/newsfirstlive-kannada/media/media_files/2025/10/01/sharukh-khan-2025-10-01-20-15-47.jpg)
ಬಾಲಿವುಡ್‌ನ ನಂಬರ್ ಒನ್ ಶ್ರೀಮಂತ ಪಟ್ಟಕ್ಕೇರಿದ ಶಾರೂಖ್ ಖಾನ್
ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಬಿಲಿಯನೇರ್ ಕ್ಲಬ್ ಗೆ ಮೊದಲ ಭಾರಿಗೆ ಎಂಟ್ರಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಕಳೆದ ಮೂರು ದಶಕಗಳಿಂದ ಬಾದ್ ಶಾ ಆಗಿ ಮೆರೆಯುತ್ತಿರುವ ಶಾರೂಖ್ ಖಾನ್ ಇದೇ ಮೊದಲ ಭಾರಿಗೆ ಬಿಲಿಯನೇರ್ ಗಳ ಕ್ಲಬ್ ಸೇರಿದ್ದಾರೆ. ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿ-2025 ರಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿ-2025ರಲ್ಲಿ ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರೆಟಿಗಳ ಸಂಪತ್ತಿನ ಪಟ್ಟಿ ಬಿಡುಗಡೆಯಾಗಿದೆ.
ಶಾರೂಖ್ ಖಾನ್ ಸಂಪತ್ತು ಬರೋಬ್ಬರಿ 12,490 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2025 ರಲ್ಲಿ ಬಾಲಿವುಡ್ ನಲ್ಲಿ ಶಾರೂಖ್ ಖಾನ್ ಶ್ರೀಮಂತ ಸೆಲೆಬ್ರೆಟಿಯಾಗಿ ಹೊರಹೊಮ್ಮಿದ್ದಾರೆ.
ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿ-2025ರ ಪ್ರಕಾರ, ಎರಡನೇ ಸ್ಥಾನದಲ್ಲಿ ಜೂಹಿ ಚಾವ್ಲಾ ಇದ್ದಾರೆ. ಜೂಹಿ ಚಾವ್ಲಾ ಮತ್ತು ಅವರ ಕುಟುಂಬದ ಬಳಿ ಬರೋಬ್ಬರಿ 7,790 ಕೋಟಿ ರೂಪಾಯಿ ಸಂಪತ್ತು ಇದೆ.
ಹೃತಿಕ್ ರೋಷನ್ ಬಳಿ 2,160 ಕೋಟಿ ರೂಪಾಯಿ ಸಂಪತ್ತು ಇದ್ದು ಮೂರನೇ ಸ್ಥಾನದಲ್ಲಿದ್ದಾರೆ.
ಕರಣ್ ಜೋಹರ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಐದನೇ ಸ್ಥಾನದಲ್ಲಿದ್ದಾರೆ.
ಕರಣ್ ಜೋಹರ್ ಬಳಿ 1,880 ಕೋಟಿ ರೂಪಾಯಿ ಸಂಪತ್ತು ಇದೆ. ಇನ್ನೂ ಅಮಿತಾಬ್ ಬಚ್ಚನ್ ಅಂಡ್ ಫ್ಯಾಮಿಲಿ ಬಳಿ 1630 ಕೋಟಿ ರೂಪಾಯಿ ಸಂಪತ್ತು ಇದೆ.
ಶಾರೂಖ್ ಖಾನ್, ಜೂಹಿ ಚಾವ್ಲಾ ಮತ್ತು ಪತಿ ಹಾಗೂ ಹೃತಿಕ್ ರೋಷನ್
2024 ರಲ್ಲಿ ಹೂರನ್ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಾರ, ಶಾರೂಖ್ ಖಾನ್ ಬಳಿ 2024 ರಲ್ಲಿ 7,300 ಕೋಟಿ ರೂಪಾಯಿ ಸಂಪತ್ತು ಇತ್ತು. ಆದರೇ, ಒಂದೇ ವರ್ಷದಲ್ಲಿ ಶಾರೂಖ್ ಖಾನ್ ಸಂಪತ್ತು 7,300 ಕೋಟಿ ರೂಪಾಯಿಯಿಂದ 12,490 ಕೋಟಿ ರೂಪಾಯಿಗೆ ಏರಿಕೆಯಾಗಿರುವುದು ವಿಶೇಷ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.