Advertisment

ಮಂಗಳಸೂತ್ರ ಧರಿಸಿಯೇ ಸಮಂತಾ ಓಡಾಟ, ಅಭಿಮಾನಿಗಳ ಹೃದಯ ಗೆದ್ದ ಚೆಲುವೆ..!

2ನೇ ಮದುವೆ ಆಗಿರುವ ಸಮಂತಾ ರುತ್ ಪ್ರಭು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಲೇಟೆಸ್ಟ್ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗ್ತಿವೆ. ಅದಕ್ಕೆ ಕಾರಣ ಅವರು ತೊಟ್ಟಿರುವ ಮಂಗಳಸೂತ್ರ!

author-image
Ganesh Kerekuli
Samantha
Advertisment

2ನೇ ಮದುವೆ ಆಗಿರುವ ಸಮಂತಾ ರುತ್ ಪ್ರಭು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಲೇಟೆಸ್ಟ್ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗ್ತಿವೆ. ನಿವೆಲ್ಲಾ ಏನಿದು ಹೊಸ ಲುಕ್? ಎಂದು ಯೋಚಿಸುತ್ತಿರಬಹುದು.. ಅದು ಸಿನಿಮಾದ ಲುಕ್ ಅಥವಾ ಫೋಟೋಶೂಟ್ ಆಗಿರಬಹುದು ಅನ್ಕೊಂಡ್ರಾ? ಇಲ್ಲ. ಅದಕ್ಕೆ ಕಾರಣ ಅವರು ತೊಟ್ಟಿರುವ ಮಂಗಳಸೂತ್ರ! 

Advertisment

ಇತ್ತೀಚಿಗೆ ಮದುವೆಯಾದ ಕೆಲವು ನಟಿಮಣಿಯರು ಕೊರಳಲ್ಲಿ ಮಂಗಳಸೂತ್ರ ಧರಿಸುವುದಿಲ್ಲ. ಅವರ ಟ್ರೇಂಡಿ ಡ್ರೇಸ್​ಗಳಿಗೆ ಸೂಟ್​ ಆಗುವುದಿಲ್ಲ ಎಂಬ ಕಾರಣಕ್ಕೆ ಮಾಂಗಲ್ಯವನ್ನು ಮನೆಯಲ್ಲಿಟ್ಟು ಫ್ಯಾಶನ್​ ಗೀಳಿಗೆ ಬೀಳುವವರೇ ಹೆಚ್ಚು. 

ಆದರೆ ಸಮಂತಾ ಆ ಗೀಳಿಗೆ ಬೀಳದೆ ಹೆಮ್ಮೆಯಿಂದ ಮಾಂಗಲ್ಯ ಧರಿಸಿಕೊಂಡು ತಮ್ಮ ಪತಿಯ ಜೊತೆ ಕಾಣಿಸಿಕೊಂಡಿದ್ದಾರೆ. ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ಬಳಿಕ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಅವರು ಕಳೆದ ವರ್ಷ ಡಿಸೆಂಬರ್ 1ರಂದು ಎರಡನೇ ಮದುವೆ ಆದರು. ಮದುವೆ ನಂತರ ಅವರ ಮುಖದಲ್ಲಿ ಹೊಸ ನಗುವಿನ ಅಲೆ ಬೀಸಿದೆ. ಪತಿ ರಾಜ್ ನಿಡಿಮೋರು ಜೊತೆ ಸಮಂತಾ ರುತ್ ಪ್ರಭು ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಅವರ ಕತ್ತಿನಲ್ಲಿದ್ದ  ಮಂಗಳಸೂತ್ರ ನೋಡಿ ಅಭಿಮಾನಿಗಳು ಖುಷಿ ಆಗಿದೆ.

ಮದುವೆಯಾದ ಹೊಸತರಲ್ಲಿ ಮದುಮಗಳ ಮುಖದಲ್ಲಿ ಬರುವ ಕಳೆಯೇ ಬೇರೆ. ಈಗ ಸಮಂತಾ ವಿಷಯದಲ್ಲೂ ಹಾಗೆಯೇ ಆಗಿದೆ. ಮಂಗಳಸೂತ್ರವನ್ನು ತೋರಿಸುತ್ತಾ ಅವರು ನೀಡಿರುವ ಫೋಸ್ ನೋಡುಗರ ಕಣ್ಣು ಕುಕ್ಕುವಂತಿದೆ. ಅಭಿಮಾನಿಗಳಂತೂ "ನ್ಯೂ ಬ್ರೈಡ್ ಗ್ಲೋ ಅಂದ್ರೆ ಹೀಗಿರಬೇಕು" "ಸ್ಯಾಮ್ ಹ್ಯಾಸ್ ಹಿಟ್ ಡಿಫರೆಂಟ್!" ಅಂತ ಕಾಮೆಂಟ್​ಗಳ ಮಳೆ ಸುರಿಸಿದ್ದಾರೆ. ಅವರ ಸಿಂಪಲ್ ಡ್ರೆಸ್ಸಿಂಗ್ ಮತ್ತು  ಮಂಗಳಸೂತ್ರದ ಕಾಂಬಿನೇಷನ್ ನಿಜಕ್ಕೂ ಸುಂದರವಾಗಿದೆ ಎಂದಿದ್ದಾರೆ.

Advertisment

ಸಿನಿಮಾ ಮತ್ತು ವೆಬ್ ಸೀರಿಸ್ ಕ್ಷೇತ್ರದಲ್ಲಿ ರಾಜ್ ನಿಡಿಮೋರು ಅವರಿಗೆ ಬಹಳ ಡಿಮ್ಯಾಂಡ್ ಇದೆ. ಅದೇ ರೀತಿಯಾಗಿ, ಸಮಂತಾ ಅವರು ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಸಮಂತಾ ನಿರ್ಮಾಣದ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದೆ.

ಇದನ್ನೂ ಓದಿ:ಮನೆ ಕಟ್ಟಲು ಅಗೆಯುತ್ತಿದ್ದಾಗ ಸಿಕ್ಕೇ ಬಿಡ್ತು ನಿಧಿ.. ಪ್ರಾಮಾಣಿಕತೆ ಮೆರೆದರೂ ಕುಟುಂಬಕ್ಕೆ ಎದುರಾಯ್ತು ಗಂಡಾಂತರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Samantha Ruth Prabhu
Advertisment
Advertisment
Advertisment