/newsfirstlive-kannada/media/media_files/2025/12/01/actress-samantha-marries-raj-nidumoru-3-2025-12-01-15-36-13.jpg)
ಪವಿತ್ರ ಭೂತಸಿದ್ದಿ ವಿವಾಹವಾದ ನಟಿ ಸಮಂತಾ- ನಿರ್ದೇಶಕ ರಾಜ್ ನಿಡಿಮೋರು
ನಟಿ ಸಮಂತಾ ರುತ್ ಪ್ರಭು ಮತ್ತು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ರಾಜ್ ನಿಡಿಮೊರು ಅವರು ಸೋಮವಾರ ಬೆಳಗ್ಗೆ ಕೊಯಂಬತ್ತೂರಿನಲ್ಲಿರುವ ಈಶ ಯೋಗ ಕೇಂದ್ರದ ಲಿಂಗ ಭೈರವಿ ದೇವಿಯ ಸಾನಿಧ್ಯದಲ್ಲಿ ಪವಿತ್ರ ಭೂತ ಶುದ್ಧಿ ವಿವಾಹ ಸಮಾರಂಭದಲ್ಲಿ ಒಂದಾದರು.
ಆಪ್ತ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಅನ್ಯೋನ್ಯ ಸಮಾರಂಭವು, ಪ್ರಾಚೀನ ಯೋಗಿಕ ಸಂಪ್ರದಾಯದ ಭೂತ ಶುದ್ಧಿ ವಿವಾಹದ ಅನುಗುಣವಾಗಿ ನಡೆಸಲಾಯಿತು. ಇದು ಆಲೋಚನೆ, ಭಾವನೆ ಅಥವಾ ಭೌತಿಕತೆಯನ್ನು ಮೀರಿ ಸಂಗಾತಿಗಳ ನಡುವೆ ಆಳವಾದ ಪ್ರಾಥಮಿಕ ಬಂಧವನ್ನು ರೂಪಿಸಲು ವಿನ್ಯಾಸಗೊಳಿಸಲಾದ ಒಂದು ವಿಶಿಷ್ಟ ಪ್ರಾಣಪ್ರತಿಷ್ಠೆಯ ಪ್ರಕ್ರಿಯೆಯಾಗಿದೆ. ಲಿಂಗ ಭೈರವಿ ಸನ್ನಿಧಿಗಳಲ್ಲಿ ಅಥವಾ ಆಯ್ದ ಸ್ಥಳಗಳಲ್ಲಿ ಅರ್ಪಿಸಲಾಗಿರುವ ಭೂತ ಶುದ್ಧಿ ವಿವಾಹವು, ದಂಪತಿಗಳಲ್ಲಿ ಮತ್ತು ಅವರ ಸಂಯೋಗದಲ್ಲಿ ಪಂಚಭೂತಗಳನ್ನು ಶುದ್ಧೀಕರಿಸುವ ಮೂಲಕ ಅವರ ಸಹಜೀವನ ಪಯಣದಲ್ಲಿ ಸಾಮರಸ್ಯ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಸರಿಹೊಂದಾಣಿಕೆಗಾಗಿ ದೇವಿಯ ಅನುಗ್ರಹವನ್ನು ಆವಾಹಿಸುತ್ತದೆ.
/filters:format(webp)/newsfirstlive-kannada/media/media_files/2025/12/01/samanatha-bhootha-sudhi-vivaha-2025-12-01-19-51-00.jpg)
ಈಶ ಫೌಂಡೇಶನ್, ಸಮಂತಾ ಮತ್ತು ರಾಜ್‌ರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಅವರಿಗೆ ದೇವಿಯ ಅಸೀಮ ಅನುಗ್ರಹ ಮತ್ತು ಹರ್ಷೋಲ್ಲಾಸದಿಂದ ಆಶೀರ್ವದಿಸಲ್ಪಟ್ಟ ದಾಂಪತ್ಯವನ್ನು ಹಾರೈಸುತ್ತದೆ.
ಲಿಂಗ ಭೈರವಿಯ ಕುರಿತು
ಲಿಂಗ ಭೈರವಿ, ಸದ್ಗುರುಗಳಿಂದ ಈಶ ಯೋಗ ಕೇಂದ್ರದಲ್ಲಿ ಪ್ರಾಣಪ್ರತಿಷ್ಠೆಯ ಮೂಲಕ ಪ್ರತಿಷ್ಠಾಪಿಸಲ್ಪಟ್ಟಿರುವ ದೈವಿಕ ಸ್ತ್ರೀ ತತ್ವದ ಉಗ್ರ ಮತ್ತು ಕರುಣಾಮಯಿ ಅಭಿವ್ಯಕ್ತಿಯಾಗಿದ್ದು, ಜೀವನವನ್ನು ಸಮೃದ್ಧಗೊಳಿಸುವ ಆಚರಣೆಗಳಿಗಾಗಿ ಚೈತನ್ಯದಿಂದ ತುಂಬಿರುವ ಸಾನಿಧ್ಯವಾಗಿ ಅರ್ಪಿತವಾಗಿದೆ. ಎಂಟು ಅಡಿಗಳ ಶಕ್ತಿ ಸ್ವರೂಪವು, ವಿಶ್ವದ ಸೃಜನಾತ್ಮಕ ಶಕ್ತಿಯಿಂದ ಕೂಡಿದ್ದು, ದೇಹ, ಮನಸ್ಸು ಮತ್ತು ಶಕ್ತಿಯನ್ನು ಸುಸ್ಥಿರಗೊಳಿಸುವ ಮೂಲಕ ಹುಟ್ಟಿನಿಂದ ಅತಿಕ್ರಮಣದವರೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ಭಕ್ತರಿಗೆ ಸಹಕಾರಿಯಾಗಿರುತ್ತದೆ.
/filters:format(webp)/newsfirstlive-kannada/media/media_files/2025/12/01/samanatha-bhootha-sudhi-vivaha02-2025-12-01-19-55-30.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us