/newsfirstlive-kannada/media/media_files/2025/10/11/actor-ms-umesh-cancer-2025-10-11-18-42-41.jpg)
ಕನ್ನಡದ ಹಾಸ್ಯ ನಟ ಉಮೇಶ್ ಗೆ ಕ್ಯಾನ್ಸರ್ ದೃಢ
ಕನ್ನಡದ ಹಿರಿಯ ಹಾಸ್ಯ ನಟ ಉಮೇಶ್ ಅವರಿಗೆ ಕ್ಯಾನ್ಸರ್ ಇರೋದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಿನ್ನೆಯಷ್ಟೇ ಮನೆಯ ಸ್ನಾನಗೃಹದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿದಾಗ ಕ್ಯಾನ್ಸರ್ ಇರೋದು ದೃಢಪಟ್ಟಿದೆ. ಈ ವಿಷಯವನ್ನು ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಚೇರ್ಮನ್ ಶಿವರಾಜ್ ಗೌಡ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಉಮೇಶ್ ಅವರಿಗೆ ಕ್ಯಾನ್ಸರ್ ಮೂರನೇ ಸ್ಟೇಜ್ ನಲ್ಲಿದೆ. ಸದ್ಯಕ್ಕೆ ಬೆಂಗಳೂರಿನ ಮುದ್ದಿನಪಾಳ್ಯದ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಉಮೇಶ್ ಅವರಿಗೆ ಲಿವರ್ ಕ್ಯಾನ್ಸರ್ ಬಂದಿದೆ . ದೇಹದ ಒಂದಷ್ಟು ಭಾಗಕ್ಕೆ ಕ್ಯಾನ್ಸರ್ ಹರಡಿದೆ. ಕ್ಯಾನ್ಸರ್ ದೇಹಕ್ಕೆ ಹರಡಿರುವ ಕಾರಣ, ದೇಹದ ಗಾಯಕ್ಕೆ ಸರ್ಜರಿ ಮಾಡೋದು ಕಷ್ಟವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೇ, ಚೇತರಿಕೆ ಆಗೋ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯಕ್ಕೆ ಮುಂದಿನ ಚಿಕಿತ್ಸೆಯನ್ನು ಹೇಗೆ ನೀಡಬೇಕೆಂಬುದನ್ನು ವೈದ್ಯರು ಪರಿಶೀಲಿಸುತ್ತಿದ್ದಾರೆ.
ಇನ್ನೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ನಟ ಉಮೇಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದರು. ನಿನ್ನೆ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದೆ. ಎಡಗಡೆ ಸೊಂಟಕ್ಕೆ, ಬಲ ಭುಜಕ್ಕೆ ಏಟು ಬಿದ್ದಿದೆ. ಏನೂ ತೊಂದರೆ ಆಗಿಲ್ಲ. ನಮ್ಮ ಸ್ನೇಹಿತರು, ಕಲಾವಿದರು ಸಂಘಕ್ಕೆ ನಾನು ವಿಷಯ ತಿಳಿಸಿದೆ. ಡಾಕ್ಟರ್ ಬಹಳ ವರ್ಷಗಳಿಂದ ಪರಿಚಯ. ಚೆನ್ನಾಗಿ ನೋಡಿಕೊಳ್ತಿದ್ದಾರೆ. ಅಭಿಮಾನಿಗಳು ಬೇಸರಪಟ್ಟುಕೊಳ್ಳಬೇಡಿ. ಆದಷ್ಟು ಬೇಗ ಹುಷಾರಾಗಿ ಬರ್ತೀನಿ. ಆಮೇಲೆ ಅಪಾರ್ಥ ಆಗುತ್ತೆ ಅಂತಾ ತಮ್ಮ ಟ್ರೇಡ್ ಮಾರ್ಕ್ ಸ್ಟೈಲ್ ನಲ್ಲಿ ಉಮೇಶ್ ನಕ್ಕರು.
ನಾಲ್ಕೈದು ದಿನಗಳ ನಂತರ ಸರ್ಜರಿ ಆಗಲಿದೆ. ಹುಷಾರಾಗಿ ಸಿನಿಮಾ, ಸೀರೀಯಲ್ ಮಾಡ್ತೀನಿ. ನಿಮ್ಮ ಸಹಕಾರ ಇರಲಿ ಎಂದು ನಟ ಉಮೇಶ್ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.