/newsfirstlive-kannada/media/media_files/2025/10/17/suhana-sayeed-and-nitin-marriage-2025-10-17-13-08-14.jpg)
ಕುವೆಂಪು ಮಂತ್ರ ಮಾಂಗಲ್ಯ ವಿವಾಹವಾದ ಸುಹನಾ- ನಿತಿನ್ ಜೋಡಿ
- ಕುವೆಂಪು ಮಂತ್ರ ಮಾಂಗಲ್ಯ ವಿವಾಹವಾದ ಸುಹನಾ- ನಿತಿನ್ ಜೋಡಿ
- ಬೆಂಗಳೂರಿನ ಖಾಸಗಿ ರೆಸಾರ್ಟ್ ನಲ್ಲಿ ವಿವಾಹವಾದ ಸುಹಾನಾ ಸೈಯ್ಯದ್- ನಿತಿನ್ ಜೋಡಿ
ನೀನೇ ರಾಮಾ, ನೀನೇ ಶಾಮಾ ಎಂದು ಜೀ ಕನ್ನಡ ಚಾನಲ್ ನಲ್ಲಿ ಸರಿಗಮಪ ಹಾಡು ಹಾಡುತ್ತಾ ಖ್ಯಾತಿ ಗಳಿಸಿದ್ದ ಸುಹಾನಾ ಸೈಯ್ಯದ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿತಿನ್ ಎಂಬ ಯುವಕನನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಮಂತ್ರಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಖಾಸಗಿ ರೆಸಾರ್ಟ್ ನಲ್ಲಿ ಸುಹಾನಾ ಸೈಯ್ಯದ್ ಮತ್ತು ನಿತಿನ್ ಪರಸ್ಪರ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವಿವಾಹಕ್ಕೆ ನಿತಿನ್ - ಸುಹಾನಾ ಸೈಯ್ಯದ್ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರು.
ಮುಸ್ಲಿಂ ಧರ್ಮದ ಸುಹಾನಾ ನೀನೇ ರಾಮಾ , ನೀನೇ ಶಾಮಾ ಎಂದು ರಾಮನನ್ನು ಸ್ತುತಿಸುವ ಹಾಡು ಹಾಡಿದ್ದು ಮುಸ್ಲಿಂರ ವಿರೋಧಕ್ಕೆ ಕಾರಣವಾಗಿ ವಿವಾದಕ್ಕೂ ಕಾರಣವಾಗಿತ್ತು. ಆದರೇ, ಈಗ ಆ ಎಲ್ಲ ವಿರೋಧಗಳನ್ನು ಮೆಟ್ಟಿ ನಿಂತು ಹಿಂದೂ ಹುಡುಗ ನಿತಿನ್ ನನ್ನು ಸುಹಾನಾ ಪ್ರೇಮ ವಿವಾಹವಾಗಿದ್ದಾರೆ.
/filters:format(webp)/newsfirstlive-kannada/media/media_files/2025/10/16/suhaana-syed-1-2025-10-16-14-30-25.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.