ದಾಖಲೆ ಬರೆದ ಟಾಕ್ಸಿಕ್ ರಾಯಲ್ ಎಂಟ್ರಿ : ಧುರಂಧರ್ 2 ಮುಂದೂಡಿಕೆಯಾಗುತ್ತಾ?

ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಈಗ ಭಾರತದ ಸಿನಿ ಇಂಡಸ್ಟ್ರಿಯಲ್ಲೇ ದೊಡ್ಡ ಸಂಚಲನ ಸೃಷ್ಟಿಸಿದೆ. ಕೇವಲ 22 ಗಂಟೆಯಲ್ಲಿ ಟಾಕ್ಸಿಕ್ ಸಿನಿಮಾ ಟೀಸರ್‌ ಯೂಟ್ಯೂಬ್ ನಲ್ಲಿ 4.8 ಕೋಟಿ ವೀವ್ಸ್ ಬಂದಿದೆ.

author-image
Chandramohan
toxic cinema views records

ಟಾಕ್ಸಿಕ್ ಸಿನಿಮಾಗೆ ಯೂಟ್ಯೂಬ್ ನಲ್ಲಿ ರೆಕಾರ್ಡ್ ವೀವ್ಸ್ !

Advertisment
  • ಟಾಕ್ಸಿಕ್ ಸಿನಿಮಾಗೆ ಯೂಟ್ಯೂಬ್ ನಲ್ಲಿ ರೆಕಾರ್ಡ್ ವೀವ್ಸ್ !
  • 22 ಗಂಟೆಯಲ್ಲಿ 4.8 ಕೋಟಿ ವೀವ್ಸ್ ದಾಖಲೆ
  • ಎಲ್ಲೆಲ್ಲೂ ಟಾಕ್ಸಿಕ್ ಸಿನಿಮಾದ ಬಗ್ಗೆ ಚರ್ಚೆ

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಬಿಡುಗಡೆ ಆಗಿರೋ ಟಾಕ್ಸಿಕ್ ಸಿನಿಮಾದ ಗ್ಲಿಂಪ್ಸ್ ನಿರೀಕ್ಷೆಗೂ ಮೀರಿದ ಹೈಪ್ ಸೃಷ್ಟಿಸಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.. ಯೂಟ್ಯೂಬ್ ನಲ್ಲಿ ಕಳೆದ 22 ಗಂಟೆಗಳಲ್ಲಿ ಬರೋಬ್ಬರಿ 48 ಮಿಲಿಯನ್ ವೀವ್ಸ್ ಗಳಿಸಿದ್ದು, ಸೋಷಿಯಲ್ ಮೀಡಿಯಾದಾದ್ಯಂತ ಟ್ರೆಂಡ್ ಸೃಷ್ಟಿಸಿದೆ. 48 ಮಿಲಿಯನ್ ಅಂದರೇ, 4.8 ಕೋಟಿ ವೀವ್ಸ್ ಬಂದಿದೆ. ಕೇವಲ 22 ಗಂಟೆಯಲ್ಲಿ ಯೂಟ್ಯೂಬ್ ನಲ್ಲಿ 4.8 ಕೋಟಿ ಜನರು ಟೀಸರ್ ವೀಕ್ಷಣೆ ಮಾಡಿದ್ದಾರೆ.  ಇನ್ನೂ ಸಿನಿಮಾ ಬಿಡುಗಡೆಯಾದ ಮೇಲೆ ಥಿಯೇಟರ್, ಮಲ್ಟಿಪ್ಲೆಕ್ಸ್ ನಲ್ಲಿ ಎಷ್ಟು ಕೋಟಿ ಜನರು ವೀಕ್ಷಣೆ ಮಾಡಬಹುದು ಅಂತ ಯಾರಾದರೂ ಊಹಿಸಬಹುದು. 

ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿ  ಇವತ್ತಿಗೂ ಲೀಡಿಂಗ್ ನಲ್ಲಿದ್ದು 5.50 ಲಕ್ಷಕ್ಕೂ ಅಧಿಕ ಪೋಸ್ಟ್ಗಳು ಟಾಕ್ಸಿಕ್ ಕುರಿತಾಗಿ ಅಪ್ಲೋಡ್ ಆಗಿದ್ದು, ಇದು ಕನ್ನಡ ಸಿನಿಮಾಗಳೇ ದೊಡ್ಡ ದಾಖಲೆ ಎನ್ನಬಹುದು..

ಧುರಂಧರ್ 2  ಮುಂದೂಡಿಕೆಯಾಗುತ್ತಾ?

ಟಾಕ್ಸಿಕ್ ಬಿಡುಗಡೆ ದಿನವೇ, ಧುರಂಧರ್ 2 ಸಿನಿಮಾನೂ ಬಿಡುಗಡೆ ಆಗ್ತಿದ್ದು, ಟಾಕ್ಸಿಕ್ ಗ್ಲಿಂಪ್ಸ್ ಬಿಡುಗಡೆ ಬಳಿಕ ಟಾಕ್ಸಿಕ್ಗೆ  ದೊಡ್ಡ ಹೈಪ್ ಸೃಷ್ಟಿಯಾಗಿದೆ.. ಸೋಷಿಯಲ್ ಮೀಡಿಯಾದಲ್ಲಿ ಧುರಂಧರ್ - ಟಾಕ್ಸಿಕ್ ಕ್ಲ್ಯಾಶ್ ಬಗ್ಗೆ ಚರ್ಚೆ ಆಗ್ತಿವೆ... ಧುರಂಧರ್ ಟೀಂ ಸಿನಿಮಾ ಮುಂದೂಡಿದರೆ ಒಳ್ಳೆಯ ಯೋಚನೆ ಅನ್ನುವಂತಹ ಪೋಸ್ಟ್ಗಳು ಹರಿದಾಡ್ತಿದ್ದು, ಧುರಂಧರ್ ಮುಂದಿನ ನಡೆ ಏನು ಅನ್ನೋದು ಎಲ್ಲರ ಕುತೂಹಲ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Toxic movie Toxic: A Fairy Tale for Grown-Ups
Advertisment