/newsfirstlive-kannada/media/media_files/2025/10/11/rukumini-vasanth-father-vasanth-2025-10-11-13-41-19.jpg)
ಕಾಂತಾರ ಹಿರೋಯೀನ್ ನಟಿ ರುಕ್ಮಿಣಿ ವಸಂತ್ ತಂದೆ ವಸಂತ್ ವೇಣುಗೋಪಾಲ್
ರುಕ್ಮಿಣಿ ವಂಸತ್.. ಕಾಂತಾರದ ಕನಕವತಿಯೂ ಹೌದು.. ಆ ಸಿನಿಮಾ ಮೂಲಕ ಪ್ರೇಕ್ಷಕರ ಕಣ್ಮನ ಸೆಳೆದ ಸೌಂದರ್ಯವತಿಯೂ ಹೌದು.. ಸದ್ಯ, ಇಡೀ ಸಿನಿಮಾದಲ್ಲಿ ರುಕ್ಮಿಣಿಯ ಕ್ಯಾರೆಕ್ಟರ್​ ಬಗ್ಗೆ ಸಾಕಷ್ಟು ಮೆಚ್ಚುಗೆ ಕೇಳಿ ಬರ್ತಿದೆ.
ಕೆರಿಯರ್​ನ ಬೆಸ್ಟ್​ ಕ್ಯಾರೆಕ್ಟರ್
ಕಾಂತಾರ ಸಿನಿಮಾ ನಾಯಕಿ ರುಕ್ಮಿಣಿ ವಂಸತ್​ಗೆ ಕೆರಿಯರ್​ನ ಬೆಸ್ಟ್​ ಕ್ಯಾರೆಕ್ಟರ್​ ಸಿಕ್ಕಿದೆ ಅಂದ್ರೆ ತಪ್ಪಾಗೋದಿಲ್ಲ.. 2019ರಲ್ಲಿ ಬೀರಬಲ್​ ಸಿನಿಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ರುಕ್ಮಿಣಿ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ನಡುವೆ ವಿಜಯ್​ ಸೇತುಪತಿ, ಶಿವಕಾರ್ತಿಕೇಯನ್ ಜೊತೆ ಪರಭಾಷೆಯಲ್ಲೂ ಗುರುತಿಸಿಕೊಂಡಿದ್ದರು. ಅವರ ಅಭಿನಯಕ್ಕೆ ಅತಿಹೆಚ್ಚು ಒತ್ತು ನೀಡುವಂತೆ ಪಾತ್ರ ಸಿಕ್ಕಿರೋದು ಅಂದ್ರೆ, ಅದು ಕನಕವತಿಯಾಗಿ. ಇದರಲ್ಲಿ ಕೇವಲ ನಾಯಕನ ಪಾತ್ರವನ್ನ ಪ್ರೀತಿಸೋ ಬೆಡಗಿಯಾಗಿ ಮಾತ್ರವಲ್ಲದೇ ಚಿತ್ರಕ್ಕೆ ಅತಿದೊಡ್ಡ ಟರ್ನ್ ನೀಡುವ ಪಾತ್ರದಲ್ಲಿ ರುಕ್ಮಿಣಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯ ಬಾಣ ಹಿಡಿದೂ ಸೈ ಎನಿಸಿಕೊಳ್ಳೋದ್ರ ಜೊತೆ ಕತ್ತಿ ಹಿಡಿದು ಯುದ್ಧಭೂಮಿಯಲ್ಲಿ ಅಭಿಮಾನಿಗಳಿಂದ ಜೈಕಾರ ಹಾಕಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ರುಕ್ಮಿಣಿ ವಸಂತ್ ಈ ಸಿನಿಮಾದ ಮೂಲಕ ನ್ಯಾಷನಲ್ ಕ್ರಶ್ ಆಗಿಯೂ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಕಾಂತಾರ -1 ಸಿನಿಮಾದಲ್ಲಿ ಕನಕವತಿಯಾಗಿ ರುಕ್ಮಿಣಿ ನಟನೆ
ರುಕ್ಮಿಣಿ ತಂದೆ ವೀರ ಯೋಧ
ಕಾಂತಾರ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ತಂದೆಯದ್ದು ವಿಲನ್ ಕ್ಯಾರೆಕ್ಟರ್.. ಆದ್ರೆ ರಿಯಲ್ ಲೈಫ್​ನಲ್ಲಿ ರುಕ್ಮಿಣಿ ವಸಂತ್ ತಂದೆ. ರಿಯಲ್ ಹೀರೋ.. ಬರೀ ರುಕ್ಮಿಣಿ ವಸಂತ್ ಕುಟುಂಬಕ್ಕಲ್ಲ.. ಇಡೀ ದೇಶಕ್ಕೆ ಹೀರೋ.. ರುಕ್ಮಿಣಿ ವಸಂತ್ ತಂದೆ ಹೆಸರು ಕರ್ನಲ್ ವಸಂತ್ ವೇಣುಗೋಪಾಲ್.. ಭಾರತೀಯ ಸೇನೆಯಲ್ಲಿ ತಮ್ಮ ಜೀವನಪೂರ್ತಿ ಸೇವೆ ಸಲ್ಲಿಸಿ, ಈ ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೇ ಅರ್ಪಿಸಿದವರು. ಜಮ್ಮು-ಕಾಶ್ಮೀರದ ವಿವಿಧ ಭಾಗದಲ್ಲಿ ಕಾರ್ಯ ನಿರ್ವಹಿಸಿರೋ ಕರ್ನಲ್ ವಸಂತ್ ವೇಣುಗೋಪಾಲ್, ಈ ದೇಶದ ಹೆಮ್ಮೆಯ ಯೋಧ.
ಅಶೋಕ ಚಕ್ರ ಪಡೆದ ಮೊದಲ ಕನ್ನಡಿಗ
ಆ ದಿನ 2007ರ ಸಮಯ.. ಒಟ್ಟು 8 ಭಯೋತ್ಪಾದಕರು ಶಸ್ತ್ರಾಸ್ತ್ರಗಳೊಂದಿಗೆ ಗಡಿನುಸುಳಿ ಒಳಬಂದಿದ್ದರು. ಜಮ್ಮು ಮತ್ತು ಕಾಶ್ಮೀರದ ಉರಿ ಪ್ರದೇಶದಲ್ಲಿ ತಮ್ಮ ದುಷ್ಕೃತ್ಯ ಪ್ರದರ್ಶಿಸಿದ್ರು. ಈ ಪಾಪಿಗಳ ಜನ್ಮಜಾಲಾಡಲು ಅಖಾಡಕ್ಕಿಳಿದ ಭಾರತೀಯ ಸೇನೆಯ ವೀರರ ತಂಡದಲ್ಲಿದ್ದಿದ್ದು ಇದೇ ರುಕ್ಮಿಣಿ ವಸಂತ್ ತಂದೆ, ಕರ್ನಲ್ ವಸಂತ್ ವೇಣುಗೋಪಾಲ್.. ಈ ವೇಳೆ ಸೇನೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆ ‘ಉಗ್ರ’ ಕಾಳಗದಲ್ಲಿ ಭಾರತದ ಮಣ್ಣಿಗೆ ಉಗ್ರರ ಬುಲೆಟ್ ತಗುಲದಂತೆ ತಡೆದ ಕರ್ನಲ್ ವಸಂತ್ ವೇಣುಗೋಪಾಲ್, ತಮ್ಮ ದೇಹಕ್ಕೆ ಒಳಹೊಕ್ಕಿಸಿಕೊಂಡ್ರು. ಪರಿಣಾಮ ಯುದ್ಧಭೂಮಿಯಲ್ಲಿ ವೀರಮರಣ ಹೊಂದುವಂತಾಯ್ತು.. ಈ ಘಟನೆ ನಡೆಯುವಾಗ ರುಕ್ಮಿಣಿ ಇನ್ನೂ ಬಾಲಕಿ..
ಕರ್ನಲ್ ವಸಂತ್ ವೇಣುಗೋಪಾಲ್ ಧೈರ್ಯವನ್ನು ಮೆಚ್ಚಿದ ಭಾರತ ಸರ್ಕಾರ ಕರ್ನಲ್ ವಸಂತ್ ವೇಣುಗೋಪಾಲ್​ರಿಗೆ ಅಶೋಕ ಚಕ್ರ ಪದಕವನ್ನು ನೀಡಿ ಗೌರವ ಸಲ್ಲಿಸಿದೆ. ಗಮನಾರ್ಹ ವಿಚಾರ ಏನಪ್ಪಾ ಅಂದ್ರೆ, ಕರ್ನಾಟಕದಲ್ಲಿ ಪದಕ ಪಡೆದ ಮೊದಲಿಗರು ರುಕ್ಮಿಣಿ ವಸಂತ್ ತಂದೆ..
ರುಕ್ಮಿಣಿ ತಾಯಿಯೂ ದೇಶಪ್ರೇಮಿ
ರುಕ್ಮಿಣಿ ತಾಯಿ ಸುಭಾಷಿಣಿ ವಸಂತ್ ಕೂಡ ತಮ್ಮ ಗಂಡನಂತೆ ಅಪ್ರತಿಮ ದೇಶಪ್ರೇಮಿ.. ತಮ್ಮ ಪತಿಯ ಅಗಲಿಕೆಯ ನಂತರ ರಾಷ್ಟ್ರ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ತಮ್ಮಂತೆಯೇ ಸೇನೆಯಲ್ಲಿ ತಮ್ಮ ಪತಿಯಂದಿರನ್ನ ಕಳೆದುಕೊಂಡ ಮಹಿಳೆಯರಿಗೆ ಶಕ್ತಿಯಾಗಿ ನಿಲ್ಲುವ ದ್ಯೇಯೋದ್ದೇಶದಿಂದ ವೀರರತ್ನ ಪ್ರತಿಷ್ಟಾನವನ್ನ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಆಶ್ರಯದಲ್ಲಿ, ಹುತಾತ್ಮ ಯೋಧರ ಪತ್ನಿಯರು ಮತ್ತು ಕುಟುಂಬಗಳಿಗೆ ಸಕಲ ಬೆಂಬಲ ನೀಡಲಾಗುತ್ತಿದೆ. ಇದುವರೆಗೂ 100ಕ್ಕೂ ಹೆಚ್ಚು ಕುಟುಂಬಗಳ ಮಕ್ಕಳು ಶಿಕ್ಷಣ ಪಡೆಯಲು ನೆರವು ನೀಡಲಾಗಿದೆ.
ಹೀಗೆ ರುಕ್ಮಿಣಿ ಅಪ್ಪ ಹಾಗೂ ಅಮ್ಮ ಇಬ್ಬರು ದೇಶಕ್ಕೋಸ್ಕರ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು, ತಮ್ಮ ತಂದೆಯ ನೆನಪು ಸದಾ ತಮ್ಮೊಂದಿಗೆ ಇರಬೇಕು ಅನ್ನೋ ಕಾರಣಕ್ಕೆ ರುಕ್ಮಿಣಿ ತಮ್ಮ ಹೆಸರಿನ ಮುಂದೆ ತಮ್ಮ ತಂದೆಯ ಹೆಸರನ್ನ ಸೇರಿಸಿಕೊಂಡು ರುಕ್ಮಿಣಿ ವಸಂತ್ ಅಂತಲೇ ಖ್ಯಾತಿ ಪಡೆಯುತ್ತಿದ್ದಾರೆ.
ಪ್ರಿಯತೋಷ್ ಅಗ್ನಿಹಂಸ
ಬುಲೆಟಿನ್ ಪ್ರೊಡ್ಯೂಸರ್, ನ್ಯೂಸ್ ಫಸ್ಟ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.