/newsfirstlive-kannada/media/media_files/2025/10/02/rishab-shettys-wife-pragathi-gets-emotional-at-kantara-chapter-1-screening-2025-10-02-13-58-59.png)
ದೇಶದೆಲ್ಲೆಡೆ ಕಾಂತಾರ ಚಾಪ್ಟರ್-1 (Kantara Chapter-1) ಬೆಳ್ಳಿ ತೆರೆಯ ಮೇಲೆ ಅಪ್ಪಳಿಸಿದೆ. ಎಲ್ಲಿ ನೋಡಿದರಲ್ಲಿ ಕಾಂತಾರ ಚಿತ್ರದ ಬಗ್ಗೆ ಚರ್ಚೆ ನಡೆಯುವಷ್ಟರ ಮಟ್ಟಿಗೆ ಚಿತ್ರ ಮೂಡಿ ಬಂದಿದೆ ಎಂದು ಹೇಳಲಾಗುತ್ತಿದೆ. ಬುಧವಾರ ಕಾಂತಾರ ಚಾಪ್ಟರ್ 1 ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಮಾಧ್ಯಮದ ಸ್ನೇಹಿತರು, ಚಿತ್ರರಂಗದ ಹಿತೈಷಿಗಳು (Kantara Chapter-1 screening) ಈ ಪ್ರೀಮಿಯರ್ ಶೋ ನಲ್ಲಿ ಭಾಗವಹಿಸಿದ್ದರು.
ಕಾಂತಾರ ಚಾಪ್ಟರ್ - 1 ಪ್ರಿಮಿಯರ್ ಶೋ ಮುಗಿಯುತ್ತಿದ್ದಂತೆ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಸುತ್ತುವರಿದು ಜೈಕಾರ ಮೊಳಗಿಸಲು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಪತ್ನಿ ಪ್ರಗತಿ ಶೆಟ್ಟಿ ಕಣ್ಣೀರಿಡುತ್ತಾ ಹಿಂದಿನಿಂದ ಬಂದು ರಿಷಬ್ ಶೆಟ್ಟಿಯವರನ್ನು ತಬ್ಬಿಕೊಂಡಿದ್ದಾರೆ. ತುಳುನಾಡಿನ ದೈವವನ್ನು ಧರೆಗಿಳಿಸಿದಂತೆ ನಟಿಸಿರುವ ರಿಷಬ್ ಶೆಟ್ಟಿ ನಟನೆ ಕಂಡು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಕಿಕ್ಕಿರಿದು ಸೇರಿದ್ದ ಮಾಧ್ಯಮದವರು ವಿಶ್ ಮಾಡುತ್ತಿರುವ ಮಧ್ಯದಲ್ಲೇ ಪತ್ನಿಯನ್ನು ರಿಷಬ್ ಶೆಟ್ಟಿ ಸಂತೈಸಿದ್ದಾರೆ.
ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸಿನಿಮಾದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದಾರೆ. ಈ ಹಿಂದಿನ ಕಾಂತಾರ ಸಿನಿಮಾದ ಪಾತ್ರವೊಂದರಲ್ಲಿ ಪ್ರಗತಿ ಶೆಟ್ಟಿ ಕೂಡ ನಟಿಸಿದ್ದರು. ಈ ಕಾಂತಾರ-1 ಸಿನಿಮಾಗೆ ಪೂರ್ತಿ ಕಾಸ್ಟ್ಯೂಮ್ ಡಿಸೈನ್ ಮಾಡೋದು ದೊಡ್ಡ ಸವಾಲಿನ ಕೆಲಸ ಆಗಿತ್ತು. ಆ ಸವಾಲು ಅನ್ನು ಪ್ರಗತಿ ಶೆಟ್ಟಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಚಿತ್ರದ ಯಶಸ್ಸು ಪ್ರಗತಿ ಶೆಟ್ಟಿ ಅವರನ್ನು ಭಾವುಕರನ್ನಾಗಿಸಿದೆ.
ರಿಷಭ್ ಶೆಟ್ಟಿ ಕಾಂತಾರ-1 ಸಿನಿಮಾದಲ್ಲಿ ನಟಿಸಲು ಪ್ರತಿ ದಿನ ಹೊರಡುವ ಮುನ್ನ ಪತ್ನಿ ಪ್ರಗತಿ ಶೆಟ್ಟಿ, ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರಂತೆ. ಯಾವುದೇ ಅನಾಹುತಗಳ ಆಗದಿರಲಿ. ರಿಷಭ್ ಶೆಟ್ಟಿ ಸುರಕ್ಷಿತವಾಗಿರಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಆ ಪೂಜೆ , ಪ್ರಾರ್ಥನೆಗಳು ಈಗ ಫಲಿಸಿವೆ. ಇದೆಲ್ಲವನ್ನೂ ನೆನೆದು ಪ್ರಗತಿ ಶೆಟ್ಟಿ ಬುಧವಾರ ಭಾವುಕರಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.