/newsfirstlive-kannada/media/media_files/2026/01/27/kavya-gowda-family-fight-1-2026-01-27-12-32-15.jpg)
ಕಾವ್ಯಗೌಡ ಹಾಗೂ ಪತಿ ಸೋಮಶೇಖರ್
ಕಿರುತೆರೆ ನಟಿ ಕಾವ್ಯಗೌಡ ಕುಟುಂಬದ ಕಲಹ ಈಗ ಬೀದಿಗೆ ಬಂದಿದೆ. ನಟಿ ಕಾವ್ಯಾಗೌಡ, ಸೋಮಶೇಖರ್ ಎಂಬುವವರನ್ನು ವಿವಾಹವಾಗಿದ್ದಾರೆ. ಸೋಮಶೇಖರ್ ಗೆ ನಂದೀಶ್ ಎಂಬ ಓರ್ವ ಸೋದರ ಇದ್ದಾರೆ. ನಂದೀಶ್, ಪ್ರೇಮಾ ಎಂಬುವವರನ್ನು ವಿವಾಹವಾಗಿದ್ದಾರೆ. ಒಂದೇ ಮನೆಯಲ್ಲಿ ಸೋದರರಾದ ಸೋಮಶೇಖರ್ ಹಾಗೂ ನಂದೀಶ್ ವಾಸ ಇದ್ದರು. ಆದರೇ, ಓರಗಿತ್ತಿಯರಾದ ಕಾವ್ಯಾಗೌಡ ಮತ್ತು ಪ್ರೇಮಾ ನಡುವೆ ಸಾಕಷ್ಟು ವಿಚಾರಗಳಿಗೆ ಮನಸ್ತಾಪ ಆಗಿತ್ತು. ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಗಲಾಟೆ ಆಗುತ್ತಿತ್ತು. ನಿನ್ನೆ ಮನೆಗೆ ಕಾವ್ಯಾಗೌಡ ಹಾಗೂ ಪ್ರೇಮಾ ಸಂಬಂಧಿಕರು ಬಂದಿದ್ದರು. ಈ ವೇಳೆ ಮನೆಯಲ್ಲಿ ಗಲಾಟೆಯಾಗಿದೆ.
ನಟಿ ಕಾವ್ಯ ಗೌಡ ಹಾಗೂ ಪತಿ ಸೋಮಶೇಖರ್ ಮೇಲೆ ನಿನ್ನೆ ಮನೆಯಲ್ಲಿ ಹಲ್ಲೆ ನಡೆಸಲಾಗಿದೆ. ಸೋಮಶೇಖರ್ ಅವರ ಅತ್ತಿಗೆಯ ತಂದೆಯಿಂದ ಹಲ್ಲೆ… ನಡೆದಿದೆ. ನಟಿ ಕಾವ್ಯ ಗೌಡ ಗಳಿಸಿರುವ ಜನಪ್ರಿಯತೆಯನ್ನ ಸಹಿಸದೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಈ ಗಲಾಟೆಯ ಹಿಂದೆ ಮನೆಯ ಆಸ್ತಿ ಹಂಚಿಕೆಯ ಗಲಾಟೆಯೂ ಇರುವ ಸಾಧ್ಯತೆಯೂ ಇದೆ. ಪ್ರೇಮಾ ಸಂಬಂಧಿಕರು ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. … ನಿನ್ನನ್ನು ರೇಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿ ಹಲ್ಲೆ…ಮಾಡಿದ್ದಾರೆ. ನಟಿ ಕಾವ್ಯ ಗೌಡ ಮೇಲೂ ಹಲ್ಲೆ ನಡೆದಿದೆ. ಕಾವ್ಯಾಗೌಡ ಪತಿ ಸೋಮಶೇಖರ್‌ಗೆ ಚಾಕುವಿನಿಂದ ಇರಿದು ಬೆದರಿಕೆ…ಹಾಕಲಾಗಿದೆ. ಸದ್ಯಕ್ಕೆ ಕಾವ್ಯಾಗೌಡ ಹಾಗೂ ಪತಿ ಸೋಮಶೇಖರ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ…ಪಡೆಯುತ್ತಿದ್ದಾರೆ. ಕಾವ್ಯ ಗೌಡ ಅಕ್ಕ ಭವ್ಯ ಗೌಡ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪತಿಯ ಅತ್ತಿಗೆಯ ತಂದೆ ರವಿಕುಮಾರ್ ಎಂಬಾತ ರೇಪ್ ಮಾಡ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಕಾವ್ಯಾಗೌಡ ಆರೋಪ ಮಾಡಿದ್ದಾರೆ. ಪ್ರೇಮ, ನಂದೀಶ್, ಪ್ರಿಯಾ, ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು…ನೀಡಿದ್ದಾರೆ. ಮತ್ತೊಂದೆಡೆ ಕಾವ್ಯ ಗೌಡ , ಪತಿ ಸೋಮಶೇಖರ್, ಕಾವ್ಯ ಅಕ್ಕ ಭವ್ಯಾಗೌಡ ವಿರುದ್ಧ ಕೂಡ ಪ್ರೇಮ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾವ್ಯ ಗೌಡ ವಿರುದ್ಧ ಪ್ರೇಮಾಳಿಂದ ಪ್ರತಿ ದೂರು ದಾಖಲಾಗಿದೆ. ಕಾವ್ಯ, ಸೋಮಶೇಖರ್, ಭವ್ಯ ಗೌಡ ಸೇರಿ ಇತರರ ವಿರುದ್ಧ ದೂರು…ನೀಡಿದ್ದಾರೆ. ಜನವರಿ 26 ರಂದು ಮಧ್ಯಾಹ್ನ ಮನೆಯಲ್ಲಿ ಪ್ರೇಮಾ, ನಂದೀಶ್ ಊಟ ಮಾಡುತ್ತಿದ್ದರು. ಈ ವೇಳೆ ಇದು ನಮ್ಮ ಮನೆ . ನೀವು ಹೊರಗೆ ಹೋಗಿ ಎಂದು ಕಾವ್ಯ ಹೇಳಿರೊದಾಗಿ ದೂರಿನಲ್ಲಿ ಉಲ್ಲೇಖ… ಮಾಡಿದ್ದಾರೆ. ಅಲ್ಲದೇ ಪ್ರೇಮಾ ತಂದೆ ರವಿಕುಮಾರ್ ಗೆ ಕರೆ ಮಾಡಿ ಧಮ್ಕಿ…ಹಾಕಿದ್ದಾರೆ. ಸಂಜೆ 6.30 ಕ್ಕೆ ಮನೆ ಬಳಿಗೆ ಪ್ರೇಮ ಸಹೋದರಿ ಕಸ್ತೂರಿ ಬಂದಿದ್ದರು. …ಈ ವೇಳೆ ಕಸ್ತೂರಿ ಮೇಲೆ ಕಾವ್ಯ ಹಾಗೂ ಸಂಬಂಧಿಕರು ಹಲ್ಲೆ ಮಾಡಿದ್ದಾರೆ. ಕಾವ್ಯ ಸಹೋದರಿ ಭವ್ಯಳಿಂದ ಪ್ರೇಮಾ ಹಾಗೂ ನಂದೀಶ್ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. … ಅಲ್ಲದೇ ಮಾಂಗಲ್ಯ ಸರವನ್ನು ಕಿತ್ತು ಹಾಕಿರುವುದಾಗಿ ಪ್ರೇಮಾ ನೀಡಿರುವ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
ಕಿರುತೆರೆ ನಟಿ ಕಾವ್ಯಗೌಡ ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದಾರೆ.
/filters:format(webp)/newsfirstlive-kannada/media/media_files/2026/01/27/kavya-gowda-family-fight-2026-01-27-12-28-08.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us