Advertisment

ಕೈಯಲ್ಲಿ ತೆಂಗಿನಕಾಯಿ ಹಿಡಿದು ಮಂಟಪಕ್ಕೆ ಬಂದ ರಶ್ಮಿಕಾ: ಈ ತೆಲುಗು ಸಂಪ್ರದಾಯದ ಅಸಲಿ ಕಾರಣವೇನು?

ರಾಜಸ್ಥಾನದ ಉದಯಪುರದಲ್ಲಿರುವ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ಟಾಲಿವುಡ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಇವರ ಮದುವೆಯ ಸುಂದರ ಫೋಟೋಗಳು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿವೆ.

author-image
Ganesh Kerekuli
rashmika mandanna (18)
Advertisment

ರಾಜಸ್ಥಾನದ ಉದಯಪುರದಲ್ಲಿರುವ ಐಟಿಸಿ ಮೆಮೆಂಟೋಸ್ ಹೋಟೆಲ್‌ನಲ್ಲಿ ಟಾಲಿವುಡ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಇವರ ಮದುವೆಯ ಸುಂದರ ಫೋಟೋಗಳು ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿವೆ.

Advertisment

ಈ ಜೋಡಿಯ ಉಡುಗೆ, ಆಭರಣಗಳು ಹಾಗೂ ಮದುವೆಯ ಪ್ರತಿಯೊಂದು ಶಾಸ್ತ್ರಗಳು ಅಪ್ಪಟ ಟೆಂಪಲ್-ಸ್ಟೈಲ್ ಶೈಲಿಯಲ್ಲಿದ್ದವು. ಮದುವೆಯ ಈ ಎಲ್ಲಾ ವೈಭವದ ನಡುವೆ ನೆಟ್ಟಿಗರ ಗಮನ ಸೆಳೆದಿದ್ದು ವಧು ರಶ್ಮಿಕಾ ಮಂದಣ್ಣ ಅವರ Bridal Entry. ತಮ್ಮ ಪ್ರೀತಿಯ ಒಡೆಯ ವಿಜಯ್ ದೇವರಕೊಂಡ ಮದುವೆ ಮಂಟಪದಲ್ಲಿ ಕಾಯುತ್ತಿದ್ದಾಗ, ರಶ್ಮಿಕಾ ತಮ್ಮ ಕೈಯಲ್ಲಿ ಎಳೆಯ ಹಸಿರು ತೆಂಗಿನಕಾಯಿಯನ್ನು ಹಿಡಿದುಕೊಂಡು ಮಂಟಪದತ್ತ ಹೆಜ್ಜೆ ಹಾಕಿದರು.

ಇದನ್ನೂ ಓದಿ: ಬಿ.ಎಸ್‌.ಯಡಿಯೂರಪ್ಪಗೆ 84 ನೇ ಹುಟ್ಟುಹಬ್ಬದ ಸಂಭ್ರಮ- ರಾಜಕೀಯ ಜೀವನದ ಹಿನ್ನೋಟ ಇಲ್ಲಿದೆ ಓದಿ

ಸಾಮಾನ್ಯವಾಗಿ ವಧುವಿನ ಕೈಯಲ್ಲಿ ವಿಶೇಷವಾಗಿ ಅಲಂಕರಿಸಿದ ತೆಂಗಿನಕಾಯಿ ಇರುತ್ತದೆ. ಆದರೆ ರಶ್ಮಿಕಾ ಅತ್ಯಂತ ಸರಳವಾದ, ಯಾವುದೇ ಅಲಂಕಾರವಿಲ್ಲದ ಹಸಿರು ತೆಂಗಿನಕಾಯಿಯನ್ನು ಹಿಡಿದು ಬಂದಿದ್ದರು. ಈ ವಿಶಿಷ್ಟ ಸಂಪ್ರದಾಯದ ಮಹತ್ವವೇನು?

Advertisment

ತೆಲುಗು ಮದುವೆಯಲ್ಲಿ ತೆಂಗಿನಕಾಯಿ ಮಹತ್ವ

ತೆಲುಗು ವಿವಾಹ ಸಂಪ್ರದಾಯದಲ್ಲಿ ವಧು ಮಂಟಪಕ್ಕೆ ಬರುವಾಗ ಕೈಯಲ್ಲಿ 'ಕೊಬ್ಬರಿ ಬೊಂಡಾಂ' (Kobbari Bondam - ಎಳನೀರು/ತೆಂಗಿನಕಾಯಿ) ಹಿಡಿಯುವುದು ಬಹುಮುಖ್ಯ ಶಾಸ್ತ್ರವಾಗಿದೆ. 

ದೈವಿಕ ಆಶೀರ್ವಾದ

ವಧು ಕೈಯಲ್ಲಿ ತೆಂಗಿನಕಾಯಿ ಹಿಡಿಯುವುದು ದೈವಿಕ ಆಶೀರ್ವಾದ ಮತ್ತು ಮದುವೆ ಕಾರ್ಯದಲ್ಲಿ ದೇವಾನುದೇವತೆಗಳ ಉಪಸ್ಥಿತಿಯನ್ನು ಸಂಕೇತಿಸುತ್ತದೆ.

ಸಂತಾನೋತ್ಪತ್ತಿ ಮತ್ತು ಪರಿಶುದ್ಧತೆ

ತೆಂಗಿನಕಾಯಿಯನ್ನು ಫಲವತ್ತತೆ (ಸಂತಾನೋತ್ಪತ್ತಿ) ಮತ್ತು ಪರಿಶುದ್ಧತೆಯ ಸಂಕೇತ ಎಂದು ನಂಬಲಾಗಿದೆ. ವಧು ಕೊಬ್ಬರಿ ಬೊಂಡಾಂ ಹಿಡಿದು ಬಂದರೆ ಆಕೆಗೆ ನೆಮ್ಮದಿಯ ಸುಖಿ ದಾಂಪತ್ಯ ಪ್ರಾಪ್ತವಾಗುತ್ತದೆ ಎಂಬ ನಂಬಿಕೆಯಿದೆ. ಹಿಂದೂ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಿದ್ದರೂ ದೇವರಿಗೆ ತೆಂಗಿನಕಾಯಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದು ಭಕ್ತಿಯ ಸಂಕೇತವಾಗಿದ್ದು, ನಂತರ ಇದನ್ನು ಪವಿತ್ರ ಅಗ್ನಿಗೆ ಅರ್ಪಿಸಲಾಗುತ್ತದೆ. ಈ ರೀತಿ ತೆಂಗಿನಕಾಯಿ ಹಿಡಿದು ಬರುವ ಮೂಲಕ ವಧು ತನ್ನ ಪೂರ್ವಜರ ಸಂಪ್ರದಾಯಗಳನ್ನು ಗೌರವಿಸುತ್ತಾಳೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಾಳೆ ಎನ್ನಲಾಗುತ್ತದೆ.

Advertisment

ಇದನ್ನೂ ಓದಿ:ಶಾಸಕ ವಿನಯ ಕುಲಕರ್ಣಿಗೆ ಸುಪ್ರೀಂಕೋರ್ಟ್ ನಿಂದ ಜಾಮೀನು ಮಂಜೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

vijay deverakonda Rashmika Mandanna, vijay devarakonda rashmika mandanna
Advertisment
Advertisment
Advertisment