/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನ ವಿಚಾರಣೆ ಇಂದು ಬೆಂಗಳೂರಿನ 57 ನೇ ಸಿಸಿಎಚ್ ಕೋರ್ಟ್ ನಲ್ಲಿ ಆರಂಭವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ನಟ ದರ್ಶನ್ , ಪವಿತ್ರಾಗೌಡ ಸೇರಿದಂತೆ ಎಲ್ಲ ಆರೋಪಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದಾರೆ. ಇಂದು ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಹಾಗೂ ತಾಯಿ ರತ್ನಪ್ರಭಾರನ್ನು ಸಾಕ್ಷಿಯಾಗಿ ಪ್ರಾಸಿಕ್ಯೂಷನ್ ಕೋರ್ಟ್ ಗೆ ಹಾಜರುಪಡಿಸಿದೆ.
ಇಂದಿನ ಕೋರ್ಟ್ ವಿಚಾರಣೆಗೆ A16 ಕೇಶವಮೂರ್ತಿ ಹಾಗೂ A17 ನಿಖಿಲ್ ನಾಯ್ಕ್ ಗೈರು ಹಾಜರಾಗಿದ್ದಾರೆ. ಇನ್ನೂ ಖುದ್ದಾಗಿ ಕೋರ್ಟ್ ಗೆ ಹಾಜರಿರೋ ಆರೋಪಿಗಳ ಹಾಜರಾತಿಯನ್ನು ಕೋರ್ಟ್ ಜಡ್ಜ್ ಪಡೆದಿದ್ದಾರೆ.
ಕೋರ್ಟ್ ಹಾಲ್ ಗೆ ಎಸ್ ಪಿಪಿ ಪ್ರಸನ್ನ ಕುಮಾರ್, ರೇಣುಕಾ ಸ್ವಾಮಿ ತಂದೆ, ತಾಯಿ ಆಗಮಿಸಿದ್ದಾರೆ. ವಿಟ್ನೆಸ್ ಬಾಕ್ಸ್ ನಲ್ಲಿ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಬಂದು ನಿಂತಿದ್ದಾರೆ. ಪ್ರಮಾಣ ವಚನ ಹೇಳಿದ ನಂತರ ತಾಯಿ ರತ್ನಪ್ರಭಾ ಅವರ ಹೇಳಿಕೆಯನ್ನು ದಾಖಲಿಸಲಾಗುತ್ತೆ.
/filters:format(webp)/newsfirstlive-kannada/media/media_files/2025/10/24/bangalore-city-civil-court-2025-10-24-15-45-48.jpg)
ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ಪರ ವಕೀಲರನ್ನ ಹೊರತುಪಡಿಸಿ ಎಲ್ಲರನ್ನು ಜಡ್ಜ್ ಹೊರಗೆ ಕಳುಹಿಸಿದ್ದಾರೆ. ಕೋರ್ಟ್ ಹಾಲ್ ತುಂಬಿದ್ದ ಕಾರಣಕ್ಕೆ ಕೇಸ್ ಗೆ ಸಂಬಂಧಪಡದೇ ಇರುವವರನ್ನು ಹೊರಗಡೆ ಹೋಗಲು ಕೋರ್ಟ್ ಜಡ್ಜ್ ಸೂಚನೆ ನೀಡಿದ್ದಾರೆ. ಸದ್ಯ ಆರೋಪಿಗಳ ಹಾಗೂ ಪ್ರಾಸಿಕ್ಯೂಷನ್ ಪರ ವಕೀಲರಿಗೆ ಮಾತ್ರ ಕೋರ್ಟ್ ಹಾಲ್ ನಲ್ಲಿ ಇರಲು ಅವಕಾಶ ನೀಡಲಾಗಿದೆ.
ಇನ್ನೂ ಆರೋಪಿ ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡನೆಗೆ ಹಾಜರಾಗಿದ್ದಾರೆ. ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡುವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us