/newsfirstlive-kannada/media/media_files/2026/02/25/rashmika-and-vijay-devarakonda-8-2026-02-25-15-44-12.jpg)
/newsfirstlive-kannada/media/media_files/2026/02/25/rashmika-and-vijay-devarakonda-2026-02-25-15-44-32.jpg)
'ಡೆಸ್ಟಿನೇಷನ್ ವೆಡ್ಡಿಂಗ್'
'ಡೆಸ್ಟಿನೇಷನ್ ವೆಡ್ಡಿಂಗ್'ಗೆ (Destination Wedding) ಸಾಕ್ಷಿಯಾಗುತ್ತಿರುವ ಆ ಐಷಾರಾಮಿ ರೆಸಾರ್ಟ್ನ ಫೋಟೋಗಳು ಹಾಗೂ ಮದುವೆ ಖರ್ಚಿನ ವಿವರಗಳು ಸದ್ಯ ಇಂಟರ್ನೆಟ್ನಲ್ಲಿ ಭಾರೀ ಚರ್ಚೆಯಾಗುತ್ತಿವೆ.
/newsfirstlive-kannada/media/media_files/2026/02/25/rashmika-and-vijay-devarakonda-1-2026-02-25-15-45-02.jpg)
ಮದುವೆ ಎಲ್ಲಿ ನಡೆಯುತ್ತಿದೆ? ರೆಸಾರ್ಟ್ನ ವಿಶೇಷತೆಯೇನು?
'ವಿರೋಶ್' (Virosh) ಜೋಡಿಯು ಉದಯಪುರದ 'ಐಟಿಸಿ ಮೆಮೆಂಟೋಸ್' (ITC Mementos) ಎಂಬ ಅತ್ಯಂತ ಐಷಾರಾಮಿ ರೆಸಾರ್ಟ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅರಾವಳಿ ಬೆಟ್ಟಗಳ (Aravalli Hills) ನಡುವೆ ಇರುವ ಈ ರೆಸಾರ್ಟ್, ಪ್ರಕೃತಿ ಸೌಂದರ್ಯ ಹಾಗೂ ರಾಜಮನೆತನದ ವೈಭವದ ಅದ್ಭುತ ಸಂಯೋಜನೆಯಾಗಿದೆ. ನಗರದ ಜಂಜಾಟದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಹಿಲ್ಟಾಪ್ ರೆಸಾರ್ಟ್, ಶಾಂತ ವಾತಾವರಣದ ಜೊತೆಗೆ ಪ್ರೈವೆಸಿಗೆ ಹೇಳಿಮಾಡಿಸಿದ ತಾಣವಾಗಿದೆ.
/newsfirstlive-kannada/media/media_files/2026/02/25/rashmika-and-vijay-devarakonda-2-2026-02-25-15-45-24.jpg)
ರೆಸಾರ್ಟ್ನ ಬಾಡಿಗೆ ಹಾಗೂ ಮದುವೆ ಖರ್ಚು ಎಷ್ಟು?
ವರದಿಗಳ ಪ್ರಕಾರ, ಈ ಬೃಹತ್ ರೆಸಾರ್ಟ್ನಲ್ಲಿ ಒಟ್ಟು 117 ಐಷಾರಾಮಿ ಕೊಠಡಿಗಳು ಹಾಗೂ ಪ್ರೈವೇಟ್ ವಿಲ್ಲಾಗಳಿವೆ. ಇಲ್ಲಿನ ಸಾಮಾನ್ಯ ಕೊಠಡಿಯೊಂದರ ಒಂದು ರಾತ್ರಿಯ ಬಾಡಿಗೆ 20,000 ದಿಂದ 50,000 ರೂಪಾಯಿಗಳವರೆಗಿದೆ. ಇನ್ನು ಅತಿಥಿಗಳಿಗಾಗಿ ಕಾಯ್ದಿರಿಸಲಾಗಿರುವ ಪ್ರೀಮಿಯಂ ಸೂಟ್ಗಳು ಹಾಗೂ ಪ್ರೈವೇಟ್ ವಿಲ್ಲಾಗಳ ಬಾಡಿಗೆ ಬರೋಬ್ಬರಿ 70,000 ದಿಂದ ಆರಂಭವಾಗಿ 2 ಲಕ್ಷ ರೂಪಾಯಿಗಳವರೆಗಿದೆ.
/newsfirstlive-kannada/media/media_files/2026/02/25/rashmika-and-vijay-devarakonda-3-2026-02-25-15-45-53.jpg)
ಕನಿಷ್ಠ 90 ಲಕ್ಷದಿಂದ 2.5 ಕೋಟಿ ಖರ್ಚು
ಮೂಲಗಳ ಅಂದಾಜಿನ ಪ್ರಕಾರ, ರಶ್ಮಿಕಾ-ವಿಜಯ್ ಜೋಡಿಯ ಈ ರಾಯಲ್ ಡೆಸ್ಟಿನೇಷನ್ ಮದುವೆಗೆ ಕನಿಷ್ಠ 90 ಲಕ್ಷದಿಂದ 2.5 ಕೋಟಿ ರೂಪಾಯಿಗಳವರೆಗೆ (90 Lakhs to 2.5 Crores) ಖರ್ಚಾಗಲಿದೆಯಂತೆ. ಇದರಲ್ಲಿ ಅತಿಥಿಗಳ ವಾಸ್ತವ್ಯ, ಊಟೋಪಚಾರ ಹಾಗೂ ಡೆಕೋರೇಷನ್ ವೆಚ್ಚ ಸೇರಿದೆ.
/newsfirstlive-kannada/media/media_files/2026/02/25/rashmika-and-vijay-devarakonda-4-2026-02-25-15-46-22.jpg)
'ನೋ-ಫೋನ್ ಝೋನ್'
ಈ ಮದುವೆಯನ್ನು ಅತ್ಯಂತ ಖಾಸಗಿಯಾಗಿ ಇಡಲು ನಿರ್ಧರಿಸಲಾಗಿದ್ದು, ಕೇವಲ 100 ರಿಂದ 200 ಆಪ್ತರು ಹಾಗೂ ಕುಟುಂಬಸ್ಥರು ಮಾತ್ರ ಈ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಅತಿಥಿಗಳ ಪ್ರೈವೆಸಿ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಮದುವೆ ನಡೆಯುವ ಸಂಪೂರ್ಣ ಸ್ಥಳವನ್ನು 'ನೋ ಫೋನ್ ಝೋನ್' (No Phone Zone) ಎಂದು ಘೋಷಿಸಲಾಗಿದೆ.
/newsfirstlive-kannada/media/media_files/2026/02/25/rashmika-and-vijay-devarakonda-7-2026-02-25-15-46-47.jpg)
ಮಾ. 4 ರಂದು ಹೈದರಾಬಾದ್ನಲ್ಲಿ ರಿಸೆಪ್ಷನ್
ಕಳೆದ ವರ್ಷ (ಅಕ್ಟೋಬರ್ 3, 2025) ಹೈದರಾಬಾದ್ನಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಇದೀಗ ಫೆಬ್ರವರಿ 26 ರಂದು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಉದಯಪುರದಲ್ಲಿ ಮದುವೆ ಮುಗಿದ ಬಳಿಕ, ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರಿಗಾಗಿ ಅದ್ದೂರಿ ಆರತಕ್ಷತೆ (Reception) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
/newsfirstlive-kannada/media/media_files/2026/02/25/rashmika-and-vijay-devarakonda-5-2026-02-25-15-47-04.jpg)
/newsfirstlive-kannada/media/media_files/2026/02/25/rashmika-and-vijay-devarakonda-6-2026-02-25-15-47-18.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us