Advertisment

ದರ್ಶನ್ ಅಭಿನಯದ ಡೆವಿಲ್ ಟ್ರೈಲರ್​ ಔಟ್​; ಗಿಲ್ಲಿ ಖಡಕ್ ಡೈಲಾಗ್..! VIDEO

ದರ್ಶನ್ ನಟನೆಯ ಡೆವಿಲ್ ಸಿನಿಮಾದ ಟ್ರೈಲರ್ (Devil Trailer) ಬಿಡುಗಡೆ ಆಗಿದೆ. ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನ್ ಬರ್ತಿದ್ದೀನಿ ಚಿನ್ನ ಎಂಬ ಡೈಲಾಗ್ ಮೂಲಕ ದರ್ಶನ್ ಭರವಸೆ ಕೊಟ್ಟಿದ್ದಾರೆ. ಡಿಸೆಂಬರ್ 11 ರಂದು ಸಿನಿಮಾ ರಿಲೀಸ್ ಆಗುತ್ತಿದೆ.

author-image
Ganesh Kerekuli
Devil gilli (1)
Advertisment

ದರ್ಶನ್ ನಟನೆಯ ಡೆವಿಲ್ ಸಿನಿಮಾದ ಟ್ರೈಲರ್ (Devil Trailer) ಬಿಡುಗಡೆ ಆಗಿದೆ. ಸೂರ್ಯಂಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ, ನಾನ್ ಬರ್ತಿದ್ದೀನಿ ಚಿನ್ನ ಎಂಬ ಡೈಲಾಗ್ ಮೂಲಕ ದರ್ಶನ್ ಭರವಸೆ ಕೊಟ್ಟಿದ್ದಾರೆ. 

Advertisment

ಸಿನಿಮಾದಲ್ಲಿನ ದರ್ಶನ್ ಪಾತ್ರದ ಝೆಲಕ್ ಟ್ರೈಲರ್​ನಲ್ಲಿ ತೋರಿಸಲಾಗಿದೆ. ಅದ್ದೂರಿ ಮೇಕಿಂಗ್​ನ​ಲ್ಲಿ ಡೆವಿಲ್ ವಿಶ್ಯುವಲ್ ಟ್ರೀಟ್‌ ಇದೆ. ಸ್ಟೈಲೀಶ್ ಲುಕ್​ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಚಿತ್ರವು ಇದೇ ಡಿಸೆಂಬರ್ 11 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಟ್ರೈಲರ್​​ನಲ್ಲೂ ಗಿಲ್ಲಿ

ಬಿಗ್​ ಬಾಸ್​ ಮೂಲಕ ಭಾರೀ ಜನಪ್ರಿಯತೆ ಪಡೆದಿರುವ ಹಾಸ್ಯ ನಟ ಗಿಲ್ಲಿ ಕೂಡ ಡೆವಿಲ್ ಚಿತ್ರದಲ್ಲಿದ್ದಾರೆ. ಇವತ್ತು ರಿಲೀಸ್ ಆಗಿರುವ ಟ್ರೈಲರ್​​ನಲ್ಲೂ ಗಿಲ್ಲಿಯನ್ನು ತೋರಿಸಲಾಗಿದೆ. ಕಡಕ್ ಲುಕ್​​ನಲ್ಲಿ ಠಾಣೆಗೆ ಎಂಟ್ರಿ ಕೊಡುವ ಗಿಲ್ಲಿ, ಪೊಲೀಸ್ ಎದುರು ಕಾಲ್ಮೇಲೆ ಕಾಲು ಹಾಕಿ ಡೈಲಾಗ್ ಹೊಡೆದಿದ್ದಾರೆ. ಎಕ್ಸ್​ಕ್ಯೂಸ್​ ಮೀ ಪಿಸಿ.. ಚೂರು AC ಹಾಕಮ್ಮ.. ಲಾಟ್ ಆಫ್ ಸೆಕೆ ಅಂತಾ ಡೈಲಾಗ್ ಹೊಡೆದಿದ್ದಾರೆ. 

ನಾಳೆಯಿಂದ ಟಿಕೆಟ್ ಬುಕ್ಕಿಂಗ್

ಟ್ರೈಲರ್​ ರಿಲೀಸ್​ ಬೆನ್ನಲ್ಲೇ ಸಿನಿಮಾ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಡಿಸೆಂಬರ್ 11ರಂದು ಬೆಳಗ್ಗೆ 6.30ಕ್ಕೆ ಎಲ್ಲೆಡೆ ಸಿನಿಮಾ ಪ್ರದರ್ಶನ ಆರಂಭವಾಗಲಿದ್ದು, ಅಭಿಮಾನಿಗಳಿಗೆ ಅಂತಲೇ ಸ್ಪೆಷಲ್ ಶೋಗಳನ್ನು ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ನಾಳೆಯಿಂದಲೇ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗುತ್ತಿದೆ. 

Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Devil Movie darshan devil film Devil trailer
Advertisment
Advertisment
Advertisment