/newsfirstlive-kannada/media/media_files/2025/12/05/rishab-shetty-4-2025-12-05-09-40-50.jpg)
/newsfirstlive-kannada/media/media_files/2025/12/05/rishab-shetty-1-2025-12-05-09-41-05.jpg)
ಕಾಂತಾರ ಚಾಪ್ಟರ್ 1 ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ನೂರಾರು ಕೋಟಿ ಲಾಭ ಗಳಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಹಿಟ್ ನೀಡಿದ ಚಿತ್ರದ ಮೂಲ ತುಳುನಾಡಿನ ದೈವಾರಾಧನೆ. ದೈವದ ಆಶೀರ್ವಾದದಿಂದಲೇ ಇದು ಸಾಧ್ಯ ಆಗಿದ್ದು ಅನ್ನೋದು ಚಿತ್ರ ತಂಡದ ನಂಬಿಕೆ. ಹೀಗಾಗಿ ಚಿತ್ರದ ಯಶಸ್ಸಿನ ಹಿನ್ನೆಲೆ, ವಾರಾಹಿ ಪಂಜುರ್ಲಿ ದೈವಕ್ಕೆ ಮಂಗಳೂರಿನಲ್ಲಿ ಹರಕೆಯ ನೇಮೋತ್ಸವ ಸಲ್ಲಿಸಲಾಗಿದೆ.
/newsfirstlive-kannada/media/media_files/2025/12/05/rishab-shetty-7-2025-12-05-09-41-49.jpg)
ಸಿನಿಮಾ ಭರ್ಜರಿ ಯಶಸ್ಸು
ಕಾಂತಾರ.. ಕನ್ನಡ ಚಿತ್ರ ರಂಗದ ದೊಡ್ಡ ಮೈಲುಗಲ್ಲು. ಕನ್ನಡ ಚಲನಚಿತ್ರ ಹಾಗು ರಿಷಬ್ ಶೆಟ್ಟಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಚಿತ್ರ. ಕಾಂತಾರ ಎರಡು ಸಿನಿಮಾಗಳ ಕಥಾ ಹಂದರವೇ ತುಳುನಾಡಿನ ದೈವ. ಕಾಂತಾರ ಚಾಪ್ಟರ್ 1 ಸಿನಿಮಾ ಭರ್ಜರಿ ಯಶಸ್ಸು ಕಂಡು, ಚಿತ್ರ ತಂಡ ಗೆದ್ದು ಬಿಗಿದೆ.
/newsfirstlive-kannada/media/media_files/2025/12/05/rishab-shetty-6-2025-12-05-09-42-22.jpg)
ಕಾಂತಾರ ಚಿತ್ರತಂಡ
ಮಂಗಳೂರಿನ ಯೆಯ್ಯಾಡಿಯ ಬಾರೆಬೈಲ್ನ ಶ್ರೀ ಅರಸು ಧರ್ಮ ಜಾರಂದಾಯ, ಜಾರಂದಾಯ ಬಂಟ ಹಾಗೂ ವರಾಹಿ ದೈವಸ್ಥಾನದಲ್ಲಿ ಕಾಂತಾರ ಚಿತ್ರತಂಡ ಹರಕೆಯ ನೇಮೋತ್ಸವ ಸಲ್ಲಿಸಿದೆ. ಕಾಂತಾರ ಸಿನಿಮಾ ನಿರ್ಮಾಣಕ್ಕೂ ಮೊದಲು ಸಿನಿಮಾ ಯಶಸ್ವಿಗಾಗಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪ್ರಾರ್ಥನೆ ಮಾಡಿ ಹರಕೆ ಹೊತ್ತಿದ್ದರು. ಅದರಂತೆ ದೈವದ ಆಶೀರ್ವಾದದಿಂದ ಸಿನಿಮಾ ಯಶಸ್ಸು ಕಂಡಿದೆ. ಹೀಗಾಗಿ ನಟ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ವತಿಯಿಂದ ಹರಕೆ ನೇಮೋತ್ಸವ ಸಲ್ಲಿಸಲಾಯಿತು.
/newsfirstlive-kannada/media/media_files/2025/12/05/rishab-shetty-3-2025-12-05-09-42-46.jpg)
ಪಂಜುರ್ಲಿ ದೈವ ಅಭಯ
ದೈವದ ನೇಮೋತ್ಸವದಲ್ಲಿ ರಿಷಭ್ ಪತ್ನಿ ಪ್ರಗತಿ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾದ್ರು. ದೈವದ ಪ್ರಸಾದ ಸ್ವೀಕರಿಸಿ ದೈವಾನುಗ್ರಹಕ್ಕೆ ಪಾತ್ರರಾದ್ರು.. ಈ ವೇಳೆ ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನು ಇದ್ದೇನೆ ಎಂದು ನಟ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಅಭಯ ನೀಡಿದೆ.
/newsfirstlive-kannada/media/media_files/2025/12/05/rishab-shetty-2025-12-05-09-43-08.jpg)
ಕಾಂತಾರ ಮತ್ತು ಕಾಂತಾರ ಚಾಪ್ಟರ್ 1 ಚಿತ್ರ ಭಾರೀ ಯಶಸ್ಸು ಕಂಡಿದೆ. ರಿಷಬ್ ಶೆಟ್ಟಿ ಅಂದ್ರೆ ಯಾರು ಅಂತ ಇಡೀ ವಿಶ್ವಕ್ಕೆ ಪರಿಚಯಿಸಿದೆ. ಈ ಯಶಸ್ಸಿಗೆ ದೈವವೇ ಕಾರಣ ಅನ್ನೋದು ನಂಬಲೇಬೇಕಾದ ಸಂಗತಿ. ಹೀಗಾಗಿ ಕಾಂತಾರ ಯಶಸ್ಸನ್ನು ಸಂಭ್ರಮಿಸಿ, ಯಶಸ್ವಿಗೆ ಕಾರಣವಾದ ದೈವಕ್ಕೆ ಚಿತ್ರತಂಡ ಹರಕೆಯ ನೇಮೋತ್ಸವ ಮಾಡಿದೆ. ಕರಾವಲಿಯ ದೈವಗಳು ರಿಷಬ್ ಶೆಟ್ಟಿ ಹಾಗೂ ಚಿತ್ರತಂಡಕ್ಕೆ ಮತ್ತೊಮ್ಮೆ ಅಭಯ ನೀಡಿದೆ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us