/newsfirstlive-kannada/media/media_files/2025/10/18/punith-rajkumar03-2025-10-18-12-51-21.jpg)
ಪಿಆರ್‌ಕೆಸ್ಟಾರ್ ಫ್ಯಾನಡಮ್ ಆ್ಯಪ್ ಲಾಂಚ್‌ಗೆ ಮುಹೂರ್ತ ನಿಗದಿ
ಪುನೀತ್ ರಾಜಕುಮಾರ್ ಅವರ ಹೆಸರಿನ ಪಿಆರ್‌ಕೆ ಫ್ಯಾನಡಮ್ ಆ್ಯಪ್ ಇದೇ ಅಕ್ಟೋಬರ್ 25 ರಂದು ಲಾಂಚ್ ಆಗುತ್ತಿದೆ. ನಟ ಪುನೀತ್ ರಾಜ್ ಕುಮಾರ್ ಹೆಸರು ಕರ್ನಾಟಕದಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ಅಜರಾಮರ. ಅದನ್ನು ಮತ್ತಷ್ಟು ಸ್ಮರಣೀಯವಾಗಿಸಲು ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪಿಆರ್‌ಕೆ ಸ್ಟಾರ್ ಫ್ಯಾನ್ ಡಮ್ ಆ್ಯಪ್ ಲಾಂಚ್ ಮಾಡಲು ಸಜ್ಜಾಗಿದ್ದಾರೆ.
PRKSTARFANDOM ಆ್ಯಪ್ ಇದೇ ಅಕ್ಟೋಬರ್ 25 ರಂದು ಲಾಂಚ್ ಆಗುತ್ತಿದೆ. ಈ ಆ್ಯಪ್ ಲಾಂಚ್ ಮಾಡಲು ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ.
ಪಿಆರ್‌ಕೆ ಸ್ಟಾರ್ ಫ್ಯಾನ್ ಡಮ್ ಆ್ಯಪ್ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಇಂದು ಅಧಿಕೃತವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಜೊತೆಗೆ 3 ನಿಮಿಷ 21 ಸೆಕೆಂಡ್ ಗಳ ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಜನರ ಜೊತೆ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಕಿಚ್ಚ ಸುದೀಪ್ ವಾಯ್ಸ್ ಓವರ್ ಕೊಟ್ಟಿರೋದು ವಿಶೇಷ.
ವಿಡಿಯೋದಲ್ಲಿ ಏನು ಹೇಳಿದ್ದಾರೆ ಅಂದರೇ,
ಕರುನಾಡಿನ ಹೂದೋಟದಲ್ಲಿ ಅರಳಿದ ರಾಜಪುಷ್ಪ, ಅಪ್ಪು. 1975ರಲ್ಲಿ ರಾಜನ ಮಗನಾಗಿ ಹುಟ್ಟಿದ್ದರು. ಸಾಮಾನ್ಯರ ಜೊತೆ ಜೊತೆಯಾಗಿ ಬೆಳೆದರು. ಪುಟ್ಟ ವಯಸ್ಸಿನಲ್ಲಿ ಬೆಟ್ಟದ ಹೂವು ಆಗಿ ರಾಷ್ಟ್ರಪ್ರಶಸ್ತಿ ಪಡೆದರು. ಅಪ್ಪನ ತೇಜಸ್ಸು ಅನ್ನು ಅಭಿನಯದಲ್ಲಿ ತಂದರು. ಅಪ್ಪನ ವರ್ಚಸ್ಸು ಅನ್ನು ಅವರ ನಗುವಿನಲ್ಲಿ ತುಂಬಿಕೊಂಡರು. ಅಶ್ವಿನಿ ಅನ್ನೋ ಅನುಬಂಧದ ಜೊತೆ ಅಜರಾಮಾರ ಆದರು. ಅವರು ಮುಟ್ಟಿದ್ದೆಲ್ಲಾ ಹೆಚ್ಚು, ಕೊಟ್ಟಿದ್ದೆಲ್ಲಾ ಬ್ಲಾಕ್ ಬಸ್ಟರ್. ಜೀವನನಾ ಜನಕ್ಕಾಗಿ ಮೀಸಲಿಟ್ಟು, ಜೀವನ ನಮ್ಮೆಲ್ಲರ ಹೃದಯಗಳಲ್ಲಿ ಬಚ್ಚಿಟ್ಟರು. ಮಾಡಿದ ಸಹಾಯ ಲೆಕ್ಕಕ್ಕಿಡದೇ, ಎಷ್ಚು ಸಾಧ್ಯವೋ ಅಷ್ಟು ಅಭಿಮಾನಿಗಳ ಇಷ್ಟ, ಕಷ್ಟಗಳಿಗೆ ಸ್ಪಂದಿಸಿದ್ದರು. ವಿಧಿ ಅನ್ನೋ ಆಟ ಒಂದು ದಿನ ಅಪ್ಪು ಅನ್ನೋ ಬೆ;ಳಕು ಅನ್ನು ನಮ್ಮಿಂದ ದೂರ ಮಾಡ್ತು. ಆ ಒಂದು ಜೀವಕ್ಕಾಗಿ ಕೋಟಿ ಕೋಟಿ ಜೀವಗಳು ಹಪಹಪಿಸಿದ್ದವು.
ಅವರು ಮಾಡಬೇಕಾದ ಪಾತ್ರಗಳು ಇನ್ನೂ ಇತ್ತು. ಅವರು ಹೇಳಬೇಕಾದ ಕಥೆಗಳು ಕೋಟಿ ಇತ್ತು. ಆ ಎಲ್ಲ ನಿರೀಕ್ಷೆಗಳನ್ನು ನಿಜ ಮಾಡೋಕ್ಕೆ, ಅಭಿಮಾನದ ಆಗಸದಲ್ಲಿ ಸಾವಿರಾರು ಬೆಳಕು ಸೇರಿ ಮೂಢಿ ಬರುತ್ತಿದೆ, ಅಪ್ಪು ಅನ್ನೋ ಆ ಮಹಾ ಬೆಳಕು. ಈ ಬೆಳಕಿನಲ್ಲಿ ನೀವು ಒಂದು ಕಿರಣವಾಗಿರಬಹುದು. ಆ ಕಥೆಗಳಲ್ಲಿ ನಿಮ್ಮದು ಒಂದು ಕಥೆ ಇರಬಹುದು. ಕರ್ನಾಟಕದ ಕೋಟ್ಯಾಂತರ ಹೃದಯಗಳಲ್ಲಿ ಅನುಕ್ಷಣ ಇರೋ ಸ್ಪಂದನೆ ಅಂದರೇ, ಅದು ನಮ್ಮ ಅಪ್ಪು. ಪ್ರಪಂಚದಲ್ಲಿ ಒಬ್ಬ ಸ್ಟಾರ್ ಗೋಸ್ಕರ ಚಿತ್ರರಂಗಗೋಸ್ಕರ ಸಮರ್ಪಣೆಯಾಗೋತ್ತಿರೋ ಮೊಟ್ಟ ಮೊದಲನೇ ಆ್ಯಪ್. ಫ್ಯಾನಡಮ್ ಆ್ಯಪ್, ಪಿಆರ್‌ಕೆ ಆ್ಯಪ್. ಹೇಳಬೇಕು ಅಂದರೇ, ಇದು ಕನ್ನಡದ ಆ್ಯಪ್ ಎಂಬ ಧ್ವನಿಯೊಂದಿಗೆ ಕಿಚ್ಚ ಸುದೀಪ್ ಅವರ ವಾಯ್ಸ್ ಓವರ್ ಅಂತ್ಯವಾಗುತ್ತೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಇಂದು ಟ್ವೀಟ್ ಮಾಡಿರುವ ವಿಡಿಯೋದ ಲಿಂಕ್ ಇಲ್ಲಿದೆ. ತಾವು ನೋಡಬಹುದು.
ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ...
— Ashwini Puneeth Rajkumar (@Ashwini_PRK) October 18, 2025
ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ #ಫ್ಯಾನ್ಡಮ್ ಆ್ಯಪ್
ಇದೇ ಅಕ್ಟೋಬರ್ 25ರಂದು ಅಧಿಕೃತ ಬಿಡುಗಡೆ.
ನಿಜವಾದ ಪ್ರೀತಿ ಎಂದಿಗೂ ಮಾಸುವುದಿಲ್ಲ ಎಂದು ನಂಬುವ ಪ್ರತಿಯೊಬ್ಬ ಅಭಿಮಾನಿಗೆ ಸಮರ್ಪಿತ…
From the heart of every… pic.twitter.com/4wmEERzmth
ಆಕ್ಟೋಬರ್ 25 ರಂದು ಪಿಆರ್‌ಕೆ ಸ್ಟಾರ್ ಫ್ಯಾನ್ ಡಮ್ ಆ್ಯಪ್ ಆರಂಭ ಎಂಬುದು ವಿಶೇಷ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.