/newsfirstlive-kannada/media/media_files/2025/08/28/anushree-marriage-8-2025-08-28-19-10-02.jpg)
/newsfirstlive-kannada/media/media_files/2025/08/28/anushree-marriage-4-2025-08-28-19-11-13.jpg)
ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ ತುಳಿದಿದ್ದಾರೆ.
/newsfirstlive-kannada/media/media_files/2025/08/28/anushree-marriage-6-2025-08-28-19-11-33.jpg)
ಅನುಶ್ರೀ.. ಕನ್ನಡ ಕಿರುತೆರೆಯ ಚಿರ ಪರಿಚಿತ ಹೆಸರು. ಅನುಶ್ರೀ ಗೊತ್ತಿಲ್ಲದಂತ ಟಿ.ವಿ ವೀಕ್ಷಕರೇ ಇಲ್ಲ. ಆ ಮಟ್ಟಿಗಿನ ಜನಪ್ರಿಯತೆ ಗಳಿಸಿರೋ ನಿರೂಪಕಿ. ಹರಳು ಉರಿದಂತ ತಮ್ಮ ಮಾತುಗಳಿಂದ ಇಡೀ ಶೋವನ್ನು, ವೇದಿಕೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅನುಶ್ರೀಗಿದೆ. ಇಂತಹ ಅನುಶ್ರೀಗೆ ಹೋದಲ್ಲಿ ಬಂದಲ್ಲಿ, ಒಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳಿ, ಕೇಳಿ ಅನುಶ್ರೀಗೂ. ಮದುವೆಯಾಗೋ ಮನಸ್ಸಾಯ್ತು ಅನ್ನಿಸುತ್ತೆ. ಕೊನೆಗೂ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
/newsfirstlive-kannada/media/media_files/2025/08/28/anushree-marriage-2-2025-08-28-19-12-03.jpg)
ಅನುಶ್ರೀ ಮದುವೆ ವಿಚಾರವಾಗಿ ಅಂತೆ-ಕಂತೆ ವಿಚಾರಗಳು ಬಂದಾಗಲೇ ಅನುಶ್ರೀಗೆ ಶುಭ ಹಾರೈಕೆಗಳ ಸುರಿಮಳೆ ಹರಿದಿತ್ತು. ನೆಚ್ಚಿನ ನಿರೂಪಕಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ರು. ಅದ್ರಲ್ಲೂ ಹುಡುಗನ ಫೋಟೊ ರಿವೀಲ್ ಆದ ಬಳಿಕ ಹುಡುಗ ಯಾರು..? ಹುಡುಗನ ಹಿನ್ನೆಲೆ ಏನು..? ಅನ್ನೋ ಹುಡುಕಾಟ ಶುರುವಾಗಿದ್ದವು.
/newsfirstlive-kannada/media/media_files/2025/08/28/anushree-marriage-2025-08-28-19-12-23.jpg)
ಫೈನಲಿ, ಇಂದು ಪ್ರೀತಿಯ ಗೆಳೆಯ ರೋಷನ್ ಜೊತೆಗೆ ಅನುಶ್ರೀ ಹಸೆಮಣೆ ಏರಿದರು. ಕನಕಪುರ ರಸ್ತೆಯ ಕಗ್ಗಲಿಪುರ ಬಳಿಯ ಖಾಸಗಿ ಸ್ಥಳದಲ್ಲಿ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಈ ಮದುವೆಗೆ ಅನುಶ್ರೀ ಆಪ್ತರು, ಕುಟುಂಬಸ್ಥರು ಹಾಗೂ ಸ್ಯಾಂಡಲ್ವುಡ್ ತಾರೆಯರು ಭಾಗಿಯಾಗಿದ್ರು.
/newsfirstlive-kannada/media/media_files/2025/08/28/anushree-and-roshan-1-2025-08-28-17-18-55.jpg)
ಅನುಶ್ರೀಯನ್ನು ನಿರೂಪಕಿ ಅನ್ನೋದಕ್ಕಿಂತ ಹೆಚ್ಚಾಗಿ, ಸ್ನೇಹಿತೆಯಂತೆ ಕಂಡವರು ಜಾಸ್ತಿ. ಹೀಗಾಗಿಯೇ ಮದುವೆಗೆ ಸ್ಯಾಂಡಲ್ವುಡ್ ತಾರೆಯರು ಕುಟುಂಬಸ್ಥರಾಗಿ ಆಗಮಿಸಿದ್ರು. ಶಿವಣ್ಣ, ಡಾಲಿ ಧನಂಜಯ, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ತರುಣ್ ಸುಧೀರ್, ಶರಣ್, ಪ್ರೇಮ್, ವಿಜಯ್ ರಾಘವೇಂದ್ರ. ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ರು.
/newsfirstlive-kannada/media/media_files/2025/08/28/anushree-marriage-9-2025-08-28-19-14-28.jpg)
ಮದುವೆ ಸಮಾರಂಭದಲ್ಲಿ ತುಂಬಾ ಹೊತ್ತು ಕಾಲ ಕಳೆದ ಶಿವಣ್ಣ, ಮದುವೆಯ ನಂತರ ಅನುಶ್ರೀ ಮದುವೆಯ ವಿಚಾರವಾಗಿ ಮಾತನಾಡಿದ್ರು. ಅನುಶ್ರೀ ನಮ್ಮ ಮನೆಯ ಸದಸ್ಯೆ ಅಂತಾ ಪ್ರೀತಿಯಿಂದ ಮಾತನಾಡಿದ್ರು.
/newsfirstlive-kannada/media/media_files/2025/08/28/anushree-marriage-10-2025-08-28-19-15-31.jpg)
ಮದುವೆಯ ನಂತರ ಮಾಧ್ಯಮಗಳೊಂದಿಗೆ ನವ ದಂಪತಿ ಪ್ರೀತಿಯಿಂದ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ರು. ಅಲ್ಲದೇ ತಮ್ಮ ಲವ್ ಕಂ ಅರೇಂಜ್ಡ್ ಮ್ಯಾರೇಜ್ ಮಾಹಿತಿಯನ್ನು ಪ್ರೀತಿಯಿಂದ ಹಂಚಿಕೊಂಡ್ರು.
/newsfirstlive-kannada/media/media_files/2025/08/28/anushree-marriage-11-2025-08-28-19-16-48.jpg)
ಒಟ್ಟಾರೆ ಅನುಶ್ರೀ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಕಾರ್ಯಕ್ರಮ ನಿರೂಪಣೆಯಂತೆ. ಜೀವನದ ನಿರೂಪಣೆಯೂ ಯಶಸ್ವಿ ಆಗಲಿ ಅನ್ನೋದು ಅಭಿಮಾನಿಗಳ ಹಾರೈಕೆ ಆಗಿದೆ.