/newsfirstlive-kannada/media/media_files/2025/08/17/su-from-so4-2025-08-17-12-40-51.jpg)
ರಾಜ್ ಬಿ ಶೆಟ್ಟಿ ನಟನೆ, ನಿರ್ಮಾಣದ ʻಸು ಪ್ರಮ್ ಸೋʼ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡಿದೆ. ಜೊತೆಗೆ ಹೊಸ ಹೊಸ ದಾಖಲೆಗಳನ್ನ ಬರೆದಿದೆ. ಸಿನಿಮಾವನ್ನ ಥಿಯೇಟರ್‌ನಲ್ಲಿ ನೋಡಿ ಮತ್ತೊಮ್ಮೆ ಮನೆಯಲ್ಲಿ ಕೂತು ನೋಡೋದು ಯಾವಾಗ ಅಂತ ಪ್ರೇಕ್ಷಕರು ಕಾದು ಕುಳಿತಿದ್ರು. ಸದ್ಯ ಇದೀಗ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಥಿಯೇಟರ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿ, ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ದಾಟಿರೋ ಸು ಫ್ರಮ್ ಸೋ, ಇದೀಗ ಓಟಿಟಿ ವೇದಿಕೆಯಲ್ಲೂ ಮ್ಯಾಜಿಕ್ ಮಾಡೋಕೆ ಮುಂದಾಗ್ತಿದೆ. ಇವತ್ತಿನಿಂದ ಓಟಿಟಿ ವೇದಿಕೆಯಲ್ಲೂ ಸು ಫ್ರಮ್ ಸೋ ಸಿನಿಮಾ ಪ್ರಸಾರವಾಗಲಿದೆ.
2025ರ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಗೆಲುವು ಸಾಧಿಸಿದ ಸಿನಿಮಾವೆಂದರೆ ʻಸು ಫ್ರಮ್ ಸೋʼ. ಜುಲೈ 25ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆದ ಈ ಸಿನಿಮಾವು ಕರಾವಳಿಯ ಸೊಗಡು ಮತ್ತು ಕಲಾವಿದರ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದೆ. ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸು ಫ್ರಮ್ ಸೋ, ನಂತರದಲ್ಲಿ ಮಲಯಾಳಂ, ತೆಲುಗು, ತಮಿಳಿನಲ್ಲೂ ಭರ್ಜರಿ ಯಶಸ್ಸು ಗಳಿಸಿತ್ತು.
‘ಜಿಯೋ ಹಾಟ್‌ಸ್ಟಾರ್‌ನಲ್ಲಿ ʻಸು ಫ್ರಮ್ ಸೋʼ ಸ್ಟ್ರೀಮಿಂಗ್’
ಇಂದಿನಿಂದ ಓಟಿಟಿಯಲ್ಲಿ ಸು ಫ್ರಮ್ ಸೋ ಸ್ಟ್ರೀಮ್ ಆಗುತ್ತಿದ್ದು, ಜೀಯೋ ಹಾಟ್ ಸ್ಟಾರ್ನಲ್ಲಿ ಸಿನಿಮಾ ಪ್ರಸಾರವಾಗಲಿದೆ.