ರೇಣುಕಾಸ್ವಾಮಿ ಕೊಲೆ ಕೇಸ್‌: ತಾಯಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಕೋರಿದ್ದ ಅರ್ಜಿ ವಜಾ! ನಟ ದರ್ಶನ್‌ಗೆ ಪ್ಲಸ್ ಪಾಯಿಂಟ್‌!

ಬೆಂಗಳೂರಿನಲ್ಲಿ ನಡೆದಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಈಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ರೇಣುಕಾಸ್ವಾಮಿ ತಾಯಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ಕೋರಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇದು ನಟ ದರ್ಶನ್‌ಗೆ ಪ್ಲಸ್ ಪಾಯಿಂಟ್.!

author-image
Chandramohan
ರೇಣುಕಾಸ್ವಾಮಿ ಮನೆಯಲ್ಲೇ ದರ್ಶನ್ ಪರ ಮಾತು.. ಕೆಂಗಣ್ಣಿಗೆ ಗುರಿಯಾದ ಸ್ಯಾಂಡಲ್​ವುಡ್​ ನಟ..!

ತಾಯಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿ ಆಗಿ ಪರಿಗಣಿಸಲು ಕೋರ್ಟ್ ನಕಾರ

Advertisment
  • ತಾಯಿ ರತ್ನಪ್ರಭಾರನ್ನು ಪ್ರತಿಕೂಲ ಸಾಕ್ಷಿ ಆಗಿ ಪರಿಗಣಿಸಲು ಕೋರ್ಟ್ ನಕಾರ
  • ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ 57ನೇ ಸೆಷನ್ಸ್ ಕೋರ್ಟ್
  • ಇದು ಆರೋಪಿ ನಟ ದರ್ಶನ್, ಪವಿತ್ರಾಗೌಡಗೆ ಅನುಕೂಲ


ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ  ರೇಣುಕಾಸ್ವಾಮಿ ತಾಯಿ  ರತ್ನಪ್ರಭಾರನ್ನು  ಹೋಸ್ಟೇಲ್‌  ವಿಟ್ನೇಸ್ ( ಪ್ರತಿಕೂಲ ಸಾಕ್ಷಿ) ಎಂದು ಪರಿಗಣಿಸುವಂತೆ  ಪ್ರಾಸಿಕ್ಯೂಷನ್ ಪರ ವಕೀಲ ಎಸ್‌ಪಿಪಿ ಪ್ರಸನ್ನ ಕುಮಾರ್  ಮಾಡಿದ್ದ ಮನವಿಯನ್ನು ಬೆಂಗಳೂರಿನ  57ನೇ ಸೆಷನ್ಸ್  ಕೋರ್ಟ್ ಇಂದು  ತಿರಸ್ಕರಿಸಿದೆ. 
ರೇಣುಕಾಸ್ವಾಮಿ ತಾಯಿ  ರತ್ನಪ್ರಭಾ ನೀಡಿದ್ದ ಹೇಳಿಕೆಯಲ್ಲಿ ಗೊಂದಲ  ಇದ್ದ ಹಿನ್ನಲೆಯಲ್ಲಿ  ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ರತ್ನಪ್ರಭಾ ಸಾಕ್ಷಿ ಹೇಳಿದ್ದನ್ನು ಪ್ರತಿಕೂಲ ಸಾಕ್ಷಿ ಎಂದು  ಪರಿಗಣಿಸುವಂತೆ  ಕೋರ್ಟ್ ಗೆ ಮನವಿ ಮಾಡಿದ್ದರು. ಆದರೇ,  ಪ್ರಾಸಿಕ್ಯೂಷನ್ ಮಾಡಿದ್ದ ಈ  ಮನವಿಯನ್ನು ಕೋರ್ಟ್ ಇಂದು  ತಿರಸ್ಕರಿಸಿದೆ. ಇದರಿಂದ ಪ್ರಾಸಿಕ್ಯೂಷನ್ ಹಾಗೂ ಪೊಲೀಸರಿಗೆ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ಕೋರ್ಟ್ ಈಗ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ, ಸಾಕ್ಷಿಯನ್ನು ಪರಿಗಣಿಸಲಿದೆ. ಆದರೇ, ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರೇ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಸರಿಯಾಗಿ ಸಾಕ್ಷಿ ಹೇಳಿಲ್ಲ. 
ತಾವು ಈ ಹಿಂದೆ ಪೊಲೀಸರಿಗೆ ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾಗಿ ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದಾರೆ. ಹೀಗಾಗಿ ಪ್ರಾಸಿಕ್ಯೂಷನ್ ಪರ ವಕೀಲರು ಆಲರ್ಟ್ ಆಗಿದ್ದು, ರತ್ನಪ್ರಭಾರ ಸಾಕ್ಷ್ಯವನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸಲು ಕೋರ್ಟ್ ಗೆ ಮನವಿ ಮಾಡಿದ್ದರು. 
ರತ್ನಪ್ರಭಾ ಅವರು ಪ್ರಾಸಿಕ್ಯೂಷನ್ ಪರ ಸಾಕ್ಷಿಯಾಗಿದ್ದರು. ಆದರೇ, ಪ್ರಾಸಿಕ್ಯೂಷನ್ ಪರವಾಗಿ ಸರಿಯಾಗಿ  ರತ್ನಪ್ರಭಾ ಸಾಕ್ಷಿ ಹೇಳಿಲ್ಲ!.  ಹೀಗಾಗಿ ರೇಣುಕಾಸ್ವಾಮಿ ಕೊಲೆ ಕೇಸ್ ನ ಕೋರ್ಟ್ ವಿಚಾರಣೆಯೂ ಈಗ ಕುತೂಹಲಕ್ಕೆ ಕಾರಣವಾಗಿದೆ.  

ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಅವರ ಹೇಳಿಕೆಯು,  ಆರೋಪಿಗಳಾದ ನಟ ದರ್ಶನ್, ನಟಿ ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳಿಗೆ ಅನುಕೂಲವಾಗಲಿದೆ. ರತ್ನಪ್ರಭಾರಂತೆ ಉಳಿದ ಸಾಕ್ಷಿಗಳು, ಪ್ರತ್ಯಕ್ಷದರ್ಶಿಗಳು ಸರಿಯಾಗಿ ಕೋರ್ಟ್ ನಲ್ಲಿ ಸಾಕ್ಷಿ ಹೇಳದೇ  ಇದ್ದರೇ, ಕೇಸ್ ಬಿದ್ದು ಹೋಗಬಹುದು. ಆರೋಪಿಗಳು ಕೋರ್ಟ್ ನಿಂದ ಖುಲಾಸೆಯಾಗಲೂಬಹುದು. ನಟ ದರ್ಶನ್ ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಬಹುದು ಎಂಬ ಚರ್ಚೆಗಳು ಈಗ ಬೆಂಗೂರಿನ ಸಿಟಿ ಸಿವಿಲ್ ಕೋರ್ಟ್ ಕಾರಿಡಾರ್ ನಲ್ಲಿ ವಕೀಲರ ಸಮೂಹದಲ್ಲೇ ನಡೆಯುತ್ತಿವೆ

ಇನ್ನೂ 57ನೇ ಸೆಷನ್ಸ್ ಕೋರ್ಟ್ ಇಂದು ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ಪ್ರದೂಷ್ ಜಾಮೀನು ಅರ್ಜಿಯನ್ನು  ತಿರಸ್ಕರಿಸಿದೆ. ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಪ್ರದೂಷ್ ಜಾಮೀನು ಕೋರಿದ್ದ. ಆದರೇ, ಕೋರ್ಟ್ ಪ್ರದೂಷ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. 

ಕೋರ್ಟ್ ಆದೇಶ ಕೊಟ್ಟರೂ, ಮನೆ ಊಟ ಕೊಡುತ್ತಿಲ್ಲ ಎಂದು ದೂರು

ಪವಿತ್ರಾಗೌಡ ತಾಯಿಯಿಂದ‌ಲೂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆಯಾಗಿದೆ.   ಪವಿತ್ರಾಗೌಡಗೆ ವಾರಕ್ಕೊಮ್ಮೆ ಮನೆ ಊಟ ನೀಡಲು ಕೋರ್ಟ್ ಅವಕಾಶ ನೀಡಿತ್ತು.  ಮನೆಯೂಟ ತೆಗೆದುಕೊಂಡು ಹೋದರೆ ಜೈಲು ಅಧಿಕಾರಿಗಳು ಪವಿತ್ರಾಗೌಡಗೆ ಮನೆ ಊಟ ನೀಡಲು  ಅವಕಾಶ ನೀಡುತ್ತಿಲ್ಲ.  ಕೋರ್ಟ್ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಅಫಿಡವಿಟ್ ಸಲ್ಲಿಸಿದ್ದಾರೆ.  ಪವಿತ್ರಾಗೌಡ ತಾಯಿ ಭಾಗ್ಯಮ್ಮ ರಿಂದ  ಕೋರ್ಟ್ ಗೆ ಅಫಿಡವಿಟ್ ಸಲ್ಲಿಕೆಯಾಗಿದೆ. 

ಪವಿತ್ರಾಗೌಡ, ಲಕ್ಷ್ಮಣ್, ನಾಗರಾಜ್ ಗೆ ವಾರಕ್ಕೊಮ್ಮೆ ಮನೆಯೂಟ ನೀಡಲು ಕೋರ್ಟ್ ಆದೇಶ ನೀಡಿತ್ತು.  ಆರೋಪಿಗಳಾದ ಲಕ್ಷ್ಮಣ್, ನಾಗರಾಜ್ ಪರ ವಕೀಲರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.  ಪವಿತ್ರಾಗೌಡ ತಾಯಿ ಭಾಗ್ಯಮ್ಮ ಅವರಿಂದ ಅಫಿಡವಿಟ್ ಸಲ್ಲಿಕೆಯಾಗಿದೆ. 
ಈ  ಅರ್ಜಿಗಳಲ್ಲಿ ಯಾರ ವಿರುದ್ಧ ಕ್ರಮ ಆಗಬೇಕು ಎಂದು ನಿರ್ದಿಷ್ಟ ವಾಗಿ ಉಲ್ಲೇಖಿಸುವಂತೆ ಕೋರ್ಟ್ ಸೂಚನೆ ನೀಡಿದೆ.  ತಿದ್ದುಪಡಿ ಮಾಡಿ ಸೋಮವಾರ ಅರ್ಜಿ ಸಲ್ಲಿಸಲು ಕೋರ್ಟ್ ಆರೋಪಿಗಳ ಪರ ವಕೀಲರಿಗೆ ಸೂಚಿಸಿದೆ.   ಸೋಮವಾರ ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸೋಣ ಎಂದು 57ನೇ ಸೆಷನ್ಸ್ ಕೋರ್ಟ್ ಹೇಳಿದೆ. 

Bangalore city civil court




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Actor Darshan Renukaswamy case Renuka swamy murder case Pavithra gowda
Advertisment