ಬೆಂಗಳೂರಿನ ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸಸಿಂಹ ಡಾ.ವಿಷ್ಣವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆ. ಈ ಸಂಬಂಧ ಅವರ ಅಭಿಮಾನಿಗಳು ಸ್ಟುಡಿಯೋ ಎದುರು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದರು. ಇದೇ ವೇಳೆ ನಿರ್ದೇಶಕ ರವಿ ಶ್ರೀವತ್ಸ ಅವರು ಕಣ್ಣೀರು ಹಾಕಿದ್ದಾರೆ.
ನ್ಯೂಸ್​ಫಸ್ಟ್ ಜೊತೆ ತುಂಬಾ ದುಃಖದಲ್ಲೇ ಮಾತನಾಡಿದ ನಿರ್ದೇಶಕ ರವಿ ಶ್ರೀವತ್ಸ ಅವರು, ಏನಿಲ್ಲ, ಎಲ್ಲ ಮುಗಿದು ಹೋಯಿತು. ಈಗ ಮತ್ತೆ ಎರಡನೇ ಬಾರಿ ವಿಷ್ಣು ಅವರನ್ನು ಕಳೆದುಕೊಂಡಂತೆ ಆಗಿದೆ. ಯಾರು ಇಲ್ಲ.. ಯಾರು ಇಲ್ಲ. ಎಲ್ಲ ಅನಾಥವಾಗಿದೆ ಇಲ್ಲಿ. ತುಂಬಾ ನೋವಾಗುತ್ತಿದೆ. ಇದು ನಮಗೆ ಕರಾಳ ದಿನವಾಗಿದೆ. ನಾನು ನಮ್ಮ ಯಜಮಾನನ ನಾಯಿ, ಬೊಗಳಬಹುದು. ಅದು ಬಿಟ್ಟರೇ ಅಯ್ಯೋ ಎಂದು ಅಳಬಹುದು ಅಷ್ಟೇ ಎಂದು ಕಣ್ಣೀರು ಹಾಕುತ್ತಿದ್ದರು.
ಸಿನಿಮಾ ಇಂಡಸ್ಟ್ರಿಗೆ ಬಂದಾಗ ನನಗೆ ನನ್ನ ಯಜಮಾನನೇ ಇಲ್ಲ ಎಂದು ನಮ್ಮ ಅಪ್ಪ, ಅಮ್ಮನ ಹತ್ತಿರ ಸಾಕಷ್ಟು ಬಾರಿ ಹೇಳಿದ್ದೇನೆ. ಯಾರನ್ನು ಕಟ್ಟಿಕೊಂಡು ನಾನು ಏನ್ ಮಾಡಬೇಕು. ತಿರುಗ ಯಾವಾತ್ತದರೂ ಒಂದಿನ ಬರುತ್ತೇನೆ. ಅದರೊಳಗೆ ಹೋಗೋಕೆ ಬಿಡಿ ಎಂದು ಪೊಲೀಸರನ್ನು ಕೇಳಿದೆ. ಸ್ವಲ್ಪ ಮಣ್ಣು ಎತ್ತುಕೊಂಡು ಬರುತ್ತೇನೆ ಎಂದೇ ಆದರೆ, ಪೊಲೀಸರು ಒಳಗೆ ಹೋಗೋಕೆ ಬಿಡಲಿಲ್ಲ ಎಂದು ರವಿ ಶ್ರೀವತ್ಸ ಅವರು ದುಃಖಿತರಾದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us