/newsfirstlive-kannada/media/media_files/2026/01/07/ramya-criticise-supreme-court-opinion-on-stray-dogs-2026-01-07-15-44-26.jpg)
ಸುಪ್ರೀಂಕೋರ್ಟ್ ಅಭಿಪ್ರಾಯ ಟೀಕಿಸಿದ ನಟಿ ರಮ್ಯಾ
ಎಲ್ಲ ಪುರುಷರನ್ನ ಜೈಲಿಗೆ ಹಾಕಿ ಎಂದು ನಟಿ ರಮ್ಯಾ ಕಿಡಿಕಾರಿದ್ದಾರೆ. ಪುರುಷನು ಯಾವಾಗ ರೇಪ್ ಮಾಡ್ತಾನೋ? ಯಾವಾಗ ಕೊಲೆ ಮಾಡ್ತಾನೋ ಗೊತ್ತಿಲ್ಲ..! ಹಾಗಾಗಿ, ಎಲ್ಲ ಪುರುಷರನ್ನ ಜೈಲಿಗೆ ಹಾಕಲಾಗುತ್ತಾ? ಎಂದು ರಮ್ಯಾ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ.
ಬೀದಿನಾಯಿಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ನಟಿ ಹಾಗೂ ರಾಜಕಾರಣಿ ರಮ್ಯಾ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೀದಿನಾಯಿಗಳ ಹಾವಳಿ ಕುರಿತು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತೋ ಹೇಳಲು ಸಾಧ್ಯವಿಲ್ಲ. ಬೀದಿನಾಯಿಗಳ ಮನಸ್ಸು ಯಾರಿಗೂ ಅರ್ಥವಾಗಲ್ಲ. ಯಾವಾಗ ಕಚ್ಚುವುದು, ಯಾವಾಗ ಕಚ್ಚುವುದಿಲ್ಲ ಎಂದು ಹೇಳಲಾಗಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.
/filters:format(webp)/newsfirstlive-kannada/media/media_files/2026/01/07/ramya-criticise-supreme-court-opinion-on-stray-dogs-1-2026-01-07-15-45-34.jpg)
ಈ ಅಭಿಪ್ರಾಯಕ್ಕೆ ನಟಿ ಹಾಗೂ ರಾಜಕಾರಣಿ ರಮ್ಯಾ ಈ ರೀತಿಯಾಗಿ ಕಿಡಿಕಾರಿದ್ದಾರೆ. ಪುರುಷನ ಮನಸ್ಸು ಅರ್ಥಮಾಡಿಕೊಳ್ಳಲು ಆಗಲ್ಲ. ಪುರುಷನು ಯಾವಾಗ ಅತ್ಯಾಚಾರ ಮಾಡ್ತಾನೋ? ಅಥವಾ ಯಾವಾಗ ಕೊಲೆ ಮಾಡ್ತಾನೋ ಗೊತ್ತಿಲ್ಲ. ಹಾಗಾಗಿ, ಎಲ್ಲಾ ಪುರುಷರನ್ನ ಜೈಲಿಗೆ ಹಾಕಲಾಗುತ್ತಾ ಅಂತ ರಮ್ಯಾ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಟೀಕಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us