/newsfirstlive-kannada/media/media_files/2025/10/06/actor-darshan-in-jail-2025-10-06-16-30-23.jpg)
ದರ್ಶನ್ ಗೆ ನೀಡಿರುವ ಸೌಲಭ್ಯದ ಬಗ್ಗೆ ಕೋರ್ಟ್ ಗೆ ವರದಿ ಸಲ್ಲಿಕೆ
ಚಿತ್ರನಟ ದರ್ಶನ್ ಅಂಡ್ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ವಿಡಿಯೋ ಕಾನ್ಫರೆನ್ಸ್ ನಲ್ಲಿ ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳು ಹಾಜರಾಗಿದ್ದರು. ಉಳಿದ ಆರೋಪಿಗಳು ಕೋರ್ಟ್ ಗೆ ಖುದ್ದು ಹಾಜರಾಗಿದ್ದರು. 64ನೇ ಸೆಷನ್ಸ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು . ನ್ಯಾ.ಐ.ಪಿ.ನಾಯ್ಕ್ ಅವರಿಂದ ವಿಚಾರಣೆ ನಡೆಯಿತು.
ಜೈಲಿನಿಂದ ನಗುತ್ತಾ ವಿಚಾರಣೆಗೆ ಹಾಜರಾದ ಪವಿತ್ರಾಗೌಡ
ಹಣೆಗೆ ಕುಂಕುಮ ಇಟ್ಟುಕೊಂಡು ದರ್ಶನ್ ವಿಚಾರಣೆಗೆ ಹಾಜರು
ನಗುನಗುತ್ತಲೇ ವೀಡಿಯೋ ಕಾನ್ಫರೆನ್ಸ್ ನಲ್ಲಿ ಆರೋಪಿ ಪವಿತ್ರ ಗೌಡ ಕಾಣಿಸಿಕೊಂಡರು.
ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನು ನೀಡದೇ ಇರೋ ವಿಚಾರದ ಬಗ್ಗೆ ವಿಚಾರಣೆ ನಡೆಯಿತು. ನಟ ದರ್ಶನ್ ಗೆ ಜೈಲಿನಲ್ಲಿ ಸೌಲಭ್ಯ ನೀಡಿರುವ ಬಗ್ಗೆ ತಪಾಸಣೆ ವರದಿಯನ್ನು ಕೋರ್ಟ್ ಗೆ ಸಲ್ಲಿಕೆ ಮಾಡಲಾಯಿತು. ಬೆಂಗಳೂರು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯಿಂದ ವರದಿ ಸಲ್ಲಿಕೆಯಾಯಿತು. ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ವರದಿ ಸಲ್ಲಿಕೆ ಮಾಡಲಾಯಿತು. ಬೆಂಗಳೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ವರದರಾಜ್ ಅವರು ವರದಿ ಸಲ್ಲಿಕೆ ಮಾಡಿದ್ದರು. ಇದೇ ಮಂಗಳವಾರ ಜೈಲಿಗೆ ಭೇಟಿ ನೀಡಿ ನ್ಯಾಯಮೂರ್ತಿ ವರದರಾಜ್ ತಪಾಸಣೆ ನಡೆಸಿದ್ದರು. ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸಿ ವರದಿ ನೀಡುವಂತೆ ಸೆಷನ್ಸ್ ಕೋರ್ಟ್ ಸೂಚಿಸಿತ್ತು. ನ್ಯಾ.ವರದರಾಜ್ ವರದಿಯನ್ನು ಕೋರ್ಟ್ ಪರಿಶೀಲನೆ ನಡೆಸಲಿದೆ.
ವರದಿ ಆಧರಿಸಿ ಕನಿಷ್ಠ ಸೌಲಭ್ಯ ನೀಡದ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಹಾಕಬೇಕೇ ಬೇಡವೇ ಎಂಬುದನ್ನು ಕೋರ್ಟ್ ನಿರ್ಧರಿಸಲಿದೆ. ಇಂದು ಸಲ್ಲಿಕೆಯಾಗಿರೋ ವರದಿ ಆಧರಿಸಿ ನ್ಯಾಯಾಂಗ ನಿಂದನೆ ಅರ್ಜಿಯ ಬಗ್ಗೆ ಕೋರ್ಟ್ ಆದೇಶ ಹೊರಬೀಳಲಿದೆ..
ಇನ್ನೂ ಇಂದು ವಿಚಾರಣೆ ಆರಂಭವಾದ ಬಳಿಕ ಆರೋಪಿಗಳ ಹಾಜರಾತಿಯನ್ನು ಕೋರ್ಟ್ ಪಡೆದಿದೆ.
ಹಣೆಗೆ ಕುಂಕುಮ ಇಟ್ಟುಕೊಂಡು ನಟ ದರ್ಶನ್ ಗೆ ವಿಡಿಯೋ ಕಾನ್ಪರೆನ್ಸ್ ವಿಚಾರಣೆಗೆ ಹಾಜರಾಗಿದ್ದರು.
ದೀಪಕ್,ನಿಖಿಲ್ ನಾಯ್ಕ್ ಬಿಟ್ಟು ಎಲ್ಲಾ ಆರೋಪಿಗಳು ಹಾಜರಾಗಿದ್ದರು. ಆದರೇ, ಆರೋಪಿಗಳ ಪರ ವಕೀಲರು ಸಮಯಾವಕಾಶ ಕೋರಿದ ಹಿನ್ನಲೆಯಲ್ಲಿ ಕೋರ್ಟ್ ನಲ್ಲಿ ವಿಚಾರಣೆ ಅಕ್ಟೋಬರ್ 24 ಕ್ಕೆ ಮುಂದೂಡಿಕೆಯಾಯಿತು. ಅಕ್ಟೋಬರ್ 24 ರಂದೇ ಕಾನೂನು ಸೇವಾ ಪ್ರಾಧಿಕಾರದ ವರದಿ ಸಂಬಂಧ ವಿಚಾರಣೆ ನಡೆಯಲಿದೆ. ಅಂದೇ ವರದಿಯ ಬಗ್ಗೆ ವಾದ, ಪ್ರತಿವಾದ ನಡೆಯಲಿದೆ. ಇಂದು ಕಾನೂನು ಪ್ರಾಧಿಕಾರದ ವರದಿಯನ್ನು ತಮಗೂ ನೀಡುವಂತೆ ಆರೋಪಿಗಳ ಪರ ವಕೀಲರು ಕೇಳಿದ್ದಾರೆ. ಅರ್ಜಿಯನ್ನು ಸಲ್ಲಿಸಿ ಕೋರ್ಟ್ ನಿಂದ ವರದಿಯನ್ನು ಪಡೆದುಕೊಳ್ಳಿ ಎಂದು ಕೋರ್ಟ್ ಜಡ್ಜ್ , ಆರೋಪಿಗಳ ಪರ ವಕೀಲರಿಗೆ ಸೂಚಿಸಿದ್ದಾರೆ. ಹೀಗಾಗಿ ವರದಿಯನ್ನು ಪಡೆದು, ಅದನ್ನು ಅಧ್ಯಯನ ಮಾಡಿ ವಾದಿಸಲು ಸಮಯ ಅವಕಾಶ ಬೇಕೆಂದು ಆರೋಪಿಗಳ ಪರ ವಕೀಲರು ಕೋರಿದ್ದರಿಂದ ವಿಚಾರಣೆಯನ್ನು ಅಕ್ಟೋಬರ್ 24 ಕ್ಕೆ ಮುಂದೂಡಲಾಗಿದೆ. ದೀಪಾವಳಿ ಹಬ್ಬ ಮುಗಿದ ಬಳಿಕ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಲ್ಲಿಸಿರುವ ವರದಿಯ ಬಗ್ಗೆ, ಜೈಲಿನಲ್ಲಿ ನಟ ದರ್ಶನ್ ಗೆ ಕನಿಷ್ಠ ಮೂಲಸೌಕರ್ಯವನ್ನು ನೀಡದೇ ಇರೋ ಆರೋಪದ ಬಗ್ಗೆ ವಿಚಾರಣೆ ನಡೆದು ಕೋರ್ಟ್ ಆದೇಶ ನೀಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.