವಗಳು, ಕನ್ನಡ ಅಂದರೆ ಏನು, ಕನ್ನಡದ ಶ್ರೀಮಂತಿಕೆ ಏನು ಎನ್ನುವುದು ಕಲಿತಿದ್ದು ಇದೇ ಕಲಾ ಕ್ಷೇತ್ರದಿಂದ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us