/newsfirstlive-kannada/media/media_files/2025/08/27/ganesha-chaturthi-2025-08-27-19-22-16.jpg)
/newsfirstlive-kannada/media/media_files/2025/08/27/upendra4-2025-08-27-19-17-07.jpg)
ಇಂದು ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆ ಮನಗಳಲ್ಲೂ ವಿಘ್ನ ನಿವಾರಕನ ಆರಾಧನೆ ಜೋರಾಗಿದ್ದು, ಬೆಂಗಳೂರಿನ ದೊಡ್ಡ ಗಣೇಶ ದೇಗುಲದಲ್ಲಿ ಹಬ್ಬರ ಸಡಗರ ಕಳೆಗಟ್ಟಿದೆ.
/newsfirstlive-kannada/media/media_files/2025/08/27/upendra3-2025-08-27-19-17-07.jpg)
ಮತ್ತೊಂದು ಕಡೆ ಸ್ಯಾಂಡಲ್ವುಡ್ ಸ್ಟಾರ್ಗಳು ತಮ್ಮ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ.
/newsfirstlive-kannada/media/media_files/2025/08/27/upendra2-2025-08-27-19-17-07.jpg)
ರೋರಿಂಗ್ ಸ್ಟಾರ್ ಶ್ರೀಮುರಳಿ, ನಟಿ ಅಮೂಲ್ಯ, ರಾಕಿಂಗ್ ಸ್ಟಾರ್ ಯಶ್, ಶ್ರುತಿ ಮಗಳು ಗೌರಿ, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಸಾಕಷ್ಟು ಸ್ಟಾರ್ಗಳ ಮನೆಯಲ್ಲಿ ಗಣೇಶ ಹಬ್ಬವನ್ನ ಆಚರಣೆ ಮಾಡಿದ್ದಾರೆ.
/newsfirstlive-kannada/media/media_files/2025/08/27/upendra1-2025-08-27-19-17-07.jpg)
ಪ್ರತಿ ವರ್ಷದಂತೆ ಈ ವರ್ಷ ಕೂಡ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪ್ರೇಂದ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ.
/newsfirstlive-kannada/media/media_files/2025/08/27/upendra-2025-08-27-19-17-07.jpg)
ನಟಿ ಪ್ರಿಯಾಂಕ ಉಪೇಂದ್ರ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಮತ್ತೇ ಉಪೇಂದ್ರ ಅವರು ಹಳದಿ ಬಣ್ಣದ ಶಾಲ್ ಧರಿಸಿಕೊಂಡು ಪೂಜೆ ಮಾಡಿದ್ದಾರೆ.
/newsfirstlive-kannada/media/media_files/2025/08/27/radhika-pandit-daughter1-2025-08-27-19-17-07.jpg)
ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ತವರು ಮನೆಯಲ್ಲಿ ಗೌರಿ - ಗಣೇಶ ಹಬ್ಬವನ್ನ ಆಚರಿಸಿದ್ದಾರೆ. ಹಬ್ಬ ಪ್ರಯುಕ್ತ ತಾಯಿಯ ಮನೆಯಲ್ಲಿ ಪೂಜೆ ಮಾಡಿ, ಹಬ್ಬದೂಟ ಸವಿದಿದ್ದಾರೆ.
/newsfirstlive-kannada/media/media_files/2025/08/27/radhika-pandit-daughter-2025-08-27-19-17-07.jpg)
ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಮುದ್ದಾದ ಮಕ್ಕಳಾದ ಐರಾ ಮತ್ತು ಯಥರ್ವ್ ಗಣೇಶನಿಗೆ ಆರತಿ ಬೆಳಗಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.
/newsfirstlive-kannada/media/media_files/2025/08/27/gowri2-2025-08-27-19-35-19.jpg)
ನಟಿ ಶ್ರುತಿ ಮಗಳು ಗೌರಿ, ಗಣೇಶ ಹಬ್ಬದಂದು ವಿಡಿಯೋ ಶೇರ್ ಮಾಡಿ, ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು, ಗಣೇಶನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ, ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ ಎಂದು ವಿಶ್ ಮಾಡಿದ್ದಾರೆ.
/newsfirstlive-kannada/media/media_files/2025/08/27/amulya-2025-08-27-19-35-19.jpg)
ಇತ್ತ ನಟಿ ಅಮೂಲ್ಯ ಹಾಗೂ ಇಬ್ಬರು ಮುದ್ದಾದ ಮಕ್ಕಳು ಅಥರ್ವ್ ಮತ್ತು ಆಧವ್ ಕೂಡ ಗ್ರ್ಯಾಂಡ್ ಆಗಿ ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ.
/newsfirstlive-kannada/media/media_files/2025/08/27/srimuruli-2025-08-27-19-35-19.jpg)
ಸ್ಯಾಂಡಲ್ವುಡ್ ನಟ ಶ್ರೀಮುರಳಿ ಅವರ ಮನೆಯಲ್ಲಿ ಸರಳವಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡಲಾಗಿದೆ. ಎಲೆಯಲ್ಲಿ ಗಣಪನನ್ನ ತಯಾರಿಸಿ ಖುಷಿಪಟ್ಟಿದ್ದಾರೆ.