ಮದುವೆ ಎಂಗೇಜ್ ಮೆಂಟ್ ಮಾಡಿಕೊಂಡ ಗಿಚ್ಚಿ ಗಿಲಿಗಿಲಿ ಶೋನ ಶಿವು ಮತ್ತು ಮಾನಸ

ಗಿಚ್ಚಿ ಗಿಲಿ ಗಿಲಿ ಶೋನ ಶಿವು ಮತ್ತು ಮಾನಸ ಇಷ್ಟು ದಿನ ಫ್ರೆಂಡ್ಸ್ ಆಗಿದ್ದರು. ಆದರೇ, ಈಗ ಉಳಿದ ಜೀವನವನ್ನು ಜೊತೆಯಾಗಿ ಕಳೆಯಲು ನಿರ್ಧರಿಸಿದ್ದಾರೆ. ಇಬ್ಬರು ಮದುವೆಯಾಗಲು ನಿರ್ಧರಿಸಿದ್ದು ಇಂದು ಮದುವೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

author-image
Chandramohan
Gichhi gilli gilli shivu and manasa02
Advertisment
  • ಇಂದು ಮದುವೆ ಎಂಗೇಜ್ ಮೆಂಟ್ ಮಾಡಿಕೊಂಡ ಶಿವು- ಮಾನಸ

ಗಿಚ್ಚಿ ಗಿಲಿಗಿಲಿ ಕಾಮಿಡಿ ಕಾರ್ಯಕ್ರಮದ  ಸೂಪರ್ ಜೋಡಿಯೊಂದು ಹಸೆಮಣೆ ಏರಲು ಸಜ್ಜಾಗಿದೆ. ಅದಕ್ಕಾಗಿ ಇಂದು ಬೆಂಗಳೂರಿನಲ್ಲಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಹುಡುಗಿ ಎದುರು ಹುಡುಗ ಮಂಡಿಯೂರಿ ಕುಳಿತು ರಿಂಗ್ ಅನ್ನು ಮನದನ್ನೆಗೆ ತೊಡಿಸಿದ್ದಾರೆ. ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಅಂತ ನೀವು ಯೋಚಿಸುತ್ತಿರಬಹುದು. ಬೇರೆ ಯಾರ ಬಗ್ಗೆಯೂ ಅಲ್ಲ. ಗಿಚ್ಚಿ ಗಿಲಿಗಿಲಿ ಎಪಿಸೋಡ್‌ನ ಶಿವು ಮತ್ತು ಮಾನಸ ಬಗ್ಗೆ.  ಇಬ್ಬರು ಒಟ್ಟಿಗೆ ನಟಿಸಿ, ನೇಮ್ ಫೇಮ್ ಗಳಿಸಿದ್ದರು.  ನಾವಿಬ್ಬರೂ ಫ್ರೆಂಡ್ಸ್ ಅಂತ ಎಲ್ಲ ಕಡೆ ಓಡಾಡಿಕೊಂಡು ಇದ್ದರು.  ನಮ್ಮ ನಡುವೆ ಏನಿಲ್ಲ, ಏನಿಲ್ಲ ಅಂತಾನೇ ಎಲ್ಲ ಕಡೆ ಹೇಳುತ್ತಿದ್ದರು.
ಆದರೇ, ಇಂದು ಜೊತೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿ ಮದುವೆಯ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಶಿವು ಮತ್ತು ಮಾನಸ ಎಂಗೇಜ್ ಮೆಂಟ್ ನಡೆದಿದೆ.  
ಮಾನಸಗೆ ಶಿವು ಎಂಗೇಜ್ ಮೆಂಟ್ ರಿಂಗ್ ತೊಡಿಸಿದ್ದಾರೆ. ಇಬ್ಬರು ಸಂಬಂಧಿಕರು, ಸ್ನೇಹಿತರ ಮುಂದೆ ಮದುವೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. 
ಅದರ ಪೋಟೋಗಳು ಇಲ್ಲಿವೆ ನೋಡಿ. 

Gichhi gilli gilli shivu and manasa02

gicchi gili gili shivu gicchi gili gili manasa
Advertisment