/newsfirstlive-kannada/media/media_files/2025/12/04/sangeeth-sagar-director-2025-12-04-10-19-03.jpg)
ಚಿಕ್ಕಮಗಳೂರು: ಸಿನಿಮಾ ಚಿತ್ರೀಕರಣ ವೇಳೆ ಹೃದಯಾಘಾತದಿಂದ ನಿರ್ದೇಶಕ ಮೃತಪಟ್ಟಿರುವ ಘಟನೆ ನಡೆದಿದೆ. ಸಂಗೀತ್ ಸಾಗರ್ ಮೃತ ನಿರ್ದೇಶಕ.
ಚಿಕ್ಕಮಗಳೂರಿನ ಹರಿಹರಪುರದಲ್ಲಿ ಚಿತ್ರೀಕರಣ ಮಾಡ್ತಿದ್ದಾಗ ಹೃದಯಾಘಾತವಾಗಿದೆ. ಕೂಡಲೇ ಶಿಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪ್ರಾಣಬಿಟ್ಟಿದ್ದಾರೆ. ಪಾತ್ರದಾರಿ ಸಿನಿಮಾ ಚಿತ್ರೀಕರಣ ಹಿನ್ನೆಲೆಯಲ್ಲಿ ಹರಿಹರಪುರಕ್ಕೆ ಬಂದಿದ್ದರು.
ಪಾತ್ರದಾರಿ ಸಿನಿಮಾದ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿ ಸಂಗೀತ್ ಸಾಗರ್ ಕೆಲಸ ಮಾಡ್ತಿದ್ದರು. ನಾಳೆ ಕುಂಬಳಕಾಯಿ ಶಾಸ್ತ್ರಮಾಡಿ ಕೊನೆಯ ಚೀತ್ರಿಕರಣ ಮಾಡಬೇಕಿತ್ತು. 20 ದಿನಗಳಿಂದ ಹರಿಹರಪುರ, ತೀರ್ಥಹಳ್ಳಿ ತಾಲೂಕು ಸುತ್ತಮುತ್ತ ಸಿನಿಮಾ ಚಿತ್ರೀಕರಣ ನಡೆದಿತ್ತು. ಕನ್ನಡಲ್ಲಿ ಸುಮಾರು 8ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಸಂಗೀತ್ ಸಾಗರ್, ಸಕಲೇಶಪುರದ ದೊಡ್ಡನಾಗರ ಮೂಲದವರಾಗಿದ್ದರು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us